ನಿಶ್ಚಿತಾರ್ಥ, ಮದುವೆಯ ಸುದ್ದಿಯೇ ಇಲ್ಲ.. ಏಕಾಏಕಿ ಮಕ್ಕಳನ್ನು ಪರಿಚಯಿಸಿದ ನಟಿ ನಿವೇತಾ..! ಫ್ಯಾನ್ಸ್‌ ಶಾಕ್‌

Thu, 04 Jul 2024-2:46 pm,

ಬಹುಭಾಷಾ ನಟಿ, ಮಲ್ಲು ಸುಂದರಿ ನಿವೇತಾ ಥಾಮಸ್‌ ವೇದಿಕೆಯ ಮೇಲೆ ಏಕಾಏಕಿ ತಮ್ಮ ಗಂಡ ಮತ್ತು ಇಬ್ಬರು ಮಕ್ಕಳನ್ನು ಪರಿಚಯಿಸಿದ್ದಾರೆ. ಇದರಿಂದಾಗಿ ಆಕೆಯ ಅಭಿಮಾನಿಗಳು ಶಾಕ್‌ನಲ್ಲಿದ್ದಾರೆ. ಹಾಗಾದರೆ ನಿವೇತಾ ಮದುವೆ ಯಾವಾಗ ಆಯ್ತು, ಗಂಡ ಯಾರು, ಮಕ್ಕಳು ಈಗ ಹೇಗಿದ್ದಾರೆ..? ಬನ್ನಿ ನೋಡೋಣ..   

ನಿವೇತಾ ಥಾಮಸ್ ಬಾಲ ಕಲಾವಿದೆಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. 2011 ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರ 'ಚೆಪ್ಪಾ ಕುರಿಶ್' ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ʼಜಂಟಲ್‌ಮ್ಯಾನ್ʼ ಸಿನಿಮಾದ ಮೂಲಕ ಟಾಲಿವುಡ್‌ಗೆ ಪ್ರವೇಶ ಮಾಡಿದರು. ನಾನಿ ದ್ವಿಪಾತ್ರದಲ್ಲಿ ನಟಿಸಿದ ಈ ಸಿನಿಮಾ ಹಿಟ್‌ ಆಗಿದೆ..  

ಎರಡನೇ ಬಾರಿಗೆ ನಾನಿ ಜೊತೆ ʼನಿನ್ನು ಕೋರಿʼ ಸಿನಿಮಾದಲ್ಲಿ ನಟಿಸಿದ ನಂತರ ನಿವೇತಾಗೆ ತೆಲುಗಿನಲ್ಲಿ ಆಫರ್‌ಗಳು ಸಾಲುಗಟ್ಟಿ ನಿಂತವು. ಅದೇ ಸಮಯದಲ್ಲಿ, ಎನ್ಟಿಆರ್ ಚಿತ್ರದಲ್ಲಿ ನಟಿಸಲು ಈ ಸುಂದರಿ ಅವಕಾಶ ಪಡೆದರು. ಬಾಬಿ ನಿರ್ದೇಶನದ ʼಜೈ ಲವಕುಶʼ ಚಿತ್ರದಲ್ಲಿ ನಿವೇತಾ ಥಾಮಸ್ ಎರಡನೇ ನಾಯಕಿಯಾಗಿ ಕಾಣಿಸಿಕೊಂಡು, ಸತತ ಮೂರು ಹಿಟ್‌ ಸಿನಿಮಾಗಳನ್ನು ನೀಡಿದರು.  

ಪವನ್‌ ಕಲ್ಯಾಣ್‌ ನಟನೆಯ ವಕೀಲ್ ಸಾಬ್ ಸೇರಿದಂತೆ ಸಾಕಷ್ಟು ಹಿಟ್‌ ಸಿನಿಮಾದಲ್ಲಿ ನಟಿಸಿದರೂ ಸಹ ನಿವೇತಾಗೆ ಸ್ಟಾರ್ ಪಟ್ಟ ಸಿಗಲಿಲ್ಲ. ಅಲ್ಲದೆ, ಇತ್ತೀಚೆಗೆ ನಟಿಗೆ ಸಿನಿಮಾ ಆಫರ್‌ಗಳು ಕಡಿಮೆಯಾಗಿವೆ.   

ಸಧ್ಯ ನನಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ಹೇಳುವ ಮೂಲಕ ನಿವೇತಾ ಥಾಮಸ್ ಶಾಕ್ ನೀಡಿದ್ದಾರೆ. ನಿಜವಾಗಲೂ ನಟಿ ಮದುವೆಯಾಗಿದ್ದಾಳಾ? ಅಂತ ಅವರ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ. ಆದರೆ ನಿವೇದಾ ಮದುವೆಯಾಗಿದ್ದು ನಿಜ ಜೀವನದಲ್ಲಿ ಅಲ್ಲ ಸಿನಿಮಾದಲ್ಲಿ.   

ಹೌದು.. '35-ಚಿನ್ನ ಕಥಾ ಕಾದು' ಎನ್ನುವ ಸಿನಿಮಾದ ಮೂಲಕ ನಿವೇತಾ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ನಿವೇದಾ... ನನಗೆ ಮದುವೆಯಾಗಿದೆ... ಇವರು ನನ್ನ ಗಂಡ ಮತ್ತು ಇವರೇ ನನ್ನ ಇಬ್ಬರು ಮಕ್ಕಳು ಎಂದು ವೇದಿಕೆಯಲ್ಲಿದ್ದ ಜನರಿಗೆ ತೋರಿಸಿದರು.   

35 ಚಿತ್ರದಲ್ಲಿ ನಿವೇತಾ ಇಬ್ಬರು ಮಕ್ಕಳೊಂದಿಗೆ ವಿವಾಹಿತ ಗೃಹಿಣಿಯಾಗಿ ನಟಿಸಿದ್ದಾರೆ ಅಷ್ಟೇ, ನಿಜವಾಗಿಯೂ ಅವರಿಗೆ ಮದುವೆಯಾಗಿಲ್ಲ. ಸುರೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರಾಣಾ ಅವರು ಈ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಪ್ರಿಯದರ್ಶಿ ಮತ್ತು ವಿಶ್ವದೇವ್ ರಾಚಕೊಂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಂದ ಕಿಶೋರ್ ನಿರ್ದೇಶನ ಈ ಸಿನಿಮಾ 35 ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link