ಹೇರ್ ಡೈ ಬೇಡವೇ ಬೇಡ... ಅಕಾಲಿಕ ಬಿಳಿ ಕೂದಲಿನ ಸಮಸ್ಯೆಗೆ ರಾಮಬಾಣ ಈ ಸೀರಮ್..!
ಬಿಳಿ ಕೂದಲಿಗೆ ಯಾವುದೇ ಹೇರ್ ಡೈ ಅಗತ್ಯವಿಲ್ಲ. ಬದಲಿಗೆ ಮನೆಯಲ್ಲೇ ಹೇರ್ ಸೀರಮ್ ತಯಾರಿಸಿ ಬಳಸುವುದು ನಿಮ್ಮ ಕೂದಲನ್ನು ಸುಲಭವಾಗಿ ಗಾಢ ಕಪ್ಪಾಗಿಸುತ್ತದೆ.
ಹೇರ್ ಸೀರಮ್ ತಯಾರಿಸಲು ಬೇಕಾಗುವ ಪದಾರ್ಥಗಳು, ಕಲೋಂಜಿ, ಮೆಂತ್ಯ ಕಾಳುಗಳು ಹಾಗೂ ವಿಟಮಿನ್ ಇ ಕ್ಯಾಪ್ಸುಲ್ ಬಳಸಿ ಕೂದಲನ್ನು ಕಪ್ಪಾಗಿಸಬಹುದು.
ಸಮ ಪ್ರಮಾಣದದಲ್ಲಿ ಕಲೋಂಜಿ, ಮೆಂತ್ಯ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಒಂದು ಗ್ಲಾಸ್ ನೀರು ಹಾಕಿ. ನೀರು ಅರ್ಧ ಆಗುವವರೆಗೂ ಕಾಯಿಸಿ.
ಕಲೋಂಜಿ, ಮೆಂತ್ಯ ಸಾಫ್ಟ್ ಆಗುವವರೆಗೂ ನೀರನ್ನು ಕಾಯಿಸಿದ ಬಳಿಕ ಅದನ್ನು ತಣ್ಣಗಾಗಲು ಬಿಡಿ. ನಂತರ ಮಿಕ್ಸರ್ ಗೆ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿ. ನೀರನ್ನು ಶೋಧಿಸಿಕೊಳ್ಳಿ.
ಶೋಧಿಸಿಟ್ಟ ನೀರಿನಲ್ಲಿ ಒಂದು ವಿಟಮಿನ್ ಇ ಕ್ಯಾಪ್ಸುಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಈ ರೀತಿಯಾಗಿ ಮನೆಯಲ್ಲೇ ತಯಾರಿಸಿದ ಸೀರಮ್ ಅನ್ನು ಒಂದು ಸ್ಪ್ರೆ ಬಾಟಲಿನಲ್ಲಿ ಹಾಕಿ ನಿತ್ಯ ರಾತ್ರಿ ಮಲಗುವ ಮೊದಲು ಇದನ್ನು ಕೂದಲಿಗೆ ಸ್ಪ್ರೇ ಮಾಡಿ ಲಘು ಮಸಾಜ್ ಮಾಡಿ ಮಲಗಿ.
ಈ ಹೇರ್ ಸೀರಮ್ ಅನ್ನು ಕೂದಲಿಗೆ ಹಚ್ಚಿ ಮರುದಿನ ತಲೆಗೆ ಸ್ನಾನ ಮಾಡುವ ಅಗತ್ಯವಿಲ್ಲ. ಆದರೆ, ಒಂದೆರಡು ವಾರ ನಿತ್ಯ ರಾತ್ರಿ ಈ ನೀರನ್ನು ಬಿಳಿ ಕೂದಲಿಗೆ ಬಳಸುವುದರಿಂದ ಬಿಳಿ ಕೂದಲು ಶೀಘ್ರದಲ್ಲೇ ಮತ್ತೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಮನೆಯಲ್ಲೇ ತಯಾರಿಸಿದ ಈ ಹೇರ್ ಸೀರಮ್ ಅನ್ನು ಒಮ್ಮೆ ತಯಾರಿಸಿದರೆ 15 ದಿನಗಳವರೆಗೆ ಶೇಖರಿಸಬಹುದಾಗಿದ್ದು, ಇದರಿಂದ ಬೆಳ್ಳಗಾಗಿರುವ ಕೂದಲು ಕಪ್ಪಾಗುವುದರ ಜೊತೆಗೆ ಕಾಂತಿಯುತವೂ ಆಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.