ವಯಸ್ಸು 60 ದಾಟಿದರೂ ಮಿರ ಮಿರ ಮಿಂಚುವ ನೀತಾ ಅಂಬಾನಿ ಫಿಟ್ನೆಸ್ ಮತ್ತು ಸೌಂದರ್ಯ ಸೀಕ್ರೆಟ್ ಈ ತರಕಾರಿ ಜ್ಯೂಸ್ !

Tue, 16 Jul 2024-12:22 pm,

ನೀತಾ ಅಂಬಾನಿ ಸೌಂದರ್ಯದಲ್ಲಿ ಮಗಳು ಇಶಾ, ಸೊಸೆಯರಾದ ಶ್ಲೋಕಾ ಮತ್ತು ರಾಧಿಕಾಗೆ ಪೊಪೋಟಿ ನೀಡುತ್ತಾರೆ.   

ನೀತಾ ಅಂಬಾನಿ ವಯಸ್ಸು ೬೦ ದಾಟಿದೆ ಎಂದರೆ ನಂಬುವುದೇ ಕಷ್ಟ ಅನ್ನಿಸುವಷ್ಟರ ಮಟ್ಟಿಗೆ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ.   

ಅಂದ ಹಾಗೆ ನೀತಾ ಮೊದಲಿನಿಂದಲೂ ಹೀಗೆ ತೆಳ್ಳಗಿನ ಮೈಮಾಟ, ಹೊಳೆಯುವ ತ್ವಚೆ ಹೊಂದಿರಲಿಲ್ಲ. ಇವರ ಫಿಟ್ ನೆಸ್ ಮತ್ತು ಬ್ಯೂಟಿ ಸಿಕ್ರೆಟ್ ಅಂದರೆ ಅದು ಒಂದು ತರಕಾರಿ ಜ್ಯೂಸ್. 

ಹೌದು, ದಪ್ಪಗಿದ್ದ ನೀತಾ ಮಗ ಅನಂತ್ ಜೊತೆಗೆ ಡಯಟ್ ಶುರು ಮಾಡುತ್ತಾರೆ.ಆಗ ಅವರು ನಿತ್ಯ ಬೀಟ್ರೂಟ್ ಜ್ಯೂಸ್ ಕುಡಿಯಲು ಆರಂಭಿಸುತ್ತಾರೆ. 

ಈ ಬೀಟ್ರೂಟ್ ಜ್ಯೂಸ್  ಮೂಲಕವೇ ಅವರು ೧೮ ಕಿಲೋ ತೂಕವನ್ನು ಕಳೆದುಕೊಂಡಿದ್ದಾರೆಯಂತೆ. ಮಾತ್ರವಲ್ಲ ಮಿರಮಿರನೆ ಹೊಳೆಯುವ ತ್ವಚೆಯನ್ನು ಕೂಡಾ ಪಡೆದುಕೊಂಡಿದ್ದಾರೆ.   

ತನ್ನ ಫಿಟ್ನೆಸ್ ಮತ್ತು ಸ್ಕಿನ್ ಕೇರ್ ಸಿಕ್ರೆಟ್ ಬೀಟ್ರೂಟ್ ಜ್ಯೂಸ್ ಎನ್ನುವುದನ್ನು ನೀತಾ ಅಂಬಾನಿ ಹೇಳಿಕೊಂಡಿದ್ದಾರೆ.  

ಇದರ ಜೊತೆಗೆ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರ ಸೇವಿಸುತ್ತಾರೆ.  ಕಾಳುಗಳು, ಮೊಟ್ಟೆ, ಆಮ್ಲೆಟ್‌ ಮತ್ತು ಪೀನಟ್‌ ಬಟರ್ ಇತ್ಯಾದಿ ಇವರ ಫೆವರೆಟ್ . 

ZEENEWS TRENDING STORIES

By continuing to use the site, you agree to the use of cookies. You can find out more by Tapping this link