New Traffic Rule: ಇನ್ಮುಂದೆ ಟ್ರಾಫಿಕ್ ಪೊಲೀಸರು ನಿಮ್ಮ ವಾಹನವನ್ನು ನಿಲ್ಲಿಸಿ ಚೆಕ್ಕಿಂಗ್ ಮಾಡುವಂತಿಲ್ಲ, ಇಲ್ಲಿದೆ ಹೊಸ ನಿಯಮ

Sat, 18 Jun 2022-9:24 pm,

ಹೊಸ ನಿಯಮಗಳ ಪ್ರಕಾರ, ಸಂಚಾರಿ ಪೊಲೀಸರು ವಾಹನಗಳ ಚೆಕ್ಕಿಂಗ್ ನಡೆಸುವಂತಿಲ್ಲ. ಅದರಲ್ಲಿಯೂ ವಿಶೇಷವಾಗಿ ಚೆಕ್ ನಾಕಾ ಇರುವ ಪ್ರದೇಶಗಳಲ್ಲಿ ಅವರು ಕೇವಲ ಟ್ರಾಫಿಕ್ ಮೇಲೆ ತಮ್ಮ ಗಮನ ಕೇಂದ್ರೀಕರಿಸಬೇಕು ಮತ್ತು ಸಂಚಾರವನ್ನು ಸುವ್ಯವಸ್ಥಿತಗೊಳಿಸಬೇಕು ಎನ್ನಲಾಗಿದೆ. ಸಂಚಾರದ ವೇಗದ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರುವ ವಾಹನವನ್ನು ಮಾತ್ರ ಅವರು ತಡೆಯಬಲ್ಲರು ಎನ್ನಲಾಗಿದೆ.

ಟ್ರಾಫಿಕ್ ಪೊಲೀಸರು ಅನುಮಾನದ ಆಧಾರದ ಮೇಲೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಅವರ ಬೂಟುಗಳನ್ನು ಮತ್ತು ವಾಹನದ ಒಳಭಾಗವನ್ನು ತಪಾಸಣೆಗೆ ಒಳಪಡಿಸುವುದು ಆಗಾಗ್ಗ ಗಮನಕ್ಕೆ ಬರುತ್ತದೆ. ಇದರಿಂದ ಆ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಎದುರಾಗುತ್ತದೆ.

ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚುತ್ತಿರುವ ಕಾರಣ ವಾಹನಗಳ ತಪಾಸಣೆಯನ್ನು ನಿಲ್ಲಿಸುವಂತೆ ಎಲ್ಲಾ ಟ್ರಾಫಿಕ್ ಪೊಲೀಸರಿಗೆ ಸೂಚನೆ ನೀಡಲಾಗಿದೆ, ಟ್ರಾಫಿಕ್ ಚಲನವಲನದ ಮೇಲೆ ನಿಗಾ ವಹಿಸಲು ಆದ್ಯತೆ ನೀಡುವಂತೆ ಹೊಸ ನಿಯಮದಲ್ಲಿ ತಿಳಿಸಲಾಗಿದೆ. ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘಿಸಿದಲ್ಲಿ ವಾಹನ ಚಾಲಕರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಸಂಚಾರ ಪೊಲೀಸರು ದಂಡ ವಿಧಿಸಬಹುದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಸಂಚಾರಿ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ನಾಕಾಬಂದಿ ನಡೆಸುವ ಸಂದರ್ಭಗಳಲ್ಲಿ ಸಂಚಾರಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಾರೆಯೇ ಹೊರತು ವಾಹನಗಳನ್ನು ತಪಾಸಣೆ ನಡೆಸುವಂತಿಲ್ಲ. ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸದಿದ್ದರೆ, ಸಂಬಂಧಪಟ್ಟ ಟ್ರಾಫಿಕ್ ಪೋಸ್ಟ್‌ನ ಹಿರಿಯ ನಿರೀಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಸಂಚಾರಿ ಪೊಲೀಸರು ಅನುಮಾನದ ಆಧಾರದಲ್ಲಿ ವಾಹನಗಳ ಬೂಟ್ ಪರಿಶೀಲನೆ ನಡೆಸಬಾರದು ಅಥವಾ ನಿಲ್ಲಿಸಬಾರದು ಎಂದು ಸಂಚಾರಿ ಪೊಲೀಸ್ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಪೊಲೀಸರು ಮೊದಲಿನಂತೆ ಸಂಚಾರಿ ಅಪರಾಧಗಳ ವಿರುದ್ಧ ಚಲನ್‌ ಮಾಡುವುದನ್ನು ಮುಂದುವರೆಸಲಿದ್ದಾರೆ ಮತ್ತು ಸಂಚಾರಿ ನಿಯಮ ಉಲ್ಲಂಘಿಸುವವರನ್ನು ತಡೆಯಲಿದ್ದಾರೆ ಎಂದು ಅವರು ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link