ದುಬಾರಿ ಹೋಟೆಲ್‌ಗಳಲ್ಲಿ ಅಧಿಕ ಹಣ ಖರ್ಚು ಮಾಡುವ ಅಗತ್ಯವೇ ಇಲ್ಲ: ಕೇವಲ 20-40 ರೂ.ಗೆ ಸಿಗುತ್ತೆ ಎಸಿ ರೂ
ಭಾರತೀಯ ರೈಲ್ವೆಯಲ್ಲಿ ಪ್ರತಿದಿನ ಕೋಟಿಗಟ್ಟಲೆ ಜನರು ಪ್ರಯಾಣಿಸುತ್ತಾರೆ. ಒಂದು ನಗರದಿಂದ ಇನ್ನೊಂದು ನಗರಕ್ಕೆ ಪ್ರಯಾಣಿಸಲು ರೈಲು ತುಂಬಾ ಅನುಕೂಲಕರ ಸಾಧನವಾಗಿದೆ.
ಕೆಲವೊಮ್ಮೆ ಕನೆಕ್ಟಿಂಗ್ ರೈಲುಗಳಿಗಾಗಿ ಮತ್ತು ನಿಗದಿತ ಸಮಯಕ್ಕಾಗಿ ಕೆಲವು ಕಡೆ ಕಾಯಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಹತ್ತಿರದ ಒಳ್ಳೆಯ ಹೋಟೆಲ್‌ಗಳಿಗೆ ಹೋಗಿ ವಿಶ್ರಾಂತಿ ಪಡೆಯಲು ಬಯಸಿದರೆ ಅದಕ್ಕಾಗಿ ಭಾರೀ ಮೊತ್ತ ತೆತ್ತಬೇಕಾಗುತ್ತದೆ. ಆದರೆ IRCTC ಪರಿಚಯಿಸಿರುವ ವಿಶೇಷ ಸೇವೆಯಡಿ ನೀವು ಹೆಚ್ಚು ಹಣ ಕಡಿಮೆ ಮಾಡಿದೆಯೂ ಆರಾಮವಾಗಿ ವಿಶ್ರಾಂತಿ ಪಡೆದು ಪ್ರಯಾಣಿಸಬಹುದು.
ರೈಲುಗಳಲ್ಲಿ ಪ್ರಯಾಣಿಸುವ ಜನರಿಗೆ ಈಗ ಉತ್ತಮ ಮತ್ತು ಅದ್ಭುತವಾದ ಸೌಲಭ್ಯವನ್ನು ನೀಡಲು ಐಆರ್‌ಸಿಟಿಸಿ ಮುಂದಾಗಿದೆ. ನೀವು ಐಆರ್‌ಸಿಟಿಸಿಯ ಈ ಸೌಲಭ್ಯವನ್ನು ಪಡೆದರೆ ‘ಅದೇ ರೈಲ್ವೆ ಬುಕಿಂಗ್ ನಲ್ಲೇ ದುಬಾರಿ ಹೋಟೆಲ್‌ಗಳ ರೀತಿಯಲ್ಲೇ ಇರುವ ಏರ್ ಖಂಡಿಷನ್ ರೂಮುಗಳಲ್ಲಿ ಕೆಲವು ಗಂಟೆಗಳ ಕಾಲ ತಂಗಿ ವಿಶ್ರಾಂತಿ ಪಡೆದು ಮುಂದಿನ ಪ್ರಯಾಣ ಬೆಳೆಸಬಹುದಾದ ಅವಕಾಶವನ್ನು ಕಲ್ಪಿಸಿದೆ.
ಐಆರ್‌ಸಿಟಿಸಿ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ದರದಲ್ಲಿ ಈ ಸೌಲಭ್ಯವನ್ನು ಒದಗಿಸುತ್ತಿದೆ.
ಐಆರ್‌ಸಿಟಿಸಿ ಪರಿಚಯಿಸಿರುವ ಈ ಸೌಲಭ್ಯದ ಪ್ರಕಾರ ನೀವು ನಿಮ್ಮ ಮುಂದಿನ ಪ್ರಯಾಣದ ಸಮಯದವರೆಗೆ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾಯುವ ಬದಲು ಕೇವಲ 20 ಅಥವಾ 40 ರೂಪಾಯಿಗಳನ್ನು ಖರ್ಚು ಮಾಡಿ ಒಳ್ಳೆಯ ಹೋಟೆಲ್ ಗಳಲ್ಲಿ ಇರುವಂಥ ರೂಮುಗಳಲ್ಲೇ ತಂಗಿ ವಿಶ್ರಾಂತಿ ಪಡೆಯಬಹುದಾಗಿದೆ.
