Indian Railways: ಫ್ಲೈಟ್ ಅಲ್ಲ, ಭಾರತದ ಈ ರೈಲು ನಿಲ್ದಾಣಗಳಿಂದಲೂ ವಿದೇಶಕ್ಕೆ ಹೋಗಬಹುದು

Fri, 21 Apr 2023-10:57 am,

ವಿದೇಶಕ್ಕೆ ತೆರಳಲು ವಿಮಾನದಲ್ಲೇ ಹೋಗಬೇಕೆಂದಿಲ್ಲ. ಕೆಲವು ದೇಶಗಳಿಗೆ ಭಾರತೀಯ ರೈಲುಗಳ ಮುಖಾಂತರವೂ ಹೋಗಬಹುದು ಎಂದು ನಿಮಗೆ ತಿಳಿದಿದೆಯೇ? ನಿಮಗೆಲ್ಲಾ ತಿಳಿದಿರುವಂತೆ ಭಾರತವು ಏಳು ದೇಶಗಳೊಡನೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಅವುಗಳಲ್ಲಿ ಕೆಲವು ದೇಶಗಳಿಗೆ ನೀವು ರೈಲಿನಲ್ಲೂ ಪ್ರಯಾಣಿಸಬಹುದಾಗಿದೆ. ಆ ದೇಶಗಳು ಯಾವುವು? ಯಾವ ರೈಲ್ವೆ ನಿಲ್ದಾಣಗಳಿಂದ ಈ ದೇಶಗಳಿಗೆ ಪ್ರಯಾಣಿಸಬಹುದು ಎಂದು ತಿಳಿಯಿರಿ. 

ಕೋಲ್ಕತ್ತಾ ರೈಲು ನಿಲ್ದಾಣದಿಂದ ಬಾಂಗ್ಲಾದೇಶಕ್ಕೆ ತೆರಳುವ ಬಂಧನ್ ಎಕ್ಸ್‌ಪ್ರೆಸ್  ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿರುವ ಪೆಟ್ರಾಪೋಲ್ ರೈಲು ನಿಲ್ದಾಣದಲ್ಲೂ ಕೂಡ ನಿಲ್ಲುತ್ತದೆ. ಈ ರೈಲಿನ ಮುಖಾಂತರ ಬಾಂಗ್ಲಾದೇಶಕ್ಕೆ ಪ್ರಯಾಣಿಸಬಹುದು. ಆದರೆ, ಭಾರತ-ಬಾಂಗ್ಲಾದೇಶ ನಡುವಣ ಈ ರೈಲಿನಲ್ಲಿ ಪ್ರಯಾಣಿಸಲು  ಮಾನ್ಯವಾದ ಪಾಸ್‌ಪೋರ್ಟ್ ಮತ್ತು ವೀಸಾ ಅಗತ್ಯವಿದೆ. 

ಭಾರತದಿಂದ ಢಾಕಾಗೆ ಪ್ರಯಾಣಿಸಲು ಬಯಸುವವರು ಮಿಥಾಲಿ ಎಕ್ಸ್‌ಪ್ರೆಸ್ ಮೂಲಕ ನ್ಯೂ ಜಲ್ಪೈಗುರಿ ಜಂಕ್ಷನ್‌ನಿಂದ ಪ್ರಯಾಣಿಸಬಹುದು. ಬಾಂಗ್ಲಾದೇಶದ ಗಡಿಯಿಂದ ಸುಮಾರು 4.5 ಕಿಮೀ ದೂರದಲ್ಲಿ ಹಲ್ದಿಬರಿ ರೈಲು ನಿಲ್ದಾಣವು ಭಾರತದ ಗಡಿ ಭಾಗದಿಂದ ಸುಮಾರು 7 ಕಿ.ಮೀ. ದೂರದಲ್ಲಿರುವ ಚಿಲ್ಹಾಟಿ ರೈಲು ನಿಲ್ದಾಣದ ಮೂಲಕ ಬಾಂಗ್ಲಾದೇಶಕ್ಕೆ ಸಂಪರ್ಕ ಹೊಂದಿದೆ.  

