ಕಿತ್ತಳೆ, ಕ್ಯಾರೆಟ್ ಅಷ್ಟೇ ಅಲ್ಲ, ಈ ಹಣ್ಣು-ತರಕಾರಿಗಳಿಂದಲೂ ಸುಧಾರಿಸುತ್ತೆ ಕಣ್ಣಿನ ದೃಷ್ಟಿ..!
ಬದಲಾದ ಜೀವನಶೈಲಿಯಲ್ಲಿ ಗ್ಯಾಜೆಟ್ ಗಳ ಬಳಕೆ ಹೆಚ್ಚಾಗಿದ್ದು ಇದು ಕಣ್ಣಿನ ಆರೋಗ್ಯದ ಮೇಲೆ ನೇರ ಪರಿಣಾಮ ಉಂಟು ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದೃಷ್ಣಿ ಸಮಸ್ಯೆಗಳನ್ನು ನಿವಾರಿಸಲು ಕೆಲವು ಹಣ್ಣು ತರಕಾರಿಗಳು ನಿಮಗೆ ತುಂಬಾ ಪ್ರಯೋಜನಕಾರಿ ಆಗಿವೆ.
ಬೀಟಾ-ಕ್ಯಾರೋಟಿನ್‌ನಲ್ಲಿ ಹೇರಳವಾಗಿರುವ ಕ್ಯಾರೆಟ್ ಸೇವನೆಯು ದೃಷ್ಟಿ ದೋಷ ನಿವಾರಿಸುವುದರ ಜೊತೆಗೆ ರೆಟಿನಾದ ಆರೋಗ್ಯಕ್ಕೂ ಲಾಭದಾಯಕವಾಗಿದೆ.
ಸಿಹಿ ಗೆಣಸು ಕೂಡ ಬೀಟಾ-ಕ್ಯಾರೋಟಿನ್‌ನ ಮತ್ತೊಂದು ಅತ್ಯುತ್ತಮ ಮೂಲ. ದೈನಂದಿನ ಆಹಾರದಲ್ಲಿ ಸಿಹಿಗೆಣಸು ಸೇವನೆಯು ಕಣ್ಣಿನಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ.
ಪಾಲಕ್ ಸೊಪ್ಪಿನಲ್ಲಿ ಕಂಡು ಬರುವ ಉತ್ಕರ್ಷಣ ನಿರೋಧಕಗಳು ಕಣ್ಣಿನ ರೆಟೀನಾವನ್ನು ಹಾನಿಗಳಿಂದ ರಕ್ಷಿಸುತ್ತದೆ.
ದೈನಂದಿನ ಆಹಾರದ ಪ್ರಮುಖ ಭಾಗವಾಗಿರುವ ಟೊಮಾಟೊಗಳಲ್ಲಿ ಲೈಕೋಪಿನ್ ಎಂಬ ಅಂಶವಿದ್ದು, ಇದು ಯುವಿ ಹಾನಿಯಿಂದ ಕಣ್ಣುಗಳನ್ನು ರಕ್ಷಿಸುತ್ತದೆ.
ವಿಟಮಿನ್ ಇ ಸಮೃದ್ಧವಾಗಿರುವ ಬಾದಾಮಿಯ ನಿಯಮಿತ ಸೇವನೆಯು ವಯೋಸಹಜವಾದ ಕಣ್ಣುಗಳ ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ.
ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ಇದರ ಬಳಕೆಯಿಂದ ಕಣ್ಣಿನಲ್ಲಿ ಪೊರೆ ಬೆಳವಣಿಗೆಯನ್ನು ತಡೆಯುತ್ತದೆ.
ಕಿತ್ತಳೆ ಹಣ್ಣಿನ ಸೇವನೆಯು ಕಣ್ಣುಗಳಲ್ಲಿನ ರಕ್ತನಾಳಗಳ ಆರೋಗ್ಯವನ್ನು ಬೆಂಬಲಿಸುತ್ತದೆ. ಇದು ಒಟ್ಟಾರೆ ಕಣ್ಣಿನ ಆರೋಗ್ಯಕ್ಕೆ ಉತ್ತಮ ಔಷಧವಾಗಿದೆ.
ವಿಟಮಿನ್ ಸಿ, ವಿಟಮಿನ್ ಇ, ಉತ್ಕರ್ಷಣ ನಿರೋಧಕಗಳಲ್ಲಿ ಹೆರಳವಾಗಿರುವ ಬೆರ್ರಿಹಣ್ಣುಗಳ ದೈನಂದಿನ ಬಳಕೆಯಿಂದ ದೃಷ್ಟಿ ದೋಷ ನಿವಾರಿಸಲು, ಅತ್ಯುತ್ತಮ ದೃಷ್ಟಿ ಕಾಪಾಡಿಕೊಳ್ಳಲು ಸಹಾಯಕವಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.