PHOTOS: ನಿಖಿಲ್ ಪುತ್ರನ ನಾಮಕರಣ ಶಾಸ್ತ್ರ..‌ ದೊಡ್ಡ ಗೌಡರ ಮರಿ ಮೊಮ್ಮಗನ ಹೆಸರು ಇದೇ ನೋಡಿ

Wed, 08 Jun 2022-11:08 am,

ನಿಖಿಲ್ ಕುಮಾರಸ್ವಾಮಿ ಪುತ್ರನ ನಾಮಕರಣ ಕಾರ್ಯಕ್ರಮ ಇಂದು ನಡೆಯುತ್ತಿದೆ.

ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಶಾಸ್ತ್ರ ಜರುಗುತ್ತಿದೆ. 

10:30 ರಿಂದ 12:20 ರವರೆಗೂ ನಡೆಯುವ ಶುಭ ಲಗ್ನದಲ್ಲಿ ನಾಮಕರಣ ಕಾರ್ಯಕ್ರಮ ನಡೆಯುತ್ತಿದೆ.

ಪ್ರಪೌತ್ರ ಜನನ ಶಾಂತಿ, ನಾಮಕರಣ, ಕನಕಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

9 ತಿಂಗಳು ತುಂಬಿರುವ ಹಿನ್ನೆಲೆ ನಿಖಿಲ್‌ ಪುತ್ರನಿಗೆ ಆವ್ಯನ್ ದೇವ್ ಎಂದು ಹೆಸರಿಡಲು ಕುಟುಂಬಸ್ಥರು ನಿರ್ಣಯಿಸಿದ್ದಾರೆ. 

ನಾಮಕರಣಕ್ಕೆ ಕುಟುಂಬಸ್ಥರಿಗೆ ಮಾತ್ರ ಅವಕಾಶವಿದ್ದು, ವಿವಿಧ ಹೂಗಳಿಂದ ಬೆಳ್ಳಿ ತೊಟ್ಟಿಲನ್ನು ಸಿಂಗರಿಸಲಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link