ಇಲ್ಲಿಯವರೆಗೆ ಚೀನಾದಿಂದ ಹೊರಹೊಮ್ಮಿದ ಯಾವ್ಯಾವ ವೈರಸ್‌ಗಳು ವಿಶ್ವದಾದ್ಯಂತ ವಿನಾಶ ಸೃಷ್ಟಿಸಿವೆ!
ಚೀನಾ ವೈರಸ್‌ಗಳು: ಚೀನಾದಿಂದ ಹೊರಹೊಮ್ಮಿದ ಕರೋನಾವೈರಸ್ ವಿಶ್ವದಾದ್ಯಂತ ಎಷ್ಟೆಲ್ಲಾ ಅವಾಂತರ ಸೃಷ್ಟಿಸಿದೆ ಎಂಬುದು ನಿಮಗೆ ಗೊತ್ತೇ ಇದೆ. ಆದರೆ, ಕರೋನಾವೈರಸ್ ಮಾತ್ರವಲ್ಲ, ಇಲ್ಲಿ ಪತ್ತೆಯಾದ ಹಲವು ವೈರಸ್‌ಗಳು ಪ್ರಪಂಚದಾದ್ಯಂತ ತಲ್ಲಣ ಸೃಷ್ಟಿಸುತ್ತಲೇ ಬಂದಿವೆ. ಇದೀಗ ಮತ್ತೊಂದು ಬಗೆಯ ನಿಗೂಢ ಕಾಯಿಲೆ ಚೀನಾದಲ್ಲಿ ತಲ್ಲಣ ಸೃಷ್ಟಿಸಿದೆ.
ಚೀನಾದಲ್ಲಿ ನಿಗೂಢ ಕಾಯಿಲೆ: ವಾಸ್ತವವಾಗಿ, ಚೀನಾದಲ್ಲಿ ಇತ್ತೀಚೆಗೆ ಹೊರಹೊಮ್ಮಿರುವ ನಿಗೂಢ ಕಾಯಿಲೆ ನ್ಯುಮೋನಿಯಾ. ಸದ್ಯ, ಇದು ಲಿಯಾನಿಂಗ್ ಮತ್ತು ಪೂರ್ವ ಬೀಜಿಂಗ್‌ನಲ್ಲಿ ವಿನಾಶವನ್ನುಂಟುಮಾಡುತ್ತಿದ್ದು ಭವಿಷ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಹಾಡಗೆದಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಕರೋನಾವೈರಸ್: ಮೊದಲಿಗೆ ಚೀನಾದ ವುಹಾನ್‌ನಲ್ಲಿ ಪತ್ತೆಯಾದ ಕರೋನಾವೈರಸ್‌ನಿಂದ ವಿಶ್ವದಾದ್ಯಂತ ಸುಮಾರು 25 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಇದೀಗ ಚೀನಾದಲ್ಲಿ ಹೊಸದಾಗಿ ಹುಟ್ಟಿಕೊಂಡಿರುವ ನ್ಯುಮೋನಿಯಾ ಮತ್ತೊಮ್ಮೆ ಕೊರೊನಾವೈರಸ್‌ನಂತೆ ಇಡೀ ಜಗತ್ತಿಗೆ ಮಾರಕವಾಗಬಹುದು ಎಂದು ಡಬಲ್ಯುಎಚ್‌ಓ ಆತಂಕ ವ್ಯಕ್ತಪಡಿಸಿದೆ.
ನಿಗೂಢ ನ್ಯುಮೋನಿಯಾ: ವಾಸ್ತವವಾಗಿ, 2019ರಲ್ಲಿ ಚೀನಾದಲ್ಲಿ ಇದೇ ರೀತಿಯ ನಿಗೂಢ ನ್ಯುಮೋನಿಯಾ ಆತಂಕ ಸೃಷ್ಟಿಸಿತ್ತು. ಆ ಸಮಯದಲ್ಲಿ ಈ ನಿಗೂಢ ನ್ಯುಮೋನಿಯಾಗೆ ತುತ್ತಾಗಿದ್ದ ರೋಗಿಗಳು ಶ್ವಾಸಕೋಶದ ಸೋಂಕು, ಉಸಿರಾಟದ ತೊಂದರೆ ಮತ್ತು ಜ್ವರದಿಂದ ಬಳಲುತ್ತಿದ್ದರು. ಆದರೂ, ಇದನ್ನು ಅಷ್ಟು ಅಪಾಯಕಾರಿ ಎಂದು ಪರಿಗಣಿಸಲಾಗಿರಲಿಲ್ಲ. ಆದರೀಗ ಈ ಕಾಯಿಲೆ ಮಕ್ಕಳಲ್ಲಿ ಹೆಚ್ಚು ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಹೆಚ್ಚಿಸಿದೆ.
