Non Taxable Income: ಈ ರೀತಿಯ ಆದಾಯಗಳಿಗೆ ನೀವು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ
ಹಣಕಾಸು ತಜ್ಞರ ಪ್ರಕಾರ, ಯಾವುದೇ ಆರ್ಥಿಕ ವರ್ಷದಲ್ಲಿ ನೀವು ಕೆಲವು ಆದಾಯಗಳಿಗೆ ತೆರಿಗೆ ಪಾವತಿಸ್ಳುವ ಅಗತ್ಯವಿಲ್ಲ. ಅವುಗಳನ್ನು ತೆರಿಗೆಯಲ್ಲದ ಆದಾಯ ಎಂತಲೂ ಕರೆಯಲಾಗುತ್ತದೆ. ಇಂತಹ ಆಹಾಯಗಳಲ್ಲೂ ಆದಾಯ ತೆರಿಗೆ ಲೆಕ್ಕಾಚಾರದಿಂಗ ಸಂಪೂರ್ಣವಾಗಿ ಹೊರಗಿಡಲಾಗಿರುತ್ತದೆ. ಹಾಗಿದ್ದರೆ, ಅಂತಹ ಆದಾಯಗಳು ಯಾವುವು? ಯಾವ ರೀತಿಯ ಆದಾಯದ ಮೇಲೆ ತೆರಿಗೆ ಪಾವಟಿಸುವಂತಿಲ್ಲ ಎಂದು ನೋಡುವುದಾದರೆ....
ಆದಾಯ ತೆರಿಗೆ ಮಾನದಂಡಗಳ ಪ್ರಕಾರ, ನೀವು ಉಡುಗೊರೆ ಮೂಲಕ ಪಡೆದ ಆದಾಯಗಳನ್ನು ತೆರಿಗೆಯ ಆದಾಯವೆಂದು ಪರಿಗಣಿಸಲಾಗುವುದಿಲ್ಲ. ಆದಾಗ್ಯೂ, ನೀವು ಸ್ವೀಕರಿಸುವ ಉಡುಗೊರೆಗಳ ಮೌಲ್ಯವು 50,000 ರೂ.ಗಿಂತ ಕಡಿಮೆಯಿದ್ದರೆ ಮಾತ್ರ ಈ ವಿನಾಯಿತಿ ಲಭ್ಯವಾಗಲಿದೆ.
ನೀವು ಒಂದು ಆರ್ಥಿಕ ವರ್ಷದಲ್ಲಿ ವಿಮಾ ಪಾಲಿಸಿಯ ಮೆಚ್ಯೂರಿಟಿ ಅಥವಾ ಇನ್ನೊಬ್ಬರ ಮರಣದಿಂದಾಗಿ ಪಡೆದ ಯಾವುದೇ ವಿಮಾ ಪಾಲಿಸಿಯ ಹಣವು ಆದಾಯ ತೆರಿಗೆಯಿಂದ ಮುಕ್ತವಾಗಿರುತ್ತದೆ.
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10(1) ಅಡಿಯಲ್ಲಿ ಕೃಷಿಯಿಂದ ಪಡೆದ ಆದಾಯಕ್ಕೂ ಸಹ ತೆರಿಗೆ ಪಾವತಿಸಬೇಕಾಗಿಲ್ಲ.
ದೀರ್ಘ ಸಮಯದ ಸೇವೆಗೆ ಉದ್ಯೋಗಿಗೆ ಕಂಪನಿ ತೊರೆದ ಬಳಿಕ ನೀಡಲಾಗುವ ಗ್ರಾಚ್ಯುಟಿ ಹಣಕ್ಕೂ ಕೂಡ ತೆರಿಗೆ ಪಾವಟಿಸುವ ಅಗತ್ಯವಿಲ್ಲ. ಸರ್ಕಾರೇತರ ನೌಕರರು ಗ್ರಾಚ್ಯುಟಿ ಕಾಯ್ದೆ 1972 ರ ಅಡಿಯಲ್ಲಿ ಈ ಸೌಲಭ್ಯವನ್ನು ಪಡೆಯಬಹುದು.
ನೀವು ಸರ್ಕಾರ ನಡೆಸುವ ಯಾವುದೇ ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆಗಳಂತಹ ಠೇವಣಿ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವುದರಿಂದಲೂ ಈ ಯೋಜನೆಗಳ ಮುಕ್ತಾಯದ ಸಮಯದಲ್ಲಿ ನೀವು ಪಡೆಯುವ ಒಟ್ಟು ಮೊತ್ತಕ್ಕೂ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ.