2025ರಲ್ಲಿ ಈ ರಾಶಿಯವರಿಗೆ ಶನಿ ಮಹಾದಶದಿಂದ ಭಾರೀ ಅದೃಷ್ಟ, ಸುಖದ ಸುಪ್ಪತ್ತಿಗೆಯಲ್ಲೇ ತೇಲಿಸುತ್ತಾನೆ ಕರ್ಮಫಲದಾತ
ಪ್ರಸ್ತುತ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿರುವ ಶನಿ ಮಹಾತ್ಮ 2025ರಲ್ಲಿ ಮೀನ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ.
2025ರಲ್ಲಿ ಶನಿಯ ವಿಶೇಷ ಆಶೀರ್ವಾದ ಕೆಲವು ರಾಶಿಯವರ ಮೇಲಿರಲಿದ್ದು ಈ ಸಂದರ್ಭದಲ್ಲಿ ಶನಿ ಮಹಾದಶ ಪ್ರಭಾವದಿಂದ ಅವರ ಅದೃಷ್ಟವೇ ಬದಲಾಗಲಿದೆ ಎನ್ನಲಾಗುತ್ತಿದೆ.
ವೃಷಭ ರಾಶಿ: ಶನಿ ಆಶೀರ್ವಾದದಿಂದ ಈ ರಾಶಿಯವರಿಗೆ ಧಿಢೀರ್ ಧನಲಾಭದ ಜೊತೆಗೆ ಭಾರೀ ಉಳಿತಾಯವೂ ಆಗಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಿ ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ. ಕೌಟುಂಬಿಕ ಜೀವನದಲ್ಲೂ ಸಾಮರಸ್ಯ ಹೆಚ್ಚಾಗಿ ಸಂತೋಷ ತುಂಬಿರಲಿದೆ.
ತುಲಾ ರಾಶಿ: ಶನಿ ಮಹಾದಶವು ಈ ರಾಶಿಯವರ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಎರಡರಲ್ಲೂ ಪ್ರಗತಿಯನ್ನು ನೀಡಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶಗಳು ದೊರೆಯಲಿದೆ. ವ್ಯವಹಾರಸ್ಥರಿಗೆ ಬಂಪರ್ ಆದಾಯದ ಜೊತೆಗೆ ನಿಮ್ಮ ವ್ಯವಹಾರವನ್ನು ವಿಸ್ತರಿಸಲೂ ಸಹ ಅನುಕೂಲಕರ ವಾತಾವರಣ ನೀರ್ಮಾನವಾಗಲಿದೆ.
ಧನು ರಾಶಿ: ಈ ರಾಶಿಯವರ ಜೀವನದಲ್ಲಿ ಕೆಲವು ಸವಾಲುಗಳು ಇರುತ್ತವೆ. ಆದರೂ, ಶನಿಯ ಕೃಪೆಯಿಂದ ಎಲ್ಲವೂ ಬಗೆಹರಿದು ನೆಮ್ಮದಿಯ ಜೀವನವನ್ನು ಕಾಣುವಿರಿ. ಆದಾಯದಲ್ಲಿ ಸ್ಥಿರತೆಯು ನಿಮ್ಮನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರ ತರಲಿದೆ.
ಮಕರ ರಾಶಿ: ಶನಿ ದೆಸೆಯಿಂದಾಗಿ ಈ ರಾಶಿಯ ಜನರ ಸಂಪತ್ತು ಹೆಚ್ಚಾಗಲಿದೆ. ನಿಮ್ಮ ಬಹುಕಾಲದ ಕನಸು ನನಸಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಆನಂದದ ಸಮಯವನ್ನು ಕಳೆಯುವಿರಿ. ಸ್ವಂತ ವ್ಯವಹಾರ ಮಾಡುವವರಿಗೆ ಭಾರೀ ಆದಾಯ ಸಾಧ್ಯತೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.