ಈ ಸೇವೆಗಳಿಗಾಗಿ ಬ್ಯಾಂಕ್ ಗೆ ಹೋಗುವ ಅಗತ್ಯವಿಲ್ಲ, ಕುಳಿತಲ್ಲೇ ಮುಗಿದು ಬಿಡುತ್ತದೆ ಕೆಲಸ
ನಿಮ್ಮ ಎಸ್‌ಬಿಐ ಡೆಬಿಟ್ ಕಾರ್ಡ್ ಕಳೆದುಹೋದರೆ, ನೀವು ಅದನ್ನು ತಕ್ಷಣ ಬ್ಲಾಕ್ ಮಾಡಬೇಕು. Onlinesbi.com ಗೆ ಲಾಗ್ ಇನ್ ಮಾಡುವ ಮೂಲಕ ಮನೆಯಿಂದಲೇ ಈ ಕೆಲಸವನ್ನು ಪೂರ್ಣಗೊಳಿಸಬಹುದು.
.ಡೆಬಿಟ್ ಕಾರ್ಡ್‌ನ ಪಿನ್ ಅನ್ನು ಕಾಲಕಾಲಕ್ಕೆ ಬದಲಾಯಿಸುವಂತೆ ಬ್ಯಾಂಕುಗಳು ಗ್ರಾಹಕರಿಗೆ ಸಲಹೆ ನೀಡುತ್ತವೆ. ಶಾಖೆಗೆ ಭೇಟಿ ನೀಡದೆ PIN onlinesbi.com ಮೂಲಕ ಪಿನ್ಫ್ ಅನ್ನು ಜನರೇಟ್ ಮಾಡಿಕೊಳ್ಳಬಹುದು.
ಎಸ್‌ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಅಂದರೆ ಆನ್‌ಲೈನ್ ಎಸ್‌ಬಿಐ ಪ್ಲಾಟ್‌ಫಾರ್ಮ್‌ಮೂಲಕ ಹೊಸ ಡೆಬಿಟ್ ಕಾರ್ಡ್ ಗಾಗಿ ರಿಕ್ವೆಸ್ಟ್ ಸಲ್ಲಿಸಬಹುದು.
ಇತ್ತೀಚೆಗೆ ಎಸ್‌ಬಿಐ ಡೆಬಿಟ್ ಕಾರ್ಡ್ ಪಡೆದಿದ್ದರೆ, ಅದನ್ನು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕವೂ ಆಕ್ಟಿವೇಟ್ ಮಾಡಿಕೊಳ್ಳಬಹುದು. ಅದಕ್ಕಾಗಿ ಬ್ಯಾಂಕ್ ಶಾಖೆಗೆ ಹೋಗುವ ಅಗತ್ಯವಿಲ್ಲ.
ನಿಮ್ಮ ಡೆಬಿಟ್ ಕಾರ್ಡ್‌ನ ಮಿತಿ ಅಥವಾ ಬಳಕೆಯ ವಿಧಾನವನ್ನು ಬದಲಾಯಿಸಲು ಬಯಸಿದರೆ, ನೀವು ಎಸ್‌ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕವೂ ಈ ಕೆಲಸವನ್ನು ಮಾಡಬಹುದು.