ವಿಶೇಷವೆಂದರೆ ಈ ಭಾರತೀಯ ರೈಲ್ವೆಯ ವಿಶ್ರಾಂತ ಕೊಠಡಿಗಳಲ್ಲಿ ಐಷಾರಾಮಿ ಹೋಟೆಲ್‌ಗಳಲ್ಲಿ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಇದಕ್ಕಾಗಿ ನೀವು ದೃಢೀಕೃತ ಅಥವಾ RAC ಟಿಕೆಟ್ ಹೊಂದಿರಬೇಕು ಅಷ್ಟೇ. ಎಲ್ಲಾ ದೊಡ್ಡ ದೊಡ್ಡ ರೈಲ್ವೆ ನಿಲ್ದಾಣಗಳಲ್ಲಿ ನೀವು ಸುಲಭವಾಗಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ಮೂಲಭೂತವಾಗಿ ನೀವು ಈ ಸೌಲಭ್ಯದ ವ್ಯಾಪ್ತಿಗೆ ಒಳಪಟ್ಟಿದ್ದರೆ ಕೊಠಡಿಗಳನ್ನು ಬುಕ್ ಮಾಡಲು ಪ್ರಯಾಣಿಕರಿಗೆ ಸಹಾಯ ಮಾಡಲಾಗುತ್ತದೆ. ಇದಕ್ಕೆ "ರಿಟೈರಿಂಗ್ ರೂಮ್ " ಎಂದು ಕರೆಯಲಾಗುತ್ತದೆ. ಈ ಕೊಠಡಿಗಳು ರೈಲ್ವೆ ನಿಲ್ದಾಣದಲ್ಲೇ ಇರುತ್ತವೆ. ಸಿಂಗಲ್, ಡಬಲ್ ಮತ್ತು ಡಾರ್ಮಿಟರಿ ಮಾದರಿಯಲ್ಲಿ ಲಭ್ಯವಿರುತ್ತವೆ. ಎಸಿ ಮತ್ತು ನಾನ್ ಎಸಿ ಸೌಲಭ್ಯಗಳು ಕೂಡ ಲಭ್ಯ. ಇದಲ್ಲದೆ, ನೀವು 1 ರಿಂದ 48 ಗಂಟೆಗಳ ಕಾಲ ಈ ಕೊಠಡಿಗಳನ್ನು ಬುಕ್ ಮಾಡಬಹುದಾಗಿದೆ.
ಈ ವಿಶೇಷ ವಿಶ್ರಾಂತಿ ಸೌಲಭ್ಯಕ್ಕೆ ಐಆರ್‌ಸಿಟಿಸಿ ಕೇವಲ 20 ರಿಂದ 40 ರೂಪಾಯಿ ಅನ್ನು ಚಾರ್ಜ್ ಮಾಡುತ್ತದೆ. ರಿಟೈರಿಂಗ್ ರೂಮ್ (Retiring room) ಬುಕ್ ಮಾಡಲು 24 ಗಂಟೆಗಳ ಕಾಲಕ್ಕೆ 20 ರೂಪಾಯಿ ಪಾವತಿಸಬೇಕಾಗುತ್ತದೆ.
ವಸತಿ ನಿಲಯದ ಕೊಠಡಿಯನ್ನು ತೆಗೆದುಕೊಳ್ಳಲು ಬಯಸಿದರೆ 24 ಗಂಟೆಗಳವರೆಗೆ 10 ರೂಪಾಯಿ ಪಾವತಿಸಬೇಕಾಗುತ್ತದೆ. 24 ರಿಂದ 48 ಗಂಟೆಗಳ ನಡುವಿನ ವಿಶ್ರಾಂತಿ ಕೊಠಡಿಯನ್ನು ಪಡೆಯಲು ಬಯಸಿದರೆ 40 ರೂಪಾಯಿ ಪಾವತಿಸಬೇಕಾಗುತ್ತದೆ.
ಮೊದಲಿಗೆ https://irctctourism.com/ ವೆಬ್ ಸೈಟ್ ಗೆ ಭೇಟಿಕೊಟ್ಟು ರಿಟೈರಿಂಗ್ ರೂಮ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ PNR ಸಂಖ್ಯೆಯನ್ನು ನಮೂದಿಸಿ ಬಳಿಕ ನಿಮಗೆ ಬೇಕಾದ ಮಾದರಿಯ Delux/AC/NonAC ರೂಮುಗಳನ್ನು ಆಯ್ಕೆ ಮಾಡಬೇಕು. ಬುಕಿಂಗ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಗದಿತ ಶುಲ್ಕವನ್ನು ಪಾವತಿಸಿ ಬುಕಿಂಗ್ ಅನುಮೋದಿಸಿದ ನಂತರ ನಿಮಗೆ ರೂಮು ಸಿಗುವುದು ಖಾತರಿಯಾಗುತ್ತದೆ. ರೂಮುಗಳ ಸಂಖ್ಯೆ ಮತ್ತು ಸ್ಥಳದ ಮಾಹಿತಿಯನ್ನು ನೀವು ವೆಬ್ ಸೈಟ್ ನಲ್ಲಿ ನೋಂದಾಯಿಸಿರುವ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.