ಮಧುಮೇಹಕ್ಕಷ್ಟೇ ಅಲ್ಲ ಕೂದಲು, ಚರ್ಮದ ಆರೈಕೆಗೂ ಅತ್ಯುತ್ತಮ ಮನೆಮದ್ದು `ಜಾಮೂನ್ ಹಣ್ಣು`
ಆಯುರ್ವೇದದಲ್ಲಿ ಜಾಮೂನ್ ಅನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಜಾಮೂನ್ ಅಷ್ಟೇ ಅಲ್ಲ ಅದರ ಬೀಜವೂ ಕೂಡ ಆರೋಗ್ಯಕ್ಕೆ ಹಲವು ವಿಧದಲ್ಲಿ ಲಾಭದಾಯಕವಾಗಿದೆ.
ಜಾಮೂನ್ ಹಣ್ಣಿನ ಸೇವೆಯಿಂದ ಮಧುಮೇಹಿಗಳಲ್ಲಿ ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ. ಅಷ್ಟೇ ಅಲ್ಲ ಇದು ಕೂದಲು ಮತ್ತು ಚರ್ಮದ ಆರೋಗ್ಯಕ್ಕೂ ವರದಾನವಾಗಿದೆ.
ಜಾಮೂನ್ ಹಣ್ಣಿನಂತೆ ಅದರ ಬೀಜದಲ್ಲಿಯೂ ಹಲವು ಪೋಷಕಾಂಶಗಳು ಅಡಕವಾಗಿವೆ ಇದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಮಾತ್ರ ಇದು ಲಾಭದಾಯಕವಾಗಿರುತ್ತದೆ.
ಜಾಮೂನ್ ಹಣ್ಣನ್ನು ತಿನ್ನುವುದರಿಂದ ಇದು ದೇಹದಲ್ಲಿ ರಕ್ತಪರಿಚಲನೆ ಸುಧಾರಣೆಯಾಗಿ, ಮೊಡವೆ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ. ಇದು ಕಾಂತಿಯುತ ಕೋಮಲ ತ್ವಚೆಯನ್ನು ಪಡೆಯಲು ಸಹಕಾರಿ ಆಗಿದೆ.
ಜಾಮೂನ್ ಬೀಜಗಳನ್ನು ಪುಡಿ ಮಾಡಿ ಇದರಲ್ಲಿ ಜೇನುತುಪ್ಪ, ಮೊಸರು ಬೆರೆಸಿ ಹೇರ್ ಮಾಸ್ಕ್ ತಯಾರಿಸಿ. ಇದನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಳಿಕ ಶಾಂಪೂವಿನಿಂದ ಹೇರ್ ವಾಶ್ ಮಾಡಿ. ನೆತ್ತಿಯ ಅಲರ್ಜಿ, ತಲೆಹೊಟ್ಟು ನಿವಾರಣೆಯಾಗಿ ಸುಂದರ ಸೊಂಪಾದ ಕೂದಲು ನಿಮ್ಮದಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.