ರಿಫ್ಟ್ ವ್ಯಾಲಿ ಜ್ವರ: 2016ರಲ್ಲಿ ಚೀನಾದಲ್ಲಿ ರಿಫ್ಟ್ ವ್ಯಾಲಿ ಜ್ವರ ತುಂಬಾ ವೇಗವಾಗಿ ಹಬ್ಬಿತ್ತು. ಲಭ್ಯವಿರುವ ಮಾಹಿತಿಗಳ ಪ್ರಕಾರ, ರಿಫ್ಟ್ ವ್ಯಾಲಿ ಜ್ವರ ವಾಸ್ತವವಾಗಿ ಆಫ್ರಿಕನ್ ವೈರಸ್ ಆಗಿದ್ದು, ಇದು ಚೀನಾದಲ್ಲಿ ಮಾರಣಾಂತಿಕ ರೂಪ ಪಡೆದುಕೊಂಡಿತ್ತು. ಈ ಕಾಯಿಲೆಯಿಂದ ಬಳಲುತ್ತಿದ್ದವರಲ್ಲಿ ಸ್ನಾಯುಗಳು ಮತ್ತು ಕೀಲುಗಳಲ್ಲಿ ನೋವು, ತಲೆನೋವು ಮತ್ತು ಜ್ವರದ ಲಕ್ಷಣಗಳು ಸಾಮಾನ್ಯವಾಗಿದ್ದವು.
ಎಂಟರೊವೈರಸ್: ಚೀನಾ 1998ರಲ್ಲಿ ಎಂಟರೊವೈರಸ್ ಎಂಬ ಏಕಾಏಕಿಯ ದಾಳಿಯನ್ನು ಎದುರಿಸಬೇಕಾಯಿತು. ಈ ಎಂಟರೊವೈರಸ್ ಹೆಚ್ಚಾಗಿ ಜನರ ಬೆನ್ನುಹುರಿಯ ಮೇಲೆ ದಾಳಿ ಮಾಡುತ್ತಿತ್ತು. ಈ ವೈರಸ್‌ಗೆ ಯಾವುದೇ ಔಷಧಿ ಅಥವಾ ಲಸಿಕೆ ಇಲ್ಲದಿದ್ದರಿಂದ ಅದು ಅಲ್ಲಿ ಮಹಾಮಾರಿಯ ರೂಪ ತಳೆದಿತ್ತು.
ಝೂನೋಟಿಕ್ ವೈರಸ್: ಕರೋನಾವೈರಸ್ ಬಳಿಕ ಕಳೆದ ವರ್ಷ ಚೀನಾದಲ್ಲಿ ಝೂನೋಟಿಕ್ ವೈರಸ್ ಎಂಬ ಹೊಸ ವೈರಸ್ ಚೀನಾವನ್ನು ಪ್ರವೇಶಿಸಿತು. ಈ ವೈರಸ್ ಪ್ರಾಣಿಗಳಂತೆ ಮನುಷ್ಯರಿಗೂ ಕೂಡ ಹರಡಿತು. ಝೂನೋಟಿಕ್ ವೈರಸ್ ರೋಗ ಲಕ್ಷಣಗಳಲ್ಲಿ ವಾಕರಿಕೆ, ಕೆಮ್ಮು ಮತ್ತು ಆಯಾಸ ಸಾಮಾನ್ಯವಾಗಿದೆ. ವಿಪರ್ಯಾಸವೆಂದರೆ ಇಂದಿಗೂ ಸಹ ಈ ವೈರಸ್‌ಗೆ ಯಾವುದೇ ಚಿಕಿತ್ಸೆ ಲಭ್ಯವಿಲ್ಲ.