ಹೊಸ ವರ್ಷದಿಂದ ಈ ರಾಶಿಯವರಿಗೆ ಆರಂಭವಾಗಲಿದೆ ಶುಕ್ರ ದೆಸೆ, ಹಣದ ಸುರಿಮಳೆ, ರಾಜವೈಭೋಗ
ಐಷಾರಾಮಿ ಜೀವನದ ಅಂಶನಾದ ಶುಕ್ರನು 2025ರ ಆರಂಭದಲ್ಲಿ ತನ್ನದೇ ಆದ ಮೀನ ರಾಶಿಗೆ ಕಾಲಿಡಲಿದ್ದಾನೆ.
ಮೀನ ರಾಶಿಗೆ ಶುಕ್ರನ ಪ್ರವೇಶದೊಂದಿಗೆ ಕೆಲವು ರಾಶಿಯವರ ಬದುಕಿನಲ್ಲಿ ಶುಕ್ರ ದೆಸೆ ಆರಂಭವಾಗಲಿದ್ದು, ಹಣದ ಸುರಿಮಳೆಯೇ ಆಗಲಿದೆ. ಹೊಸ ವರ್ಷದಲ್ಲಿ ಅವರ ಬದುಕು ಬಂಗಾರವಾಗಲಿದೆ ಎನ್ನಲಾಗುತ್ತಿದೆ.
ವೃಷಭ ರಾಶಿ: ಶುಕ್ರ ದೆಸೆ ಪ್ರಭಾವದಿಂದ ಈ ರಾಶಿಯವರಿಗೆ ದಿಢೀರ್ ಧನಲಾಭ, ಆದಾಯದ ಹೊಸ ಮೂಲಗಳ ಸೃಷ್ಟಿಯಿಂದ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ದೊರೆಯಲಿದೆ. ವ್ಯವಹಾರದಲ್ಲಿ ಉತ್ತಮ ಲಾಭದ ಜೊತೆಗೆ ಖ್ಯಾತಿಯೂ ಹೆಚ್ಚಾಗಲಿದೆ.
ಕುಂಭ ರಾಶಿ: ಹೊಸ ವರ್ಷದಲ್ಲಿ ಶುಕ್ರನ ವಿಶೇಷ ಅನುಗ್ರಹ ಈ ರಾಶಿಯಯ್ವಾರ ಮೇಲಿದ್ದು ನಿಮ್ಮ ಮಾತೇ ಬಂಡವಾಳವಾಗಲಿದೆ. ಇದರಿಂದಾಗಿ ಕೆಲಸಗಳಲ್ಲಿ ಪ್ರಗತಿಯ ಹೊಸ ಮೂಲಗಳು ತೆರೆದುಕೊಳ್ಳುವುದು. ಜೊತೆಗೆ ವ್ಯಾಪಾರದಲ್ಲಿ ಬಂಪರ್ ಆದಾಯವನ್ನು ಗಳಿಸುವಿರಿ.
ಮೀನ ರಾಶಿ: ಶುಕ್ರ ರಾಶಿ ಬಡಲವನೆಯು ಈ ರಾಶಿಯವರಿಗೆ ವಿಶೇಷವಾಗಿ ಲಾಭದಾಯಕ ಫಲಗಳನ್ನು ನೀಡಲಿದೆ. ಈ ಅವಧಿಯಲ್ಲಿ ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯಲಿದೆ. ಕೌಟುಂಬಿಕ ಜೀವನದಲ್ಲಿ ಮಾಧುರ್ಯತೆ ಹೆಚ್ಚಾಗಲಿದೆ. ಬಂಪರ್ ಧನ ಲಾಭವನ್ನು ಸಹ ನಿರೀಕ್ಷಿಸಬಹುದು. ಹೂಡಿಕೆಯಿಂದ ಭಾರೀ ಲಾಭವಾಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.