Sushmita Sen-Lalit Modi ಅಷ್ಟೇ ಅಲ್ಲ ಈ ಸೆಲಿಬ್ರಿಟಿಗಳ ನಡುವಿನ ಸಂಬಂಧದ ಬಗ್ಗೆ ಕೇಳಿ ಕೂಡ 440 ವ್ಯಾಟ್ ಶಾಕ್ ತಗುಲಿತ್ತು
Juhi Chawla:ಒಂದು ಕಾಲದಲ್ಲಿ ಜೂಹಿ ಚಾವ್ಲಾ ಕೂಡ ಬಾಲಿವುಡ್ ನ ಅತ್ಯಂತ ಸುಂದರ ನಟಿಯಾಗಿದ್ದಳು. ಜೂಹಿ ವಿವಾಹದ ಬಗ್ಗೆ ಕೇಳಿದಾಗಲೂ ಕೂಡ ಅವರ ಅಭಿಮಾನಿಗಳು ದಿಗ್ಭ್ರಮೆ ವ್ಯಕ್ತಪಡಿಸಿದ್ದರು. ಏಕೆಂದರೆ ವಯಸ್ಸಿನಲ್ಲಿ ಸಾಕಷ್ಟು ಹೆಚ್ಚಿನ ಅಂತರವಿರುವ ಉದ್ಯಮಿ ಜಯ್ ಮೆಹ್ತಾ ಜೊತೆಗೆ ಜೂಹಿ ವಿವಾಹವಾಗಿದ್ದರು. ಈ ಸುದ್ದಿಯನ್ನು ಕೂಡ ಮೊದಮೊದಲಿಗೆ ಜನರು ನಂಬಿರಲಿಲ್ಲ (ಫೋಟೋ: ಸಾಮಾಜಿಕ ಮಾಧ್ಯಮ)
Tulip Joshi: 'ಮೇರೆ ಯಾರ್ ಕಿ ಶಾದಿ ಹೈ' ಚಿತ್ರ ಖ್ಯಾತಿಯ ತುಲೀಪ್ ಜೋಷಿಯನ್ನು ಇದುವರೆಗೂ ಕೂಡ ಜನರು ಮರೆತಿಲ್ಲ. ಆದರೆ, ಅತಿ ಕಡಿಮೆ ಸಮಯದಲ್ಲಿಯೇ ಅವರು ಚಿತ್ರರಂಗಕ್ಕೆ ಗುಡ್ ಬೈ ಹೇಳಿದರು. ಪ್ರಸ್ತುತ ತುಲೀಪ್ ತನ್ನ ನಟನಾ ವೃತ್ತಿಯಿಂದ ದೂರಸರೆದಿದ್ದಾಳೆ. ಆದರೆ, ಶಾಕಿಂಗ್ ಸುದ್ದಿ ಎಂದರೆ ಅವಳೂ ಕೂಡ ವಿನೋದ್ ನಾಯರ್ ಜೊತೆಗೆ ಸಂಬಂಧದಲ್ಲಿದ್ದರು. ಈ ಇಬ್ಬರ ಸಂಬಂಧದ ವಿಷಯ ಬಂದಾಗಲು ಕೂಡ ಜನರು ದಂಗಾಗಿದ್ದರು.(ಫೋಟೋ: ಸಾಮಾಜಿಕ ಮಾಧ್ಯಮ)
Kim Sharma:ಖ್ಯಾತ ಟೆನ್ನಿಸ್ ಪಟು ಲಿಯಾಂಡರ್ ಪೇಸ್ ಜೊತೆಗಿನ ತನ್ನ ಸಂಬಂಧದ ಕಾರಣ ಕಿಮ್ ಶರ್ಮಾ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೆಡ್ಲೈನ್ ಗಿಟ್ಟಿಸಿದ್ದರು. ಆದರೆ ಅವರ ಮೊದಲ ಮದುವೆ ಅಲಿ ಪೂಜಾನಿ ಜೊತೆಗೆ ನೆರವೇರಿದೆ. ಅಲಿ ಕೀನ್ಯಾದ ಉದ್ಯಮಿಯಾಗಿದ್ದು, ಈ ಸಂಬಂಧದ ಬಗ್ಗೆಯೂ ಕೇಳಿ ಜನರು ಆಶ್ಚರ್ಯಚಕಿತರಾಗಿದ್ದರು. ಈ ಮದುವೆ ಮೊಂಬಾಸಾದಲ್ಲಿ ನಡೆದಿದೆ. ಆದರೆ ಕೇವಲ ಏಳು ವರ್ಷಗಳಲ್ಲಿಯೇ ಅವರ ಸಂಬಂಧ ಮುಕ್ತಾಯದ ಹಂತವನ್ನು ತಲುಪಿತ್ತು .(ಫೋಟೋ ಸೌಜನ್ಯ - ಸಾಮಾಜಿಕ ಮಾಧ್ಯಮ)
Farah Khan Shirish Kunder: ಬಾಲಿವುಡ್‌ನ ಖ್ಯಾತ ನೃತ್ಯ ನಿರ್ದೇಶಕಿ ಫರಾ ಖಾನ್ ಶಿರಿಶ್ ಕುಂದರ್ ಅವರನ್ನು ವಿವಾಹವಾಗಿದ್ದಾಗ, ಅದನ್ನು ಕೂಡ ಯಾರು ನಂಬಿರಲಿಲ್ಲ. ಈಗ ಫರಾ ಖಾನ್ ಮತ್ತು ಶಿರೀಷ್ ಮೂರು ಮಕ್ಕಳಿಗೆ ಪೋಷಕರಾಗಿದ್ದಾರೆ. ಫರಾ ತನ್ನ ಕುಟುಂಬದಲ್ಲಿ ಸಾಕಷ್ಟು ಸಂತೋಷವಾಗಿದ್ದಾಳೆ. (ಫೋಟೋ: ಸಾಮಾಜಿಕ ಮಾಧ್ಯಮ)
Karisma Kapoor: ಬಚ್ಚನ್ ಕುಟುಂಬದ ಕುಡಿ ಅಭಿಷೇಕ್ ಬಚ್ಚನ್ ಜೊತೆಗೆ ಕರಿಷ್ಮಾ ಕಪೂರ್ ಅವರ ನಿಶ್ಚಿತಾರ್ಥ ಮೊದಲು ನೆರವೇರಿತ್ತು. ಆದರೆ ಕೆಲವೇ ದಿನಗಳಲ್ಲಿ ಈ ಸಂಬಂಧ ಅಂತ್ಯಕಂಡಿತು ಮತ್ತು ಕೆಲವೇ ದಿನಗಳ ಬಳಿಕ ಕರಿಷ್ಮಾ ದೆಹಲಿ ಮೂಲದ ಉದ್ಯಮಿ ಸಂಜಯ್ ಕಪೂರ್ ಜೊತೆಗೆ ವಿವಾಹ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಪ್ರಕಟಗೊಂಡಿತ್ತು. ಈ ಸಂಬಂಧದ ಬಗ್ಗೆಯೂ ಕೂಡ ಕೇಳಿ ಜನರು ಸಾಕಷ್ಟು ದಂಗಾಗಿದ್ದರು. ಏಕೆಂದರೆ, ಕರಿಷ್ಮಾ ಸಂಜಯ್ ಗೆ ಎರಡನೆಯ ಪತ್ನಿಯಾಗಿದ್ದಳು