Debit-Credit Cards: ಈ ಸ್ಥಳಗಳಲ್ಲಿ ಮಿಸ್ ಆಗಿಯೂ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಬೇಡಿ
ಇತ್ತೀಚಿನ ದಿನಗಳಲ್ಲಿ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳ ಬಳಕೆ ಹೆಚ್ಚಾಗಿದೆ. ಪಾವತಿಗಳಿಗಾಗಿ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳು ಅವಶ್ಯಕವೇ ಆದರೂ, ಕೆಲವು ಸ್ಥಳಗಳಲ್ಲಿ ಇವುಗಳ ಬಳಕೆ ನಿಮಗೆ ಭಾರೀ ನಷ್ಟವನ್ನು ಉಂಟು ಮಾಡಬಹುದು. ಹಾಗಿದ್ದರೆ, ಯಾವ ಸ್ಥಳಗಳಲ್ಲಿ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳನ್ನು ಬಳಕೆ ಮಾಡುವುದರಿಂದ ನಷ್ಟವಾಗುತ್ತದೆ ಎಂದು ತಿಳಿಯಿರಿ.
ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಹಾಕಿಸುವಾಗ ಕೈಯಲ್ಲಿ ಕ್ಯಾಶ್ ಇರಲೇಬೇಕು ಎನ್ನುವ ಅವಶ್ಯಕತೆ ಇಲ್ಲ. ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳಿದ್ದರೆ ಅಷ್ಟೇ ಸಾಕು. ಆದರೆ, ಪೆಟ್ರೋಲ್, ಗ್ಯಾಸ್ ಪಂಪ್ ಗಳಲ್ಲಿ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳನ್ನು ಬಲಸುವಾಗ 1% ಸೇವಾ ಶುಲ್ಕ, 7.2% ಜಿಎಸ್‌ಟಿ ಕಡಿತವಾಗುತ್ತದೆ. ಹಾಗಾಗಿ, ಸಾಧ್ಯವಾದಷ್ಟು ಈ ಸ್ಥಳಗಳಲ್ಲಿ ನಿಮ್ಮ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳ ಬಳಕೆಯನ್ನು ತಪ್ಪಿಸಿ.
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಸುರಕ್ಷಿತವಲ್ಲದ ಆನ್ಲೈನ್ ಶಾಪಿಂಗ್ ಸೈಟ್ಗಳಲ್ಲಿ ಶಾಪಿಂಗ್ ಮಾಡುವಾಗ ನಿಮ್ಮ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಬೇಡಿ. ಇದರಿಂದ ಹ್ಯಾಕರ್ ಗಳು ನಿಮ್ಮ ಖಾತೆಯನ್ನು ಖಾಲಿ ಮಾಡಬಹುದು.
ಬೇಕೆಂದಾಗ ಖಾತೆಯಲ್ಲಿರುವ ಹಣ ಪಡೆಯಲು ಎಟಿಎಂ ತುಂಬಾ ಪ್ರಯೋಜನಕಾರಿ. ಆದರೆ, ನೀವು ಪಾವತಿ ಟರ್ಮಿನಲ್ ಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಹಣ ವಿತ್ ಡ್ರಾ ಮಾಡಿದರೆ ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. ಏಕೆಂದರೆ, ಇಂತಹ ಸ್ಥಳಗಳಲ್ಲಿ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಸೆಲ್ ಫೋನ್ ಚಾರ್ಜಿಂಗ್ ಸ್ಟೇಷನ್ಗಳಲ್ಲಿಯೂ ಸಹ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳನ್ನು ಬಳಸದಿದ್ದರೆ ಒಳ್ಳೆಯದು.
ಯಾರಾದರೂ ಚಾರಿಟಿ ನಿಧಿ ಸಂಗ್ರಹಕ್ಕಾಗಿ ನಿಮ್ಮನ್ನು ಸಂಪರ್ಕಿಸಿದ ಸಂದರ್ಭದಲ್ಲಿ ಅಪ್ಪಿತಪ್ಪಿಯೂ ಸಹ ನಿಮ್ಮ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವುದನ್ನು ತಪ್ಪಿಸಿ.
ಫೋನ್ ನಲ್ಲಿ ಬೇರೆಯವರೊಂದಿಗೆ ಮಾತನಾಡುವಾಗ ಮಿಸ್ ಆಗಿಯೂ ಕೂಡ ನಿಮ್ಮ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳ ಮಾಹಿತಿಯನ್ನು ಹಂಚಿಕೊಳ್ಳಬೇಡಿ.
ಸಾರ್ವಜನಿಕ ಬ್ರೋಸಿಂಗ್ ಸೆಂಟರ್ ಗಳಲ್ಲಿ ಡೆಸ್ಕ್ ಟಾಪ್ ನಲ್ಲಿ ನೀವು ಯಾವುದೇ ರೀತಿಯ ಪಾವತಿಗಳನ್ನು ಮಾಡುವಾಗ ನಿಮ್ಮ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳನ್ನು ಬಳಸದಿದ್ದರೆ ಉತ್ತಮ.