ಗರ್ಲ್ ಫ್ರೆಂಡ್ ಬಗ್ಗೆ ಮಾತನಾಡಿದ ನೀರಜ್ ಚೋಪ್ರಾ : ಮಗನ ಮದುವೆ ಯಾವಾಗ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ ತಂದೆ
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದು ಹೊಸ ಇತಿಹಾಸ ನಿರ್ಮಿಸಿದ ಭಾರತದ ಸ್ಟಾರ್ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ, ತಮ್ಮ ಆಟದಿಂದ ಮಾತ್ರವಲ್ಲದೆ ತಮ್ಮ ಸ್ಟೈಲಿಶ್ ಲುಕ್‌ನಿಂದಲೂ ಹುಡುಗಿಯರ ಮನ ಗೆದ್ದಿದ್ದಾರೆ.
ನೀರಜ್ ಚೋಪ್ರಾ ಅವರ ವೈಯಕ್ತಿಕ ಜೀವನದ ಬಗ್ಗೆ ಪ್ರಸ್ತುತ ಗೂಗಲ್‌ನಲ್ಲಿ ಜನರು ಸರ್ಚ್ ಮಾಡುತ್ತಿದ್ದಾರೆ. ಅವನ ವಯಸ್ಸು, ಆಸ್ತಿ, ಕುಟುಂಬ, ಗರ್ಲ್ ಫ್ರೆಂಡ್ ಹೀಗೆ ಎಲ್ಲಾ ವಿಚಾರಗಳ ಸರ್ಚ್ ಹೆಚ್ಚಾಗಿದೆ.
ನೀರಜ್ ಚೋಪ್ರಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ. ಈ ಹಿಂದೆ ಸಂದರ್ಶನವೊಂದರಲ್ಲಿಯೂ ಪ್ರೀತಿ ಮತ್ತು ಮದುವೆ ಬಗ್ಗೆ ಕೇಳಿದಾಗ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು.
ಆದರೆ ತನಗೆ ಗರ್ಲ್ ಫ್ರೆಂಡ್ ಇಲ್ಲ, ಹಾಗಾಗಿ ಮದುವೆಯಾಗುವ ಇರಾದೆ ಕೂಡಾ ಸದ್ಯಕ್ಕೆ ಇಲ್ಲ ಎಂದಿದ್ದಾರೆ.
ಇನ್ನು ತಮ್ಮ ವೃತ್ತಿಜೀವನದ ಆರಂಭದಲ್ಲಿ ಲಟ್ವಿಯನ್ ಜಾವೆಲಿನ್ ಎಸೆತ ಗಾರ್ತಿಯ ಮೇಲೆ ಕ್ರಶ್ ಇತ್ತು ಎಂದಷ್ಟೇ ಹೇಳಿದ್ದಾರೆ. ಆದರೆ ಅದು ಕೇವಲ ಕ್ರಶ್ ಅಷ್ಟೇ.
ಇನ್ನು ಮಗನ ಮದುವೆ ಬಗ್ಗೆ ಮಾತನಾಡಿದ ನೀರಜ್ ಚೋಪ್ರಾ ತಂದೆ 2024ರ ಒಲಿಂಪಿಕ್ಸ್ ನಂತರ ತಮ್ಮ ಮಗನ ಮದುವೆಯ ಬಗ್ಗೆ ಯೋಚಿಸುವುದಾಗಿ ಹೇಳಿದ್ದರು.