ಹಿರಿಯ ನಾಗರಿಕರಿಗಾಗಿ ಕೇಂದ್ರ ಸರ್ಕಾರದ ಯೋಜನೆ ! ಪ್ರತಿ ತಿಂಗಳು ಖಾತೆಗೆ 20,500 ರೂ. !

Thu, 27 Jul 2023-8:57 am,

 ತಮ್ಮ ಇಳಿ ವಯಸ್ಸಿನಲ್ಲಿ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ದೇಶದ ಹಿರಿಯ ನಾಗರಿಕರಿಗಾಗಿ ಆರಂಭಿಸಲಾಗಿದೆ. ಈ ಯೋಜನೆಯಡಿ, ಹಿರಿಯ ನಾಗರಿಕರು ಪ್ರತಿ ತಿಂಗಳು ಹಣವನ್ನು ಪಡೆಯುವುದು ಸಾಧ್ಯವಾಗುತ್ತದೆ.   

ಈ ಬಜೆಟ್‌ನಲ್ಲಿ ಹಿರಿಯ ನಾಗರಿಕರಿಗೆ ಹೊಸ ತೆರಿಗೆ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಇದರ ಅಡಿಯಲ್ಲಿ, ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ (ಎಸ್‌ಸಿಎಸ್‌ಎಸ್) ಹೂಡಿಕೆ ಮಿತಿಯನ್ನು 15 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಬದಲಾವಣೆಯಿಂದ ಹಿರಿಯ ನಾಗರಿಕರಿಗೆ ಮೊದಲಿಗಿಂತ ಹೆಚ್ಚಿನ ಹೂಡಿಕೆಯ ಲಾಭ ಸಿಗುತ್ತಿದೆ

ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಬಡ್ಡಿದರವನ್ನು ಶೇಕಡಾ 8.2 ಕ್ಕೆ ಹೆಚ್ಚಿಸಲಾಗಿದೆ.  ಹಿಂದಿನ ತ್ರೈಮಾಸಿಕದಲ್ಲಿ ಇದು ಶೇ 8ರಷ್ಟಿತ್ತು. ಅದಕ್ಕೂ ಮೊದಲು ಅದರ ಬಡ್ಡಿ ದರ ಶೇ.7.6ರಷ್ಟಿದ್ದು, ಹೂಡಿಕೆಯ ಮಿತಿ 15 ಲಕ್ಷ ರೂ. ಆಗಿತ್ತು. 

ಗರಿಷ್ಠ ಹೂಡಿಕೆ ಮಿತಿಯನ್ನು ಹೆಚ್ಚಿಸಿ ಬಡ್ಡಿದರವನ್ನು ಹೆಚ್ಚಿಸಿದ್ದರಿಂದ ಹಿರಿಯ ನಾಗರಿಕರು ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ ಗಳಿಸುವ ಆದಾಯವು ದುಪ್ಪಟ್ಟಾಗಿದೆ. ಈ ಮೊದಲು, ಯೋಜನೆಯಲ್ಲಿ 15 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದಾಗ, 7.6 ಪ್ರತಿಶತ ಬಡ್ಡಿಯಂತೆ ಮೆಚ್ಯುರಿಟಿ ವೇಳೆ 20.70 ಲಕ್ಷ ರೂ. ಸಿಗುತ್ತಿತ್ತು.  ಅಂದರೆ ವಾರ್ಷಿಕವಾಗಿ 1.14 ಲಕ್ಷ ಮತ್ತು ಮಾಸಿಕವಾಗಿ ನೋಡಿದರೆ  9500 ರೂ. ಲಾಭವಾಗುತ್ತಿತ್ತು. 

ಹೂಡಿಕೆಯ ಮಿತಿಯನ್ನು 30 ಲಕ್ಷಕ್ಕೆ ಹೆಚ್ಚಿಸಿ ಬಡ್ಡಿದರವನ್ನು ಕೂಡಾ ಶೇ.8.2ಕ್ಕೆ ಏರಿಸಿದ ಪರಿಣಾಮ   ಐದು ವರ್ಷಗಳ ಮೆಚ್ಯೂರಿಟಿ ಅವಧಿಯಲ್ಲಿ 12.30 ಲಕ್ಷದ ಬಡ್ಡಿಯೊಂದಿಗೆ ಒಟ್ಟು 42.30 ಲಕ್ಷ ರೂಪಾಯಿ ಸಿಗಲಿದೆ. ಇದನ್ನು ವಾರ್ಷಿಕ ಆಧಾರದ ಮೇಲೆ ಲೆಕ್ಕ ಹಾಕಿದರೆ, 2 ಲಕ್ಷ 46 ಸಾವಿರ ರೂಪಾಯಿ ಮತ್ತು ಮಾಸಿಕ ಆಧಾರದಲ್ಲಿ ನೋಡಿದರೆ 20, 500 ರೂಪಾಯಿ ಆಗುತ್ತದೆ. 

ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ, ಸರ್ಕಾರವು ತ್ರೈಮಾಸಿಕ ಆಧಾರದ ಮೇಲೆ ಬಡ್ಡಿ ದರವನ್ನು ಪರಿಷ್ಕರಿಸುತ್ತದೆ. ಇದರಲ್ಲಿ ಗಂಡ ಮತ್ತು ಹೆಂಡತಿ ಬೇರೆ ಬೇರೆ ಖಾತೆ ಅಥವಾ ಜಂಟಿ ಖಾತೆಯನ್ನು ತೆರೆಯಬಹುದು.  ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ, ಇದರಲ್ಲಿ ಮಾಡುವ ಹೂಡಿಕೆಯ ಮೇಲೆ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link