ಮಾರುಕಟ್ಟೆಗೆ ಬರಲಿದೆ ನೂತನ ಮಾದರಿ ರಾಯಲ್ ಎನ್ಫೀಲ್ಡ್ ಬುಲೆಟ್
ರಾಯಲ್ ಎನ್ಫೀಲ್ಡ್ ಬುಲೆಟ್ ನಿರೀಕ್ಷಿತ ಎಂಜಿನ್ ಸಾಮರ್ಥ್ಯ : ಬುಲೆಟ್ 500 ಮಾದರಿಯು 499 ಸಿಸಿ, ಸಿಂಗಲ್-ಸಿಲಿಂಡರ್, ಏರ್-ಕೂಲ್ ಎಂಜಿನ್ ಹೊಂದಲಿದೆ. 5.250 ಆರ್ಪಿಎಂನಲ್ಲಿ 27.2 ಬಿಎಚ್ಪಿ ಶಕ್ತಿಯನ್ನು ಹೊಂದಿದ ಎಂಜಿನ್ ಮತ್ತು 4,000 ಆರ್ಪಿಎಮ್ನಲ್ಲಿ 41.3 ಎನ್ಎಮ್ ಅನ್ನು 5 ಸ್ಪೀಡ್ ಗೇರ್'ಬಾಕ್ಸ್ ಜೊತೆ ಅಳವಡಿಸಲಾಗಿದೆ. ಬುಲೆಟ್ 350 ಮತ್ತು ಬುಲೆಟ್ ಎಲೆಕ್ಟ್ರಾ ಮಾದರಿಯು 346 ಸಿಸಿ ಸಿಂಗಲ್ ಸಿಲಿಂಡರ್, 5250 ಆರ್ಪಿಎಂನಲ್ಲಿ 19.8 ಬಿಎಚ್ಪಿಯ 4 ಸ್ಟ್ರೋಕ್ ಇಂಜಿನ್ ಮತ್ತು 4000 ಆರ್ಪಿಎಮ್ ನಲ್ಲಿ 28 ಎನ್ಎಮ್ ಅನ್ನು ಹೊಂದಿವೆ. (All Pics : India.com)
ರಾಯಲ್ ಎನ್ಫೀಲ್ಡ್ ಬುಲೆಟ್ ನಿರೀಕ್ಷಿತ ಎಂಜಿನ್ ಸಾಮರ್ಥ್ಯ : ಬುಲೆಟ್ 500 ಮಾದರಿಯು 499 ಸಿಸಿ, ಸಿಂಗಲ್-ಸಿಲಿಂಡರ್, ಏರ್-ಕೂಲ್ ಎಂಜಿನ್ ಹೊಂದಲಿದೆ. 5.250 ಆರ್ಪಿಎಂನಲ್ಲಿ 27.2 ಬಿಎಚ್ಪಿ ಶಕ್ತಿಯನ್ನು ಹೊಂದಿದ ಎಂಜಿನ್ ಮತ್ತು 4,000 ಆರ್ಪಿಎಮ್ನಲ್ಲಿ 41.3 ಎನ್ಎಮ್ ಅನ್ನು 5 ಸ್ಪೀಡ್ ಗೇರ್'ಬಾಕ್ಸ್ ಜೊತೆ ಅಳವಡಿಸಲಾಗಿದೆ. ಬುಲೆಟ್ 350 ಮತ್ತು ಬುಲೆಟ್ ಎಲೆಕ್ಟ್ರಾ ಮಾದರಿಯು 346 ಸಿಸಿ ಸಿಂಗಲ್ ಸಿಲಿಂಡರ್, 5250 ಆರ್ಪಿಎಂನಲ್ಲಿ 19.8 ಬಿಎಚ್ಪಿಯ 4 ಸ್ಟ್ರೋಕ್ ಇಂಜಿನ್ ಮತ್ತು 4000 ಆರ್ಪಿಎಮ್ ನಲ್ಲಿ 28 ಎನ್ಎಮ್ ಅನ್ನು ಹೊಂದಿವೆ.
ರಾಯಲ್ ಎನ್ಫೀಲ್ಡ್ ಬುಲೆಟ್ ನಿರೀಕ್ಷಿತ ಸುರಕ್ಷತಾ ಲಕ್ಷಣಗಳು : ಎಬಿಎಸ್(anti-lock brake system) ಸುರಕ್ಷತೆ ವೈಶಿಷ್ಟ್ಯವನ್ನು ರಾಯಲ್ ಎನ್ಫಿಲ್ಡ್'ನ ಇತರ ಮಾದರಿಗಳಿಗೂ ಅಳವಡಿಸಲಾಗಿದೆ. ಹಿಮಾಲಯನ್ ನಂತರ ರಾಯಲ್ ಎನ್ಫೀಲ್ಡ್'ನ ಥಂಡರ್ಬರ್ಡ್ ಮೋಟಾರ್ ಸೈಕಲ್ ರಾಯಲ್ ಎಬಿಎಸ್(anti-lock brake system) ಹೊಂದಲಿದೆ.
ರಾಯಲ್ ಎನ್ಫೀಲ್ಡ್ ಬುಲೆಟ್ ಬೆಲೆ : ಎಬಿಎಸ್ ಹೊಂದಿರುವ ರಾಯಲ್ ಎನ್ಫೀಲ್ಡ್ 2018 ಬೆಲೆ ಹಿಂದಿನ ಮಾದರಿಗಳಿಗಿಂತ ಬೆಲೆಗಿಂತ 10 ರಿಂದ 12 ಸಾವಿರ ರೂ. ಹೆಚ್ಚಾಗಿರುವ ನಿರೀಕ್ಷೆ ಇದೆ. ಆದರೂ ನಿಖರವಾದ ಬೆಲೆ ಬಿಡುಗಡೆ ದಿನಾಂಕದಂದು ಪ್ರಕಟಿಸಲಾಗುವುದು.
ರಾಯಲ್ ಎನ್ಫೀಲ್ಡ್ ಬುಲೆಟ್ ಬಿಡುಗಡೆ ದಿನಾಂಕ : ವರದಿಗಳ ಪ್ರಕಾರ, ನೂತನ ಮಾದರಿಯ ಬುಲೆಟ್ ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದ್ದು, ಅಂದಿನಿಂದಲೀ ಮಾರಾಟ ಆರಂಭವಾಗಲಿದೆ ಎನ್ನಲಾಗಿದೆ.