ಔಷಧೀಯ ಅಗತ್ಯವಿಲ್ಲ..! ರಕ್ತಹೀನತೆ ಸಮಸ್ಯೆಗೆ ಈ ಆಹಾರಗಳೇ ರಾಮಬಾಣ: ತಿಂಗಳಲ್ಲಿ ಸಿಗುತ್ತೆ ಬೆಸ್ಟ್ ರಿಸಲ್ಟ್..!
ರಕ್ತಹೀನತೆ ಎನ್ನುವುದು ಕೇವಲ ಸಮಸ್ಯೆಯಲ್ಲ, ಅದು ಇನ್ನೂ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ರಕ್ತಹೀನತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ದೇಹದಲ್ಲಿ ರಕ್ತದ ಕೊರತೆಯಾಗದಂತೆ ನೋಡಿಕೊಳ್ಳಬೇಕು.
ರಕ್ತಹೀನತೆ ಸಮಸ್ಯೆ ನಿವಾರಣೆಗೆ ಔಷಧಿಗಿಂತಲೂ ಕೆಲವು ಆಹಾರಗಳು ಅತ್ಯುತ್ತಮ ಪರಿಹಾರವಾಗಿದೆ. ರಕ್ತಹೀನತೆ ನಿವಾರಿಸಬಲ್ಲ ಆಹಾರಗಳೆಂದರೆ...
ದಾಳಿಂಬೆ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗುತ್ತದೆ.
ಬಿಟ್ರೂಟ್ ಸೇವನೆ ಮಾಡುವುದರಿಂದ ರಕ್ತದ ಪ್ರಮಾಣ ಹೆಚ್ಚಳವೂ ಸೇರಿದಂತೆ ಹಲವು ಲಾಭಗಳಾಗುತ್ತವೆ.
ಬೆಲ್ಲದ ನೀರು ಕುಡಿಯುವುದು ಕೂಡ ದೇಹದಲ್ಲಿನ ರಕ್ತದ ಪ್ರಮಾಣವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.
ನೆನಸಿದ ಒಣದ್ರಾಕ್ಷಿ ಹಣ್ಣನ್ನು ತ್ತಿನ್ನುವುದರಿಂದ ರಕ್ತದ ಪ್ರಮಾಣ ಹೆಚ್ಚಳವಾಗುತ್ತದೆ ಮತ್ತು ನಿಶಕ್ತಿ ದೂರವಾಗುತ್ತದೆ.
ಪಾಲಕ್ ಸೊಪ್ಪನ್ನು ಕಬ್ಬಿಣದ ಬಾಣಲೆಯಲ್ಲಿ ಬೇಯಿಸಿ ತಿನ್ನುವುದರಿಂದ ರಕ್ತ ವೃದ್ಧಿಯಾಗುತ್ತದೆ.
ಖರ್ಜೂರದಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿದ್ದು, ನಿಯಮಿತವಾಗಿ ಇದರ ಸೇವನೆಯಿಂದ ರಕ್ತಹೀನತೆ ಸಮಸ್ಯೆಯಿಂದ ಪರಿಹಾರ ದೊರೆಯಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.