ʼಜಾಲಿ ಜಾಲಿ ಫುಲ್ ಜಾಲಿʼ ಎನ್ನುತ್ತಿರುವ ನಿವೇದಿತಾ ಗೌಡ; ಹೊಸ ಹಾಟ್ ಫೋಟೋ ಹಂಚಿಕೊಂಡ ರೀಲ್ಸ್ ಸುಂದರಿ!
)
ರೀಲ್ಸ್ ಸುಂದರಿ ನಿವೇದಿತಾ ಗೌಡ ಫುಲ್ ಜಾಲಿ ಮೂಡ್‌ನಲ್ಲಿದ್ದಾರೆ. ಇದೀಗ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಹಾಟ್ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ನಟಿಯ ಖುಷಿಯ ಕ್ಷಣಗಳನ್ನ ಈ ಫೋಟೋದಲ್ಲಿ ನೀವು ಕಾಣಬಹುದು.
)
ನಿವೇದಿತಾ ಗೌಡ ಸಾಮಾಜಿಕ ಜಾಲತಾಣದ ಮೂಲಕ ಬೆಳಕಿಗೆ ಬಂದ ಪ್ರತಿಭೆ. ಮೊದಲು ಟಿಕ್‌ಟಾಕ್ ನಂತರ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳ ಮೂಲಕ ಗಮನ ಸೆಳೆದ ಈ ನಟಿ ಬಳಿಕ ಕಿರುತೆರೆಯ ರಿಯಾಲಿಟಿ ಶೋಗಳಿಂದ ಅಪಾರ ಜನಪ್ರಿಯತೆ ಗಳಿಸಿದರು.
)
ʼಬಿಗ್ ಬಾಸ್ ಕನ್ನಡ ಸೀಸನ್ 5ʼರ ಸ್ಪರ್ಧಿಯಾಗಿದ್ದ ನಿವೇದಿತಾ ಗೌಡ, ನಂತರ ಕಿರುತೆರೆಯಲ್ಲಿ ಸಕ್ರಿಯರಾದರು. ಬಿಗ್ ಬಾಸ್ ಸಹ ಸ್ಪರ್ಧಿಯಾಗಿದ್ದ ಗಾಯಕ ಮತ್ತು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರನ್ನು ಪ್ರೀತಿಸಿ ಮದುವೆಯಾದ ನಿವೇದಿತಾ 4 ವರ್ಷದ ಬಳಿಕ ಪರಸ್ಪರ ವಿಚ್ಛೇದನ ಪಡೆದುಕೊಂಡು ದೂರವಾಗಿದ್ದಾರೆ.
ಬಿಗ್ ಬಾಸ್ʼ ಮೂಲಕ ಹೆಸರು ಮಾಡಿದ ನಿವೇದಿತಾ ಗೌಡ ಬಳಿಕ ರಾಜಾ ರಾಣಿ, ಗಿಚ್ಚಿ ಗಿಲಿ ಗಿಲಿ ಮುಂತಾದ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅವರು ತಮ್ಮ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಡಿವೋರ್ಸ್ ಆದ ಬಳಿಕ ನಿವೇದಿತಾ ಮತ್ತಷ್ಟು ಗ್ಲಾಮರಸ್ ಆಗಿದ್ದಾರೆ. ಸಖತ್ ಟ್ರೋಲ್ ಆಗುತ್ತಿದ್ದರೂ ಕ್ಯಾರೆ ಎನ್ನದ ಈ ರೀಲ್ಸ್ ಸುಂದರಿ ಹಾಟ್ ಹಾಟ್ ವಿಡಿಯೋ ಮತ್ತು ಫೋಟೋಗಳನ್ನ ಹಂಚಿಕೊಳ್ಳುತ್ತಿದ್ದಾರೆ.
ಇದೀಗ ನಿವೇದಿತಾ ಗೌಡ ಕನ್ನಡ ಕಿರುತೆರೆಗೆ ಮತ್ತೆ ಮರಳಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ʼಬಾಯ್ಸ್ vs ಗರ್ಲ್ಸ್ʼ ರಿಯಾಲಿಟಿ ಶೋನಲ್ಲಿ ನಿವೇದಿತಾ ಕಾಣಿಸಿಕೊಂಡಿದ್ದಾರೆ. ಡಿವೋರ್ಸ್ ಬಳಿಕ ಈ ನಟಿ ತುಂಬಾ ಹ್ಯಾಪಿ ಆಗಿದ್ದಾರೆ. ಎಷ್ಟೇ ಟ್ರೋಲ್ ಆದರೂ ಸಹ ತಲೆ ಕೆಡಿಸಿಕೊಳ್ಳದ ನಿವೇದಿತಾ ತಮ್ಮನ್ನು ಇಷ್ಟಪಡುವ ಲಕ್ಷಾಂತರ ಅಭಿಮಾನಿಗಳಿಗಾಗಿ ಹಾಟ್ ಹಾಟ್ ಫೋಟೋಗಳು ಮತ್ತು ವಿಡಿಯೋಗಳನ್ನ ನಿರಂತರವಾಗಿ ಹಂಚಿಕೊಳ್ಳುತ್ತಿದ್ದಾರೆ.