ಏಪ್ರಿಲ್ ಒಂದರಿಂದ ಈ ಎಲ್ಲಾ ನಿಯಮಗಳಲ್ಲಿ ಬದಲಾವಣೆ, ನಿಮ್ಮ ಜೇಬಿನ ಮೇಲಾಗುವ ಪರಿಣಾಮಗಳೇನು ತಿಳಿಯಿರಿ

Tue, 29 Mar 2022-5:00 pm,

ಆಟೋ ಕ್ಷೇತ್ರದ ಹಲವು ದೊಡ್ಡ ಕಂಪನಿಗಳು ತಮ್ಮ ವಾಹನಗಳನ್ನು ದುಬಾರಿ ಮಾಡಲು ಹೊರಟಿವೆ. ಟಾಟಾ ಮೋಟಾರ್ಸ್ ತಮ್ಮ ವಾಣಿಜ್ಯ ವಾಹನಗಳ ಬೆಲೆಯನ್ನು 2 ರಿಂದ 2.5% ರಷ್ಟು ಹೆಚ್ಚಿಸುತ್ತಿದೆ ಎಂದು ಹೇಳಿದೆ. ಮತ್ತೊಂದೆಡೆ, ಮರ್ಸಿಡಿಸ್-ಬೆನ್ಜ್ ಇಂಡಿಯಾ ವಾಹನಗಳ ಬೆಲೆಯನ್ನು 3% ಹೆಚ್ಚಿಸುವುದಾಗಿ ಹೇಳಿದೆ. ಇದರ ಹೊರತಾಗಿ ಟೊಯೊಟಾವು 4% ವರೆಗೆ ಬೆಲೆಗಳನ್ನು ಹೆಚ್ಚಿಸಲಿದೆ ಮತ್ತು BMW ತನ್ನ ವಾಹನಗಳ ಬೆಲೆಯನ್ನು 3.5% ರಷ್ಟು ಹೆಚ್ಚಿಸಲಿದೆ. 

ಏಪ್ರಿಲ್ 1 ರಿಂದ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ನಿಮಗೆ ಪಾವತಿ, ಚೆಕ್, ಬ್ಯಾಂಕ್ ಡ್ರಾಫ್ಟ್ ಅಥವಾ ಯಾವುದೇ ಇತರ ಭೌತಿಕ ಮಾಧ್ಯಮವನ್ನು ಬಳಸಲು ಸಾಧ್ಯವಾಗುವುದಿಲ್ಲ. ಮಾರ್ಚ್ 31, 2022 ರಿಂದ ಮ್ಯೂಚುಯಲ್ ಫಂಡ್ ಟ್ರಾನ್ಸಾಕ್ಷನ್ ಅಗ್ರಿಗೇಶನ್ ಪೋರ್ಟಲ್ MF ಯುಟಿಲಿಟೀಸ್ (MFU) ಚೆಕ್-ಡಿಮಾಂಡ್ ಡ್ರಾಫ್ಟ್ ಇತ್ಯಾದಿಗಳ ಮೂಲಕ ಪಾವತಿ ಸೌಲಭ್ಯವನ್ನು ನಿಲ್ಲಿಸಲಿದೆ. ಏಪ್ರಿಲ್ 1, 2022 ರಿಂದ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು, ನೀವು UPI ಅಥವಾ ನೆಟ್‌ಬ್ಯಾಂಕಿಂಗ್ ಅನ್ನು ಮಾತ್ರ ಬ್ಲಸಬಹುದಾಗುಇದೆ. ಮೂಲಕ ಮಾತ್ರ ಪಾವತಿ ಮಾಡಬೇಕು.  

ಏಪ್ರಿಲ್ 1ರಿಂದ ಔಷಧಿಗಳೂ ದುಬಾರಿಯಾಗಬಹುದು. ನೋವು ನಿವಾರಕಗಳು, ಆಂಟಿ ಬಯೋಟಿಕ್ , ಫಿನೋಬಾರ್ಬಿಟೋನ್, ಫೆನಿಟೋಯಿನ್ ಸೋಡಿಯಂ, ಅಜಿತ್ರೋಮೈಸಿನ್, ಸಿಪ್ರೊಫ್ಲೋಕ್ಸಾಸಿನ್, ಆಂಟಿವೈರಸ್ ಮುಂತಾದ ಹಲವು ಔಷಧಿಗಳ ಬೆಲೆಗಳು ಹೆಚ್ಚಾಗಲಿವೆ. ಏಪ್ರಿಲ್ 1 ರಿಂದ ಈ ಔಷಧಿಗಳ ಬೆಲೆ ಶೇಕಡಾ 10 ರಷ್ಟು ಹೆಚ್ಚಾಗಬಹುದು.   

ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಗೃಹ ಸಾಲದ ಬಡ್ಡಿ ಪಾವತಿಯ ಮೇಲೆ ರೂ 1.5 ಲಕ್ಷದವರೆಗೆ ಹೆಚ್ಚುವರಿ ತೆರಿಗೆ ಕಡಿತದ ಲಾಭವನ್ನು ನೀಡಲಾಗುತ್ತದೆ. ಮೊದಲು, ಸೆಕ್ಷನ್ 80EEA ಯ ಪ್ರಯೋಜನವನ್ನು ಮಾರ್ಚ್ 2021 ರವರೆಗೆ ಮಾತ್ರ ಪಡೆಯಬಹುದಾಗಿತ್ತು. ಆದರೆ ಬಜೆಟ್ 2021 ರಲ್ಲಿ, ಅದರ ದಿನಾಂಕವನ್ನು ಮಾರ್ಚ್ 2022 ಕ್ಕೆ ವಿಸ್ತರಿಸಲಾಯಿತು. ಆದರೆ ಈ ದಿನಾಂಕವನ್ನು ಬಜೆಟ್ 2022 ರಲ್ಲಿ ವಿಸ್ತರಿಸಲಾಗಿಲ್ಲ.  

ಬ್ಯಾಂಕ್ ಉಳಿತಾಯ ಖಾತೆಯ ಸರಾಸರಿ ಮಾಸಿಕ ಬ್ಯಾಲೆನ್ಸ್ ಮಿತಿಯನ್ನು ಈಗಿರುವ 10,000 ರೂ.ಗಳಿಂದ 12,000 ರೂ.ಗೆ ಹೆಚ್ಚಿಸಿದೆ. ಈ ನಿಯಮಗಳು 1 ಏಪ್ರಿಲ್ 2022 ರಿಂದ ಸುಲಭ ಉಳಿತಾಯ ಮತ್ತು ಇತರ ರೀತಿಯ ಯೋಜನೆಗಳಿಗೆ ಅನ್ವಯಿಸುತ್ತವೆ. ಇದಲ್ಲದೇ ಉಚಿತ ನಗದು ವಹಿವಾಟಿನ ನಿಯಮಗಳನ್ನೂ ಬ್ಯಾಂಕ್ ಬದಲಾಯಿಸಿದೆ. 

ಮಾಸಿಕ ಆದಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಖಾತೆ ಅಥವಾ ಟೈಮ್ ಡಿಪೋಸಿಟ್ ಖಾತೆಯಂತಹ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆದಾರರು ಕಡ್ಡಾಯವಾಗಿ ಪೋಸ್ಟ್ ಆಫೀಸ್ ಉಳಿತಾಯ ಖಾತೆ ಅಥವಾ ಬ್ಯಾಂಕ್ ಖಾತೆಯನ್ನು ತೆರೆಯಬೇಕು. MIS, SCSS, TD ಖಾತೆಗಳ ಮೇಲಿನ ಬಡ್ಡಿಯನ್ನು 1ನೇ ಏಪ್ರಿಲ್ 2022 ರಿಂದ ಪೋಸ್ಟ್ ಆಫೀಸ್ ಉಳಿತಾಯ ಖಾತೆ ಅಥವಾ ಖಾತೆದಾರರ ಬ್ಯಾಂಕ್ ಖಾತೆಗೆ ಮಾತ್ರ ಜಮಾ ಮಾಡಲಾಗುತ್ತದೆ. ಮತ್ತೊಂದೆಡೆ, ಖಾತೆದಾರರು ಮಾರ್ಚ್ 31, 2022 ರೊಳಗೆ MIS, SCSS, TD ಖಾತೆಯೊಂದಿಗೆ ಉಳಿತಾಯ ಖಾತೆಯನ್ನು ಲಿಂಕ್ ಮಾಡದಿದ್ದರೆ, ಬಾಕಿ ಇರುವ ಬಡ್ಡಿಯನ್ನು ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ ಕ್ರೆಡಿಟ್ ಅಥವಾ ಚೆಕ್ ಮೂಲಕ ಮಾತ್ರ ಪಾವತಿಸಲಾಗುತ್ತದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link