ಒಂದು ಮಾವಿನ ಹಣ್ಣಿನ ಬೆಲೆ ಸಾವಿರ ರೂಪಾಯಿ; ಅಂಥದ್ದೇನಿದೆ ಈ ಹಣ್ಣಲ್ಲಿ..?
ಕಳೆದ ವರ್ಷ 'ನೂರ್ ಜಹಾನ್' ಮಾವು ಅಷ್ಟೊಂದು ಸಂಖ್ಯೆಯಲ್ಲಿ ಫಸಲು ಕೊಟ್ಟಿರಲಿಲ್ಲ. ಆದರೆ ಈ ಬಾರಿಯ ಹವಾಮಾನದಿಂದಾಗಿ ಇದು ಉತ್ತಮ ಬೆಳೆ ಬಂದಿದೆ,. ಮಾವಿನಕಾಯಿ ಹಣ್ಣಾಗುವ ಮೊದಲೇ ಭಾರೀ ಬೆಲೆಗೆ ಬುಕ್ ಆಗಿ ಬಿಟ್ಟಿವೆ.
ಈ ಬಾರಿ 'ನೂರ್ ಜಹಾನ್' ಮಾವಿನ ಹಣ್ಣುಗಳ ತೂಕವು ಎರಡರಿಂದ ಮೂರುವರೆ ಕಿಲೋಗ್ರಾಂಗಳಷ್ಟಿದೆ. ಮಧ್ಯಪ್ರದೇಶ ಮತ್ತು ಗುಜರಾತ್ ನವರು ಈ ಹಣ್ಣನ್ನು ಮೊದಲೇ ಕಾಯ್ದಿರಿಸಿದ್ದಾರೆ.
ಇಂದೋರ್‌ನಿಂದ 250 ಕಿ.ಮೀ ದೂರದಲ್ಲಿರುವ ಕಟ್ಟಿವಾಡಾದ ಮಾವಿನ ಬೆಳೆಗಾರ ಶಿವರಾಜ್ ಸಿಂಗ್ ಜಾಧವ್, ಎಂಬವರ ತೋಟದಲ್ಲಿ ಮೂರು ನೂರ್ ಜಹಾನ್ ಮರಗಳಲ್ಲಿ ಸುಮಾರು 250 ಹಣ್ಣುಗಳು ಬಿಟ್ಟಿವೆ. ಈ ಎಲ್ಲಾ ಹಣ್ಣುಗಳ ಬುಕಿಂಗ್ ಈಗಾಗಲೇ ಮಾಡಲಾಗಿದೆ. ನೂರ್ ಜಹಾನ್‌ನ ಮಾವಿನಕಾಯಿಗ ಬೆಲೆ 500 ರಿಂದ 1,000 ರೂಗಳಷ್ಟಿರುತ್ತದೆ.
ನೂರ್ ಜಹಾನ್ ಮರಗಳು ಸಾಮಾನ್ಯವಾಗಿ ಜನವರಿಯಿಂದ ಫೆಬ್ರವರಿ ತಿಂಗಳಲ್ಲಿ ಹೂಬಿಡಲು ಪ್ರಾರಂಭಿಸುತ್ತವೆ. ಜೂನ್ ನಲ್ಲಿ ಹಣ್ಣುಗಳು ಮಾರಾಟಕ್ಕೆ ಸಿದ್ಧವಾಗುತ್ತವೆ. ಈ ಮಾವಿನಹಣ್ಣಿನ ಬೀಜವೇ ಸುಮಾರು 150 ರಿಂದ 200 ಗ್ರಾಂ ತೂಕವಿರುತ್ತವೆ.