New Year Horoscope: ಹೊಸ ವರ್ಷದ ಆರಂಭ 5 ರಾಶಿಗಳ ಜನರಿಗೆ ತುಂಬಾ ಲಕ್ಕಿ ಸಾಬೀತಾಗಲಿದೆ

Fri, 02 Dec 2022-5:59 pm,

1. ಜೋತಿಷ್ಯ ಶಾಸ್ತ್ರದಲ್ಲಿ ಗುರುವನ್ನು ಬುದ್ಧಿವಂತಿಕೆ ಮತ್ತು ಶಿಕ್ಷಣದ ಕಾರಕ ಗ್ರಹ ಎಂದು ಪರಿಗಣಿಸಲಾಗಿದೆ. 2023 ರಲ್ಲಿ, ದೇವಗುರು ಬೃಹಸ್ಪತಿ ಕೆಲ ರಾಶಿಗಳ ಮೇಲೆ ವಿಶೇಷ ಕೃಪೆ ತೋರಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ರಾಶಿಯವರಿಗೆ ಹೊಸ ವರ್ಷ ವರದಾನಕ್ಕಿಂತ ಕಡಿಮೆ ಇಲ್ಲ ಎಂದರೆ ತಪ್ಪಾಗಲಾರದು. ಈ ಅವಧಿಯಲ್ಲಿ, ಈ ರಾಶಿಗಳ ಜಾತಕದವರ ಆರ್ಥಿಕ ಸ್ಥಿತಿಯು ತುಂಬಾ ಪ್ರಬಲವಾಗಿರಲಿದ್ದು, ಈ ರಾಶಿಯ ಉದ್ಯೋಗಸ್ಥರು ಮತ್ತು ವ್ಯಾಪಾರಸ್ಥರು ಸಾಕಷ್ಟು ಪ್ರಗತಿಯನ್ನು ಕಾಣಲಿದ್ದಾರೆ.  

2. ಹೊಸ ವರ್ಷವು ಮೇಷ ರಾಶಿಯವರಿಗೆ ಸಾಕಷ್ಟು ಪ್ರಗತಿಯನ್ನು ಹೊತ್ತು ತರಲಿದೆ. ಈ ಅವಧಿಯಲ್ಲಿ, ಗುರು ಈ ರಾಶಿಯ ಜಾತಕದವರ ಮೇಲೆ ತನ್ನ ವಿಶೇಷ ಅನುಗ್ರಹವನ್ನು ಹೊಂದಿರಲಿದೆ. ಈ ಅವಧಿಯಲ್ಲಿ ನಿಮಗೆ ಹಲವು ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ ಮತ್ತು ನೀವು ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಲೇ ಇರುವಿರಿ. ಹೊಸ ಜವಾಬ್ದಾರಿ ಸಿಗುವ ಕಾರಣ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ವಿದೇಶಕ್ಕೆ ಹೋಗಲು ಬಯಸುವ ಯುವಕರು. ಈ ಅವಧಿಯಲ್ಲಿ ತಮ್ಮ ಆಸೆಯನ್ನು ಪೂರೈಸಿಕೊಳ್ಳಬಹುದು.   

3. 2023 ರ ವರ್ಷವು ಕರ್ಕ ರಾಶಿಯ ಜನರ ಪಾಲಿಗೆ ತುಂಬಾ ಅದೃಷ್ಟ ತರಲಿದೆ. ಈ ಅವಧಿಯಲ್ಲಿ ಮುಚ್ಚಿರುವ ನಿಮ್ಮ ಭಾಗ್ಯದ ಬಾಗಿಲು ತೆರೆದುಕೊಳ್ಳಲಿದೆ ಮತ್ತು ನಿಮ್ಮ ಪ್ರತಿಯೊಂದು ಕಾರ್ಯವೂ ಅದೃಷ್ಟದ ಸಹಾಯದಿಂದ ಪೂರ್ಣಗೊಳ್ಳಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಸಾಮರಸ್ಯದ ವಾತಾವರಣ ಇರಲಿದೆ. ಆಸ್ತಿಪಾಸ್ತಿಗಳಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯ. ದಾಂಪತ್ಯ ಜೀವನ ಸುಖಮಯವಾಗಿರಲಿದೆ.  

4. ಗುರುವಿನ ಅನುಗ್ರಹದಿಂದ ಹೊಸ ವರ್ಷವು ಕನ್ಯಾ ರಾಶಿಯವರಿಗೆ ಒಳ್ಳೆಯ ಸುದ್ದಿಯನ್ನು ಹೊತ್ತು ತರಲಿದೆ. ಈ ರಾಶಿಯ ಜನರು ತಮ್ಮ ವಿವೇಚನೆ ಮತ್ತು ಬುದ್ಧಿವಂತಿಕೆಯನ್ನು ಬಳಸಿಕೊಂಡು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಿದ್ದಾರೆ. ಅದೃಷ್ಟವು ನಿಮ್ಮೊಂದಿಗೆ ಇರಲಿದೆ ಮತ್ತು ಯಾವುದಾದರೊಂದು ವಿವಾದದಲ್ಲಿ ನೀವು ಸಿಲುಕಿದ್ದರೆ, ಅದರಿಂದ ನಿಮಗೆ ಮುಕ್ತಿ ಸಿಗಲಿದೆ.  

5. ದೇವಗುರು ಬೃಹಸ್ಪತಿಯ ಅನುಗ್ರಹದಿಂದ ಮಕರ ರಾಶಿಯವರಿಗೆ ಹೊಸ ವರ್ಷವು ಸಾಧನೆಯಿಂದ ಕೂಡಿರಲಿದೆ. ಭಾರಿ ಧನ ಲಾಭದ ಕಾರಣ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ದಾಂಪತ್ಯ ಜೀವನದಲ್ಲಿ ಮಧುರತೆ ಇರಲಿದೆ . ಪೋಷಕರ ಮತ್ತು ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಕಳೆದ ಹಲವು ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link