ನಾನು ಡೇಟ್ ಮಾಡಲು ಬಯಸಿದ್ದು ಈ ರಾಜಕಾರಣಿಯನ್ನು !ಮುಖೇಶ್ ಅಂಬಾನಿ ಮುಂದೆಯೇ ಮನದ ಮಾತು ಹೊರ ಹಾಕಿದ ನೀತಾ
ಮುಖೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ಉದ್ಯಮಿ. ಅಂಬಾನಿ ಮತ್ತು ಅಂಬಾನಿ ಕುಟುಂಬ ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿ ಇರುತ್ತಾರೆ.
ಇತ್ತಿಚಿಗಷ್ಟೇತಮ್ಮ ಪುತ್ರನ ವಿವಾಹ ಸಮಾರಂಭದ ಕಾರಣದಿಂದ ಇಡೀ ವಿಶ್ವದ ಗಮನ ಸೆಳೆದಿತ್ತು ಅಂಬಾನಿ ಕುಟುಂಬ. ಹಿಂದೆಂದೂ ನಡೆದಿಲ್ಲ, ಮುಂದೆ ನಡೆಯುವುದಿಲ್ಲ ಎನ್ನುವ ಮಟ್ಟಕ್ಕೆ ಐಶಾರಾಮಿಯಾಗಿ ಜರಗಿತ್ತು ಆ ವಿವಾಹ ಸಂಭ್ರಮ.
ಇದೀಗ ನೀತಾ ಅಂಬಾನಿ ಮಾತು ಮುಖೇಶ್ ಅಂಬಾನಿಗೆ ಸಂಬಂಧಪಟ್ಟ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನೀತಾ ಅಂಬಾನಿ ತಾನು ಮುಖೇಶ್ ಅಂಬಾನಿ ಹೊರತಾಗಿ ಯಾರನ್ನು ಡೇಟ್ ಮಾಡಲು ಬಯಸುತ್ತೇನೆ ಎನ್ನುವುದನ್ನು ಹೇಳಿದ್ದಾರೆ.
ಸಿಮಿ ಗರೆವಾಲ್ ಅವರ ಟಾಕ್ ಶೋ 'ರೆಂಡೆಜ್ವಸ್ ವಿತ್ ಸೆಮಿ ಗಿರೆಬಾಲ್' ನಲ್ಲಿ ಮುಖೇಶ್ ಮತ್ತು ನೀತಾ ಭಾಗವಹಿಸಿದ್ದರು. ಇಲ್ಲಿ ಸಿಮಿ ಗರೆವಾಲ್ ಅವರು ನೀತಾ ಅಂಬಾನಿ ಅವರನ್ನು ಮುಖೇಶ್ ಹೊರತಾಗಿ ನೀವು ಯಾರೊಂದಿಗೆ ಡೇಟಿಂಗ್ ಮಾಡಲು ಬಯಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಆಗ ನೀತಾ ಅಂಬಾನಿ ಬಿಲ್ ಕ್ಲಿಂಟನ್ ಹೆಸರೆತ್ತಿದ್ದಾರೆ.
ಆ ಸಂದರ್ಭದಲ್ಲಿ ಬಿಲ್ ಕ್ಲಿಂಟನ್ ಅಮೆರಿಕದ ಅಧ್ಯಕ್ಷರಾಗಿದ್ದರು. ನೀತಾ ಕ್ಲಿಂಟನ್ ಜೊತೆ ಡೇಟಿಂಗ್ ಗೆ ಹೋದರೆ ನಾನು ನಿಮ್ಮ ಜೊತೆ ಬರುತ್ತೇನೆ ಎಂದು ತಕ್ಷಣ ಮುಖೇಶ್ ಅಂಬಾನಿ ಕೂಡಾ ಅಲ್ಲಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಮುಖೇಶ್ ಅಂಬಾನಿ 1985 ರಲ್ಲಿ ನೀತಾ ಅಂಬಾನಿಯನ್ನು ತನ್ನ ಬಾಳ ಸಂಗಾತಿಯನ್ನಾಗಿ ಮಾಡಿಕೊಂಡಿದ್ದರು. ಈಗ ನೀತಾ ಅಂಬಾನಿ ಮತ್ತು ಮುಖೇಶ್ ಯಶಸ್ಸಿನ ಉತ್ತುಂಗದಲ್ಲಿದ್ದಾರೆ.ನೀತಾ ಅಂಬಾನಿಯನ್ನು ಫ್ಯಾಷನ್ ಐಕಾನ್ ಎಂದು ಪರಿಗಣಿಸಲಾಗಿದೆ. ಕ್ರೀಡಾ ಕ್ಷೇತ್ರದಲ್ಲೂ ಅವರ ಪ್ರಭಾವವಿದೆ. ನೀತಾ ಒಲಿಂಪಿಕ್ ಸಮಿತಿಯ ಸದಸ್ಯೆ ಕೂಡಾ.