Petroleum Jelly Hacks: ತ್ವಚೆ ಮಾತ್ರವಲ್ಲ ಮನೆಯಲ್ಲಿರುವ ಈ ವಸ್ತುಗಳನ್ನೂ ಹೊಳೆಯುವಂತೆ ಮಾಡುತ್ತೆ ಪೆಟ್ರೋಲಿಯಂ ಜೆಲ್ಲಿ

Wed, 07 Dec 2022-3:47 pm,

ಕನ್ನಡಿ: ಪೆಟ್ರೋಲಿಯಂ ಜೆಲ್ಲಿಯಿಂದ ಕನ್ನಡಿಯನ್ನು ಹೊಳೆಯುವಂತೆ ಮಾಡಬಹುದು. ಇದಕ್ಕಾಗಿ, ಕನ್ನಡಿಯ ಮೇಲೆ ಪೆಟ್ರೋಲಿಯಂ ಜೆಲ್ಲಿಯನ್ನು ಅಪ್ಲೈ ಮಾಡಿ, ನಂತರ ಒಂದು ಕಾಗದದ ಸಹಾಯದಿಂದ ಅದನ್ನು ಸ್ವಚ್ಛಗೊಳಿಸಿ. ಒಂದೆರಡು ಬಾರಿ ಈ ರೀತಿ ಮಾಡುವುದರಿಂದ ಕನ್ನಡಿಯ ಮೇಲೆ ಶೇಖರವಾಗಿರುವ ಧೂಳು, ಗೆರೆಗಳು ಮಾಯವಾಗುತ್ತದೆ.

ದಪ್ಪ ಹುಬ್ಬುಗಳು: ಕೆಲವರಿಗೆ ಶುಷ್ಕತೆಯಿಂದಾಗಿ ಹುಬ್ಬಿನ ಕೂದಲು ಉದುರಬಹುದು. ಅಂತಹವರು ಹುಬ್ಬಿಗೆ ಮೇಲೆ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚುವುದರಿಂದ  ಅದು ಬೋಲ್ಡ್ ಆಗಿ ಕಾಣುತ್ತದೆ.

ಸುಗಂಧ ದ್ರವ್ಯ ಆವಿಯಾಗುವುದನ್ನು ತಡೆಯಲು: ನೀವು ಸುಗಂಧ ದ್ರವ್ಯವನ್ನು ದೀರ್ಘಕಾಲ ಬಾಳಿಕೆ ಬರುವಂತೆ ಮಾಡಲು ಬಯಸಿದರೆ, ಸುಗಂಧ ದ್ರವ್ಯವನ್ನು ಅನ್ವಯಿಸುವ ಸ್ಥಳದಲ್ಲಿ ಪೆಟ್ರೋಲಿಯಂ ಜೆಲ್ಲಿಯನ್ನು ಅನ್ವಯಿಸಬಹುದು. ಇದರಿಂದ ಸುಗಂಧ ದ್ರವ್ಯದ ಸುವಾಸನೆ ಇಡೀ ದಿನ ಉಳಿಯುತ್ತದೆ.

ಸ್ಪ್ಲಿಟ್ ಹೇರ್: ಸ್ಪ್ಲಿಟ್ ಹೇರ್ ಅಥವಾ ಕೂದಲು ಕವಲೊಡೆದಿದ್ದರೆ ಅದನ್ನು ಸರಿಪಡಿಸಲು ಪೆಟ್ರೋಲಿಯಂ ಜೆಲ್ಲಿಯನ್ನು ಬಳಸಬಹುದು. ಕೂಡ ಒಡೆದಿರುವ ಭಾಗಗಳಲ್ಲಿ ಪೆಟ್ರೋಲಿಯಂ ಜೆಲ್ಲಿಯನ್ನು ಅನ್ವಯಿಸುವುದರಿಂದ ಕೂದಲು ತೇವಾಂಶಅನ್ನು ಪಡೆಯುತ್ತದೆ.

ಬೂಟುಗಳನ್ನು ಹೊಳೆಯುವಂತೆ ಮಾಡಲು : ನಿಮ್ಮ ಶೂ ಪಾಲಿಶ್ ಖಾಲಿ ಆಗಿದ್ದರೆ ಆತುರದಲ್ಲಿ ಮಾರುಕಟ್ಟೆಗೆ ಹೋಗಿ ತರಲು ಸಮಯವಿಲ್ಲದಿದ್ದರೆ ಅಂತಹ ಸಂದರ್ಭದಲ್ಲಿಯೂ ಪೆಟ್ರೋಲಿಯಂ ಜೆಲ್ಲಿ ನಿಮಗೆ ಸಹಕಾರಿ ಆಗಲಿದೆ. ನಿಮ್ಮ ಶೂಗಳಿಗೆ ಪೆಟ್ರೋಲಿಯಂ ಜೆಲ್ಲಿಯನ್ನು ಅನ್ವಯಿಸುವುದರಿಂದ ಶೂಗಳು ಹೊಳೆಯುತ್ತವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link