Weight Loss: ತೂಕ ಇಳಿಸಿಕೊಳ್ಳಲು ಜಿಮ್‌ಗೆ ಹೋಗಬೇಕಿಲ್ಲ, ಈ 5 ಅಭ್ಯಾಸ ರೂಢಿಸಿಕೊಳ್ಳಿ

Wed, 29 May 2024-1:17 pm,

ಜಿಮ್‌ಗೆ ಹೋಗುವ ಅವಶ್ಯಕತೆಯೇ ಇಲ್ಲ, ಹಾಗಂತ ನಿಮ್ಮಿಷ್ಟದ ಆಹಾರಗಳನ್ನು ಬಿಡುವ ಪ್ರಮೇಯವೂ ಇಲ್ಲ. ಬದಲಿಗೆ ನಿತ್ಯ ನಿಮ್ಮ ಜೀವನಶೈಲಿಯಲ್ಲಿ ಈ ಐದು ಅಭ್ಯಾಸಗಳನ್ನು ರೂಢಿಸಿಕೊಂಡರೆ, ಹೆಚ್ಚಾಗಿರುವ ತೂಕವನ್ನು ಸುಲಭವಾಗಿ ಇಳಿಸಬಹುದು. ತೂಕ ಇಳಿಕೆಗೆ ಸಹಾಯಕವಾಗುವ ಆ 5 ಅಭ್ಯಾಸಗಳೆಂದರೆ... 

ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಇದರಿಂದ ಜೀರ್ಣಾಂಗವ್ಯವಸ್ಥೆ ಆರೋಗ್ಯಕರವಾಗಿರುವುದಲ್ಲದೆ, ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದರಿಂದಾಗಿ, ದೇಹದಲ್ಲಿ ಶೇಖರವಾಗಿರುವ ಕ್ಯಾಲೋರಿಗಳನ್ನು ವೇಗವಾಗಿ ಸುಡಲು ಸಹಾಯಕವಾಗಿದೆ.   

ಊಟದ ಸಮಯದಲ್ಲಿ ನೀರು ಕುಡಿಯುವುದು ಒಳ್ಳೆಯದಲ್ಲ. ಆದರೆ, ನೀವು ಬೆಳಿಗ್ಗೆ, ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ಮಾಡುವ ಕನಿಷ್ಠ 15-20 ನಿಮಿಷಗಳ ಮೊದಲು ನೀರು ಕುಡಿಯಿರಿ. ಇದರಿಂದ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ. ತೂಕವೂ ಕಡಿಮೆಯಾಗುತ್ತದೆ. 

ತೂಕ ಇಳಿಕೆಗೆ ಊಟ ಮಾಡಬಾರದು ಎಂಬುದು ತಪ್ಪು ಕಲ್ಪನೆ. ಆದರೆ, ಮೂರು ಬಾರಿಗೆ ಹೆಚ್ಚು ತಿನ್ನುವ ಬದಲಿಗೆ ವಿರಾಮ ಕೊಟ್ಟು ನಾಲ್ಕೈದು ಬಾರಿ ಸ್ವಲ್ಪ ಸ್ವಲ್ಪವೇ ತಿನ್ನಬಹುದು. ಇದರಿಂದ ಹೆಚ್ಚು ಕ್ಯಾಲೋರಿಗಳು ಶೇಖರಣೆಯಾಗುವುದನ್ನು ತಡೆಯಬಹುದು. 

ಬದಲಾದ ಜೀವನಶೈಲಿಯಲ್ಲಿ ರೆಡಿಮೆಡ್ ಫುಡ್ ಗಳ ಮೇಲೆ ಅವಲಂಬನೆ ಹೆಚ್ಚಾಗುತ್ತಿದೆ. ಆದರೆ, ಈ ಆಹಾರಗಳಲ್ಲಿ  ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು, ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬನ್ನು ಹೊಂದಿರುತ್ತವೆ. ಹಾಗಾಗಿ, ನೀವು ತೂಕ ಇಳಿಕೆ ಬಗ್ಗೆ ಕಾಳಜಿ ವಹಿಸುವುದಾದರೆ ತ್ವರಿತ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿ. 

ತೂಕ ಇಳಿಸಿಕೊಳ್ಳಲು ಜಿಮ್‌ಗೆ ಹೋಗುವುದು ಅನಿವಾರ್ಯವಲ್ಲ.  ಆದರೆ, ನಿತ್ಯ ಅರ್ಧಗಂಟೆ ವಾಕ್ ಮಾಡುವುದು, ಮನೆಯಲ್ಲಿ ಮಾಡಬಹುದಾದ ಸುಲಭ ವ್ಯಾಯಾಮಗಳನ್ನು ಮಾಡುವುದರಿಂದ ಸುಲಭವಾಗಿ ತ್ವರಿತವಾಗಿ ತೂಕ ಇಳಿಸಿಕೊಳ್ಳಬಹುದು. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link