ಮನೆಯ ಈ ದಿಕ್ಕಿನಲ್ಲಿ ಕನ್ನಡಿಯಿಟ್ಟು ಮುಖ ನೋಡಿದರೆ ಅದೃಷ್ಟವನ್ನೇ ನೋಡಿದಂತೆ: ತ್ರಿಮೂರ್ತಿಗಳ ದೈವಬಲದಿಂದ ಕುಬೇರ ಸಂಪತ್ತೇ ಒಲಿಯುವುದು!
ಮನೆಯಲ್ಲಿ ಇರುವ ಪ್ರತಿಯೊಂದು ವಸ್ತುವು ಮನೆಯಲ್ಲಿ ವಾಸಿಸುವ ಸದಸ್ಯರ ಮೇಲೆ ಪರಿಣಾಮ ಬೀರುವ ಶಕ್ತಿಯನ್ನು ಹೊಂದಿರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗುದೆ. ಇದೇ ಕಾರಣಕ್ಕೆ ಮನೆಗೆ ತರುವ ಪ್ರತೀ ವಸ್ತುವನ್ನೂ ಕೂಡ ಸರಿಯಾದ ಸ್ಥಳದಲ್ಲಿ ಇಡಬೇಕು ಎಂದು ಹೇಳುವುದು.
ಪ್ರಮುಖವಾಗಿ ಹಿಂದೂ ಧರ್ಮದಲ್ಲಿ ಈ ವಿಚಾರಕ್ಕೆ ವಿಶೇಷ ಮಾನ್ಯತೆಯನ್ನು ನೀಡಲಾಗಿದೆ. ಒಂದು ವೇಳೆ ವಾಸ್ತುವನ್ನು ಪಾಲಿಸದಿದ್ದರೆ, ಅದು ನಕಾರಾತ್ಮಕ ಶಕ್ತಿ ಸೃಷ್ಟಿಯಾಗಲು ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.
ಮನೆಯಲ್ಲಿ ಅತಿ ಹೆಚ್ಚಾಗಿ ಬಳಕೆಯಾಗುವ ಪ್ರಮುಖ ವಸ್ತುಗಳಲ್ಲಿ ಕನ್ನಡಿ ಕೂಡ ಒಂದು. ಹೀಗಾಗಿ ಈ ಕನ್ನಡಿಗಳನ್ನು ಇಡುವಾಗ ಕೆಲವೊಂದು ವಾಸ್ತು ನಿಯಮಗಳನ್ನು ಅನುಸರಿಸಬೇಕು. ವಾಸ್ತು ಪ್ರಕಾರ, ಕನ್ನಡಿಯನ್ನು ಇಟ್ಟರೆ ಅದೃಷ್ಟದ ಬಾಗಿಲು ತೆರೆಯುತ್ತದೆ. ಇಲ್ಲದಿದ್ದರೆ ಬಡತನ ಬರುತ್ತದೆ ಎಂಬುದು ನಂಬಿಕೆ.
ಅಂದಹಾಗೆ ಕನ್ನಡಿ ಇಡಲು ಪೂರ್ವ ಮತ್ತು ಉತ್ತರ ದಿಕ್ಕು ಮಂಗಳಕರ. ಉತ್ತರ ದಿಕ್ಕು ಸಂಪತ್ತಿನ ದೇವರಾದ ಕುಬೇರನ ಕೇಂದ್ರವಾಗಿದ್ದು, ಈ ದಿಕ್ಕಿನಲ್ಲಿ ಕನ್ನಡಿ ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಬರುತ್ತದೆ. ಜೊತೆಗೆ ವ್ಯಾಪಾರದಲ್ಲಿ ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ,
ಆದರೆ ಕನ್ನಡಿಯನ್ನು ಎಂದಿಗೂ ಪಶ್ಚಿಮ ಅಥವಾ ದಕ್ಷಿಣದ ಗೋಡೆಯ ಮೇಲೆ ಇಡಬಾರದು. ಇದು ವಾಸ್ತು ಪ್ರಕಾರವಿಲ್ಲ. ಈ ದಿಕ್ಕಿನಲ್ಲಿಟ್ಟರೆ ಮನೆಯ ಸದಸ್ಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಮನೆಯಲ್ಲಿ ಯಾವಾಗಲೂ ಅಪಶ್ರುತಿ ಇರುತ್ತದೆ. ಎಂದು ಹೇಳಲಾಗುತ್ತದೆ.
ಜೊತೆಗೆ ಮನೆಯಲ್ಲಿ ಮುರಿದ, ಚೂಪಾದ, ಮಸುಕಾದ ಅಥವಾ ಕೊಳಕು ಕನ್ನಡಿಯನ್ನು ಎಂದಿಗೂ ಮನೆಯಲ್ಲಿ ಇಡಬಾರದು. ಗಾಜು ಸ್ವಲ್ಪ ಒಡೆದಿದ್ದರೂ ಸಹ ತಕ್ಷಣ ಬಿಸಾಡಿ. ಇಂತಹ ಕನ್ನಡಿಯನ್ನು ಮನೆಯಲ್ಲಿಟ್ಟರೆ ಬಡತನದ ಜೊತೆಗೆ ಕುಟುಂಬ ಸದಸ್ಯರ ಪ್ರಗತಿ ನಿಲ್ಲುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.