Nora VS Janhavi: ಒಂದೇ ರೀತಿಯ ಬಟ್ಟೆ ಧರಿಸಿ ಪರಸ್ಪರರಿಗೆ ಸವಾಲೆಸಗಿದ ಬಾಲೀವುಡ್ ಲಲನೆಯರು, ಫೋಟೋ ನೋಡಿ!
ಯಾರ ಮೇಲೆ ಯಾರ ವರಸೆ? - ನೋರಾ ತನ್ನ ವಿಶಿಷ್ಟ ರೀತಿಯ ಫ್ಯಾಶನ್ ಗೆ ಹೆಸರುವಾಸಿಯಾಗಿದ್ದಾಳೆ ಮತ್ತು ತನ್ನದೇ ಆದ ಆಕರ್ಷಣೆ ಹೊಂದಿದ್ದಾಳೆ. ಅದು ಎಲ್ಲರಿಗೂ ಇಷ್ಟವಾಗುತ್ತದೆ. ಕೇವಲ ಜನಸಾಮಾನ್ಯರು ಅಷ್ಟೇ ಅಲ್ಲ ಜನವಿಶೇಷರು ಕೂಡ ಆಕೆಯ ಸ್ಟೈಲ್ ಗೆ ಫಿದಾ ಆಗುತ್ತಾರೆ ಮತ್ತು ಆಕೆಯ ಸ್ಟೈಲ್ ಕಾಪಿ ಮಾಡುವುದರಲ್ಲಿ ಹಿಂದೆ ಬೀಳುವುದಿಲ್ಲ. ಈ ಲಿಸ್ಟ್ ನಲ್ಲಿ ಜಾನ್ವಿ ಕಪೂರ್ ಹೆಸರೂ ಕೂಡ ಶಾಮೀಲಾಗಿದೆ. ಮೇಲಿನ ಚಿತ್ರ ನೋಡಿ ನೀವು ಅದೇ ಹೇಳಬಹುದು.
ಇಬ್ಬರ ಸ್ಟೈಲ್ ವಿಶೇಷವಾಗಿದೆ- ಈಗ ಈ ಚಿತ್ರವನ್ನೊಮ್ಮೆ ನೋಡಿ. ಈ ಚಿತ್ರದಲ್ಲಿ ನೋರಾ ಒಂದು ಮೀನಗುವ ತಾರೆಗಿಂತ ಕಮ್ಮಿಯೇನಿಲ್ಲ ಎನ್ನಬಹುದು. ಇದೆ ಕಾರಣಕ್ಕೆ ನೋರಾಳ ಅವತಾರ ಕೂಡ ಇತರರಿಗಿಂತ ಭಿನ್ನವಾಗಿ ಕಂಗೊಳಿಸುತ್ತದೆ. ಇನ್ನೊಂದೆಡೆ ಜಾನ್ವಿ ಕೂಡ ನೋರಾ ಧರಿಸಿರುವ ಹೋಲಿಕೆಯ ಡ್ರೆಸ್ ಧರಿಸಿ ತನ್ನ ಸೌಂದರ್ಯದ ಖಣಿಯನ್ನು ಅನಾವರಣಗೊಳಿಸಿದ್ದಾಳೆ/
ಪ್ರತಿಯೊಂದು ದಿರಿಸಿನಲ್ಲಿ ಸುಂದರ ಬೊಂಬೆಯಂತೆ ಕಾಣಿಸುತ್ತಾಳೆ - ಬಾಡಿಕಾನ್ ಡ್ರೆಸ್ ಕ್ಯಾರಿ ಮಾಡುವುದರಲ್ಲಿ ನೋರಾ ನಿಪುಣೆ. ಬಳಿಕ ಪ್ರಸಂಗ ಯಾವುದೇ ಇರಲಿ ನೋರಾ ತನ್ನದೇ ಆದ ಮೋಹಕ ರೀತಿಯಲ್ಲಿ ಅಲ್ಲಿನ ಹೈಲೈಟ್ ಆಗುತ್ತಾಳೆ. ಇನ್ನೊಂದೆಡೆ ಜಾನ್ವಿ ಕೂಡ ಥೈಕಟ್ ಡ್ರೆಸ್ ಧರಿಸಿ ಅಪಾರ ಮೆಚ್ಚುಗೆಯನ್ನು ಗಳಸಿದ್ದಾಳೆ ಮತ್ತು ತನ್ನ ಈ ಲುಕ್ ನಿಂದ ಅಭಿಮಾಹಿಗಳ ಮೇಲೆ ಮೋಡಿ ಮಾಡಿದ್ದಾಳೆ.
ಇಬ್ಬರಿಗೂ ಸರಿಸಾಟಿ ಯಾರೂ ಇಲ್ಲ - ಚೆಲುವೆಯರಿಬ್ಬರೂ ಅಪ್ಸರೆಗಿಂತ ಕಡಿಮೆಯಿಲ್ಲ. ಅದು ಜಾನ್ವಿಯೇ ಆಗಿರಲಿ ಅಥವಾ ನೋರಾ ಆಗಿರಲಿ, ಇಬ್ಬರೂ ಶೈಲಿಯ ವಿಷಯದಲ್ಲಿ ಪರಸ್ಪರ ಪ್ರಾಬಲ್ಯ ಮೆರೆಯುತ್ತಾರೆ ಮತ್ತು ಮೇಲಿನ ಚಿತ್ರ ಅದಕ್ಕೆ ಹಿಡಿದ ಕನ್ನಡಿಯಾಗಿದೆ. ನೋರಾ ತನ್ನ ಸ್ಟೈಲ್‌ನಿಂದ ಎಲ್ಲರ ಹೃದಯದಲ್ಲಿ ಸಂಚಲನ ಮೂಡಿಸಿದರೆ, ಜಾನ್ವಿ ಕೂಡ ಯಾರಿಗೂ ಕಡಿಮೆ ಇಲ್ಲ.
ಫ್ಯಾಶನ್ ನಲ್ಲಿ ಇಬ್ಬರಿಗೂ ಸ್ಪರ್ಧೆಯೇ ಇಲ್ಲ- ಈ ಡ್ರೆಸ್‌ನ ವಿಶೇಷತೆ ಎಂದರೆ ಎರಡೂ ಒಂದೇ ಮಾದರಿಯನ್ನು ಹಂಚಿಕೊಂಡಿವೆ. ಬೋಲ್ಡ್ ಮತ್ತು ಗ್ಲಾಮರಸ್, ಇಬ್ಬರೂ ಒಂದೇ ರೀತಿಯ ಉಡುಗೆಯಲ್ಲಿ ತುಂಬಾ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ, ಹೀಗಾಗಿ ನೋಡುಗರ ಕಣ್ಣುಗಳು ಇಬ್ಬರ ಮೇಲಿಂದಲ್ಲೂ ಕದಲುತ್ತಿಲ್ಲ.