ತೂಕ ಇಳಿಕೆಯಷ್ಟೇ ಅಲ್ಲ, ಅಲೋವೆರಾದಿಂದ ಆರೋಗ್ಯಕ್ಕೆ ಸಿಗುತ್ತೆ ಇಷ್ಟೆಲ್ಲಾ ಲಾಭಗಳು
ಎಲ್ಲೆಡೆ ವ್ಯಾಪಕವಾಗಿ ಬಳಸಲ್ಪಡುವ ಸಸ್ಯ ಪ್ರಭೇದಗಳಲ್ಲಿ ಅಲೋವೆರಾ ಕೂಡ ಒಂದು. ದೇಹದ ಆಂತರಿಕ ಮತ್ತು ಬಾಹ್ಯ ಚಿಕಿತ್ಸೆಗೆ ಅಲೋವೆರಾ ತುಂಬಾ ಪ್ರಯೋಜನಕಾರಿ ಆಗಿದೆ.
ಅಲೋವೆರಾ ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ, ಸತು, ತಾಮ್ರ, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳ ಆಗರ. ಇದು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ಇದರ ಐದು ಪ್ರಮುಖ ಪ್ರಯೋಜನಗಳೆಂದರೆ...
ಅಲೋವೆರಾದಲ್ಲಿ ವಿಟಮಿನ್ ಎ, ಬಿ, ಸಿ ಸಮೃದ್ಧವಾಗಿದ್ದು ಇದು ದೇಹದ ಚಯಾಪಚಯವನ್ನು ಹೆಚ್ಚಿಸಿ ತೂಕ ಇಳಿಕೆಗೆ ಸಹಕಾರಿ ಆಗಿದೆ.
ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಅಲೋವೆರಾ ರಸ ಅತ್ಯುತ್ತಮ ಮದ್ದು.
ನಿಯಮಿತವಾಗಿ ಅಲೋವೆರಾ ರಸವನ್ನು ಸೇವಿಸುವುದರಿಂದ ಇದು ಹೊಟ್ಟೆಯ ಹುಣ್ಣನ್ನು ಸರಿಪಡಿಸಲು ಮತ್ತು ಕರುಳಿನ ಅಸ್ವಸ್ಥತೆಗಳನ್ನು ನಿವಾರಿಸಲು ಸಹಕಾರಿ ಎಂದು ಸಾಬೀತುಪಡಿಸುತ್ತದೆ.
ಅಲೋವೆರಾ ಹಲವಾರು ಪಾಲಿಸ್ಯಾಕರೈಡ್‌ಗಳನ್ನು ಹೊಂದಿದ್ದು ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಳಪಡಿಸುವಲ್ಲಿ ಪರಿಣಾಮಕಾರಿ ಮದ್ದು.
ಅಲೋವೆರಾ ಜೆಲ್ ಅನ್ನು ಸುಟ್ಟಗಾಯದ ಮೇಲೆ ಅನ್ವಯಿಸುವುದರಿಂದ ಇದು ಚರ್ಮದ ಉರಿಯನ್ನು ಶಮನಗೊಳಿಸುತ್ತದೆ. ಜೊತೆಗೆ ಗಾಯ ವೇಗವಾಗಿ ಗುಣಮುಖವಾಗಲು ಪ್ರಯೋಜನಕಾರಿ ಆಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.