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ  ಸಿಂಗಾಬಾದ್ ರೈಲು ನಿಲ್ದಾಣ ಕಂಡು ಬರುತ್ತದೆ.  ಈ ನಿಲ್ದಾಣವು ರೋಹನ್‌ಪುರ ನಿಲ್ದಾಣದ ಮೂಲಕ ಬಾಂಗ್ಲಾದೇಶಕ್ಕೆ ಸಂಪರ್ಕ ಹೊಂದಿದೆ. ಅಲ್ಲದೆ, ಬಾಂಗ್ಲಾದೇಶದ ಸರಕು ರೈಲುಗಳು ನೇಪಾಳವನ್ನು ತಲುಪಲು ಈ ನಿಲ್ದಾಣದ ಮೂಲಕವೇ ಪ್ರಯಾಣಿಸಲಾಗುತ್ತದೆ. ಹಳೆಯ ಮಾಲ್ಡಾ ನಿಲ್ದಾಣದಿಂದ ಕೇವಲ ಒಂದು ಪ್ಯಾಸೆಂಜರ್ ರೈಲು ಈ ನಿಲ್ದಾಣಕ್ಕೆ ಹೋಗುತ್ತದೆ. ಆದಾಗ್ಯೂ, ಈ ಗಡಿ ರೈಲು ನಿಲ್ದಾಣವು ಈ ಎರಡು ಪ್ರದೇಶಗಳ ನಡುವಿನ ಸರಕುಗಳ ರಫ್ತು ಮತ್ತು ಆಮದುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ಜಯನಗರ ರೈಲು ನಿಲ್ದಾಣವು ಬಿಹಾರದ ಮಧುಬನಿ ಜಿಲ್ಲೆಯಲ್ಲಿದ್ದು, ಈ ರೈಲು ನಿಲ್ದಾಣವು ಇಂಡೋ-ನೇಪಾಳ ಗಡಿಯ ಸಮೀಪದಲ್ಲಿದೆ. ಈ ನಿಲ್ದಾಣವು ಜನಕ್‌ಪುರದಲ್ಲಿರುವ ಕುರ್ತಾ ನಿಲ್ದಾಣದ ಮೂಲಕ ನೇಪಾಳಕ್ಕೆ ಸಂಪರ್ಕ ಹೊಂದಿದೆ.  ಈ ಎರಡು ರೈಲು ನಿಲ್ದಾಣಗಳ ನಡುವೆ ಅಂತರ-ಭಾರತ-ನೇಪಾಳ ಗಡಿ ಪ್ರಯಾಣಿಕ ರೈಲು ಚಲಿಸುತ್ತದೆ. ರೈಲು ಸೇವೆಯನ್ನು ಇತ್ತೀಚೆಗೆ ಪುನರಾರಂಭಿಸಲಾಗಿದೆ ಮತ್ತು ಎರಡೂ ದೇಶಗಳ ಜನರು ಈ ರೈಲು ಹತ್ತಲು ಪಾಸ್‌ಪೋರ್ಟ್ ಅಥವಾ ವೀಸಾ ಅಗತ್ಯವಿಲ್ಲ.

ರಾಧಿಕಾಪುರ ರೈಲು ನಿಲ್ದಾಣವು ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯಲ್ಲಿದೆ, ಇದು ಕತಿಹಾರ್ ವಿಭಾಗದ ಅಡಿಯಲ್ಲಿ ಬರುತ್ತದೆ. ರಾಧಿಕಾಪುರ ರೈಲು ನಿಲ್ದಾಣವು  ಶೂನ್ಯ-ಪಾಯಿಂಟ್ ರೈಲು ನಿಲ್ದಾಣವಾಗಿದೆ. ಈ ರೈಲು ಮಾರ್ಗವು ಬಾಂಗ್ಲಾದೇಶದಲ್ಲಿ, ಬಿರಾಲ್ ರೈಲು ನಿಲ್ದಾಣಕ್ಕೆ ಸಂಪರ್ಕ ಹೊಂದಿದೆ. ಇದು ಇಂಡೋ-ಬಾಂಗ್ಲಾದೇಶ ಗಡಿಯಲ್ಲಿ ಸಕ್ರಿಯ ಸಾರಿಗೆ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತದೆ. ಈ ಗಡಿ ರೈಲು ನಿಲ್ದಾಣವನ್ನು ಸಾಮಾನ್ಯವಾಗಿ ಅಸ್ಸಾಂ ಮತ್ತು ಬಿಹಾರದಿಂದ ಬಾಂಗ್ಲಾದೇಶಕ್ಕೆ ಸರಕುಗಳನ್ನು ಸಾಗಿಸಲು ಬಳಸಲಾಗುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link