ಮುಂದಿನ ನಾಲ್ಕು ತಿಂಗಳು ಈ ರಾಶಿಯವರ ಜೀವನದಲ್ಲಿ ಹಣದ ಮಳೆ

Wed, 09 Aug 2023-10:48 am,

118 ದಿನಗಳವರೆಗೆ ಗುರು ವಕ್ರ ಸಂಕ್ರಮಣ: ಗುರು  12 ವರ್ಷಗಳ ನಂತರ ಸೆಪ್ಟೆಂಬರ್ 4 ರಿಂದ ಮೇಷ ರಾಶಿಯಲ್ಲಿ  ವಕ್ರ ನಡೆ ಆರಂಭಿಸಲಿದೆ. ಗುರುಗ್ರಹದ ಹಿಮ್ಮುಖ ಚಲನೆಯು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಗುರು ಸದ್ಯ ಮೇಷ ರಾಶಿಯಲ್ಲಿ  ಸಂಚಾರ ಮಾಡುತ್ತಿದೆ. ಗುರುವಿನ ವಕ್ರ ಸಂಕ್ರಮಣದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ನೋಡೋಣ.    

ಗುರು ದೃಷ್ಟಿ ಏನು ಮಾಡುತ್ತದೆ: ವೈದಿಕ ಜ್ಯೋತಿಷ್ಯದ ಪ್ರಕಾರ, ಗುರು  ಬೃಹಸ್ಪತಿ ಮಾನವ ಜೀವನದಲ್ಲಿ ಧನಾತ್ಮಕ ಫಲಿತಾಂಶಗಳನ್ನು ನೀಡುವ ಅತ್ಯಂತ ಲಾಭದಾಯಕ ಗ್ರಹವಾಗಿದೆ. ಮಾನವನ ಜೀವನದಲ್ಲಿ ಸಂಪತ್ತು, ವೃತ್ತಿ, ದಾಂಪತ್ಯದಲ್ಲಿ ಸಂತೋಷ ಮತ್ತು ಸಮೃದ್ಧಿಗೆ ಜಾತಕದಲ್ಲಿ ಗುರುವಿನ  ದೃಷ್ಟಿ ಅತ್ಯಗತ್ಯ ಎಂದು ಹೇಳಲಾಗುತ್ತದೆ. ಇದರೊಂದಿಗೆ ಜಾತಕದಲ್ಲಿ ಗುರುವಿನ ದೃಷ್ಟಿ ಬಲವಾಗಿದ್ದರೆ ಮಾತ್ರ ಹೊಸ ವಾಹನ ಸುಖ, ಆರ್ಥಿಕ ಲಾಭ ಪಡೆಯಬಹುದು.    

ಮೇಷ ರಾಶಿ : ಗುರುವಿನ ವಕ್ರ ಸಂಚಾರವು ಮೇಷ ರಾಶಿಯವರಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಗುರುಗ್ರಹದ ಪ್ರಭಾವದಿಂದ ನಿಮ್ಮ ವ್ಯಕ್ತಿತ್ವ ಸುಧಾರಿಸುತ್ತದೆ. ಆರ್ಥಿಕ ಪ್ರಗತಿ ಇರುತ್ತದೆ. ಹಣದ ಹರಿವು ಮತ್ತು ಲಾಭ ಇರುತ್ತದೆ. ವ್ಯಾಪಾರ ಚೆನ್ನಾಗಿ ನಡೆಯಲಿದೆ. ದಾಂಪತ್ಯ ಸುಖ ಹೆಚ್ಚಲಿದೆ. ಜೀವನದಲ್ಲಿ ನೆಮ್ಮದಿ ಹೆಚ್ಚಲಿದೆ.  

ಮಿಥುನ ರಾಶಿ : ಮೇಷ ರಾಶಿಯಲ್ಲಿ ಗುರುವಿನ ಹಿಮ್ಮುಖ ಅವಧಿಯಲ್ಲಿ ಆದಾಯ ಹೆಚ್ಚಲಿದೆ. ನಿಮ್ಮ ವೃತ್ತಿಜೀವನ ಸುಧಾರಿಸುತ್ತದೆ. ವ್ಯಾಪಾರ ಚೆನ್ನಾಗಿ ನಡೆಯಲಿದೆ. ಬಯಸಿದ ಸ್ಥಾನಮಾನ ಮತ್ತು ಹಣವನ್ನು ಪಡೆಯುವುದು ಸಾಧ್ಯವಾಗುತ್ತದೆ. ಮನಸ್ಸಿನ ಶಾಂತಿ ಸಂತೋಷ ಹೆಚ್ಚಾಗುವುದು. 

ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರಿಗೆ ಗುರುವಿನ ವಕ್ರ ನಡೆ ತುಂಬಾ ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಸಮಸ್ಯೆಗಳು ಕೊನೆಗೊಳ್ಳುತ್ತವೆ ಮತ್ತು ವೃತ್ತಿಜೀವನವು ಸುಧಾರಿಸುತ್ತದೆ. ವ್ಯಾಪಾರ ಚೆನ್ನಾಗಿ ನಡೆಯಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ಆದಾಯ ಹೆಚ್ಚಾದಂತೆ ಹಣಕಾಸಿನ ಚಿಂತೆಗಳು ದೂರವಾಗುತ್ತವೆ. ಒತ್ತಡದಿಂದ ಮುಕ್ತಿ ಹೊಂದುವಿರಿ. 

ಸಿಂಹ ರಾಶಿ : ಸಿಂಹ ರಾಶಿಯವರಿಗೆ ಗುರು ವಕ್ರ ಸಂಚಾರ ಲಾಭದಾಯಕವಾಗಿರಲಿದೆ. ಈ ಸಮಯ ಸಿಂಹ ರಾಶಿಯವರಿಗೆ ತುಂಬಾ ವಿಶೇಷವಾಗಿರುತ್ತದೆ. ದೀರ್ಘಕಾಲದಿಂದ ನಿಂತು ಹೋಗಿದ್ದ ಕಾರ್ಯಗಳು ಮತ್ತೆ ಚುರುಕು ಪಡೆಯುತ್ತವೆ. ಆರ್ಥಿಕ ಸ್ಥಿತಿ ಸದೃಢವಾಗಲಿದೆ.   

ಧನು ರಾಶಿ : ಧನು ರಾಶಿಯವರಿಗೆ ಮಕ್ಕಳ ಕಡೆಯಿಂದ ಶುಭ ಸುದ್ದಿ ಸಿಗಲಿದೆ. ಗುರು ಗ್ರಹವು ನಿಮ್ಮ ಸಂಕ್ರಮಣದ ಜಾತಕದ ಐದನೇ ಮನೆಗೆ ಸಾಗುತ್ತಿರುವುದರಿಂದ, ಮಗುವಿನ ಪ್ರಗತಿ ಹೆಚ್ಚುತ್ತದೆ. ನೀವು ಪ್ರೇಮ ವ್ಯವಹಾರಗಳಲ್ಲಿ ಯಶಸ್ವಿಯಾಗಬಹುದು. ಈ ವೇಳೆ ಬಹುಕಾಲದಿಂದ ನೆರವೇರದೇ ಉಳಿದಿದ್ದ ಕೆಲಸಗಳು ಪೂರ್ಣವಾಗುವುದು. 

 ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಧಾರ್ಮಿಕ  ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು ಝೀ ಮೀಡಿಯಾ ಖಚಿತಪಡಿಸುವುದಿಲ್ಲ 

ZEENEWS TRENDING STORIES

By continuing to use the site, you agree to the use of cookies. You can find out more by Tapping this link