ಇಎಂಐ ಮಿಸ್ ಆದರೂ ಹೆಚ್ಚಿನ ದಂಡವಿಲ್ಲ : ಆರ್‌ಬಿಐ ಅಧಿಸೂಚನೆ

Fri, 03 Nov 2023-9:22 am,

ಅಂಕಿಅಂಶಗಳ ಪ್ರಕಾರ, ರಿಸರ್ವ್ ಬ್ಯಾಂಕ್ ಪ್ರಕಟಣೆಯ ನಂತರ ಎರಡರಿಂದ ಮೂರು ಕೋಟಿ ಗ್ರಾಹಕರು ಇದರ ನೇರ ಪ್ರಯೋಜನ ಪಡೆಯುತ್ತಾರೆ . ಅಲ್ಲದೆ, ಈ ನಿಯಮವು ಎಲ್ಲಾ ಬ್ಯಾಂಕುಗಳು ಮತ್ತು NBFC ಗಳಿಗೆ ಅನ್ವಯಿಸುತ್ತದೆ. 

ಗ್ರಾಹಕರು ಇಎಂಐ ನಿಗದಿತ ದಿನಾಂಕವನ್ನು ತಪ್ಪಿಸಿಕೊಂಡರೆ, ಅಂದರೆ ಅದು ಬೌನ್ಸ್ ಆಗಿದ್ದರೆ, ಬ್ಯಾಂಕ್‌ಗಳು ಅವರಿಗೆ ಭಾರಿ ದಂಡವನ್ನು ವಿಧಿಸುವುದು   ಇಲ್ಲಿಯವರೆಗೆ ನಡೆದುಕೊಂಡು ಬಂದಿರುವಂಥಹ  ಪರಿಪಾಠ. ಇದರರ್ಥ ನಿಗದಿತ ದಿನಾಂಕದ ನಂತರ EMI ಪಾವತಿಸಲು ಬ್ಯಾಂಕ್‌ನಿಂದ ಯಾವುದೇ ಗ್ರೇಸ್ ಅವಧಿ  ನೀಡಲಾಗುವುದಿಲ್ಲ.   

ಆದರೆ ಮುಂದಿನ ದಿನಗಳಲ್ಲಿ ಈ ಎಲ್ಲಾ ನಿಯಮಗಳು ಬದಲಾಗಲಿವೆ. ಆರ್‌ಬಿಐ ಇದಕ್ಕೆ ಇನ್ನೂ ದೃಢವಾದ ದಿನಾಂಕವನ್ನು ನೀಡದಿದ್ದರೂ, ಜನವರಿ 1, 2024 ರಿಂದ ನಿಯಮವನ್ನು ಜಾರಿಗೆ ತರುವ ನಿರೀಕ್ಷೆಯಿದೆ. 

ಜನವರಿ 2024 ರಿಂದ ಸಾಲಗಾರರಿಗೆ ಒಂದು ವಾರದ ಕಾಲಾವಕಾಶ ನೀಡಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ತಮ್ಮ EMI ಬೌನ್ಸ್ ಆಗಿದ್ದರೆ ಗ್ರಾಹಕರು ಒಂದು ವಾರದವರೆಗೆ ಭಯಪಡುವ ಅಗತ್ಯವಿಲ್ಲ. ಆ EMI ಮೊತ್ತವನ್ನು ಪಾವತಿಸಲು ಗ್ರಾಹಕರಿಗೆ 7 ದಿನಗಳ ಅವಕಾಶವಿರುತ್ತದೆ. 

ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳ ಮೇಲೆ ನಿಗಾ ಇರಿಸಿದೆ. ದೊಡ್ಡ ಬ್ಯಾಂಕ್‌ಗಳ ವಿರುದ್ಧ ಆರ್‌ಬಿಐ ಕ್ರಮ ಕೈಗೊಂಡಿದೆ. ಮುಂಬರುವ ದಿನಗಳಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಆರ್‌ಬಿಐನಿಂದ ಇನ್ನೂ ಹಲವು ಕ್ರಮಗಳನ್ನು ನಾವು ನಿರೀಕ್ಷಿಸಬಹುದು. 

ಭಾರತೀಯ ರಿಸರ್ವ್ ಬ್ಯಾಂಕ್ CIBIL, ಎಕ್ಸ್‌ಪೀರಿಯನ್ ಮತ್ತು ಇತರ ಎಲ್ಲಾ ಕ್ರೆಡಿಟ್ ರಿಪೋರ್ಟಿಂಗ್ ಏಜೆನ್ಸಿಗಳಿಗೆ ನಿಯಮಗಳನ್ನು ಬಿಗಿಗೊಳಿಸಿದೆ. ಕ್ರೆಡಿಟ್ ಸ್ಕೋರ್ ಸಂಬಂಧಿತ ವಹಿವಾಟುಗಳಲ್ಲಿ ತೊಡಗಿರುವ ಕಂಪನಿಗಳ ವಿರುದ್ಧ ಕೇಂದ್ರ ಬ್ಯಾಂಕ್ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಗ್ರಾಹಕರ ಕ್ರೆಡಿಟ್ ಸ್ಕೋರ್ ಪ್ರಶ್ನಿಸಿದಾಗ ಅಲರ್ಟ್ ಸಂದೇಶವನ್ನು ಕಳುಹಿಸುವುದು ಅಗತ್ಯ ಎಂದು ಆರ್‌ಬಿಐ ಹೇಳಿದೆ.   

RBI ಹೊರಡಿಸಿದ ಮತ್ತೊಂದು ಪತ್ರಿಕಾ ಪ್ರಕಟಣೆಯಲ್ಲಿ, ಕ್ರೆಡಿಟ್ ಸಂಸ್ಥೆಗಳು ಕ್ಯಾಲೆಂಡರ್ ವರ್ಷದಲ್ಲಿ ಒಮ್ಮೆ ಗ್ರಾಹಕರಿಗೆ (ಕ್ರೆಡಿಟ್ ಇತಿಹಾಸ ಹೊಂದಿರುವ) ಉಚಿತ ಕ್ರೆಡಿಟ್ ವರದಿಯನ್ನು ಒದಗಿಸಬೇಕು. ಇದಕ್ಕಾಗಿ ಬ್ಯಾಂಕ್‌ಗಳು ಮತ್ತು ಕಂಪನಿಗಳು ತಮ್ಮ ವೆಬ್‌ಸೈಟ್‌ನಲ್ಲಿ ಲಿಂಕ್ ಅನ್ನು ಸಹ ಒದಗಿಸಬೇಕು. ಈ ಸೌಲಭ್ಯದ ಮೂಲಕ ಗ್ರಾಹಕರು ಉಚಿತ ಕ್ರೆಡಿಟ್ ವರದಿಯನ್ನು ಸುಲಭವಾಗಿ ಪಡೆಯಬಹುದು ಎಂದು ಆರ್‌ಬಿಐ ಹೇಳಿದೆ. ಈ ಹೊಸ ನಿಯಮಗಳ ಸುತ್ತೋಲೆಯನ್ನು ಆರ್‌ಬಿಐ ಅಕ್ಟೋಬರ್ 26 ರಂದು ಹೊರಡಿಸಿದೆ. ಸುತ್ತೋಲೆಯನ್ನು ಪ್ರಕಟಿಸಿದ ಆರು ತಿಂಗಳ ನಂತರ ಈ ನಿಯಮಗಳು ಜಾರಿಗೆ ಬರುತ್ತವೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link