ಮಹಿಳೆಯರಷ್ಟೇ ಅಲ್ಲ, ಪುರುಷರಲ್ಲಿ ಕೂಡ ಈ ಅಭ್ಯಾಸಗಳು ಚರ್ಮದ ಸಮಸ್ಯೆಗೆ ಕಾರಣವಾಗಬಹುದು!
ಇತ್ತೀಚಿನ ದಿನಗಳಲ್ಲಿ ಅನೇಕ ಹುಡುಗರು ತಮ್ಮ ತ್ವಚೆಯ ಆರೋಗ್ಯದ ಬಗ್ಗೆ ಗಮನ ಹರಿಸುತ್ತಾರೆ. ಆದರೆ ಅನೇಕ ಬಾರಿ ಅಪೂರ್ಣ ಮಾಹಿತಿಯಿಂದಾಗಿ, ಅವರು ತಿಳಿಯದೆ ತಮ್ಮ ಚರ್ಮದೊಂದಿಗೆ ಅಂತಹ ಕೆಲವು ತಪ್ಪುಗಳನ್ನು ಮಾಡುತ್ತಾರೆ, ಇದರಿಂದಾಗಿ ಅವರ ಚರ್ಮವು ಹಾನಿಗೊಳಗಾಗುತ್ತದೆ. ನೀವೂ ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ತ್ವಚೆಯ ಆರೈಕೆಗೆ ಸಂಬಂಧಿಸಿದ ಈ ತಪ್ಪುಗಳನ್ನು ಮಾಡದಂತೆ ನಿಗಾವಹಿಸಿ.
ಕೆಲವು ಪುರುಷರು ತಮ್ಮ ಚರ್ಮದ ಪ್ರಕಾರವನ್ನು ಅರ್ಥಮಾಡಿಕೊಳ್ಳದೇ ಮುಖಕ್ಕೆ ಹೆಚ್ಚು ಕ್ರೀಮ್ ಅಥವಾ ಲೋಷನ್ ಅನ್ನು ಅನ್ವಯಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತಾರೆ. ಇಲ್ಲವೇ, ತಮ್ಮ ಚರ್ಮ ಎಣ್ಣೆಯುಕ್ತವೆಂದು ಭಾವಿಸಿ ತಪ್ಪಾದ ಕ್ರೀಂ, ಸೋಪ್ ಬಳಸುತ್ತಾರೆ. ಆದರೆ, ಇದು ನಿಮ್ಮ ಚರ್ಮದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು.
ನಮ್ಮಲ್ಲಿ ಕೆಲವರು ಆಗಾಗ್ಗೆ ಮುಖ ತೊಳೆಯುವ ಅಭ್ಯಾಸ ಹೊಂದಿರುತ್ತಾರೆ. ಆದರೆ, ಇದರಿಂದ ತ್ವಚೆ ಒನಗುತ್ತದೆ. ಮಾತ್ರವಲ್ಲ, ಚರ್ಮದ ಮೇಲೆ ದದ್ದುಗಳು ಮತ್ತು ಕಿರಿಕಿರಿಯ ಸಮಸ್ಯೆಯೂ ಹೆಚ್ಚಾಗುತ್ತದೆ.
ಕೆಲವು ಪುರುಷರು ತಮ್ಮ ಮುಖವನ್ನು ಸ್ವಚ್ಛಗೊಳಿಸಲು ಕಠಿಣವಾದ ಫೇಸ್ ಸ್ಕ್ರಬ್‌ಗಳನ್ನು ಬಳಸುತ್ತಾರೆ. ಹೀಗೆ ಮುಖವನ್ನು ಶುಚಿಗೊಳಿಸುವುದರಿಂದ ತ್ವಚೆ ಮತ್ತು ಗಡ್ಡದಲ್ಲಿರುವ ಕೊಳೆ ನಿವಾರಣೆಯಾಗುತ್ತದೆ ಎಂಬುದು ಅವರ ಅಭಿಪ್ರಾಯ. ಆದರೆ ಇದು ತಪ್ಪು ಮಾರ್ಗವಾಗಿದೆ. ಈ ರೀತಿ ಮಾಡುವುದರಿಂದ ನಿಮ್ಮ ಚರ್ಮಕ್ಕೆ ಹಾನಿಯಾಗುತ್ತದೆ.
ನೀವೂ ಕೂಡ ಫೋಮಿಂಗ್ ಶೇವಿಂಗ್ ಕ್ರೀಮ್ ಬಳಸುತ್ತಿದ್ದಾರೆ ಇಂದಿನಿಂದಲೇ ನಿಮ್ಮ ಈ ಅಭ್ಯಾಸವನ್ನು ಬಿಟ್ಟು ಬಿಡಿ. ಇದು ನಿಮ್ಮ ಚರ್ಮಕ್ಕೆ ಸುರಕ್ಷಿತವಲ್ಲ. ಹಾಗಾಗಿ, ಶೇವಿಂಗ್ ಮಾಡುವಾಗ ಲೋಷನ್ ಆಧಾರಿತ ನೋ-ಫೋಮ್ ಶೇವ್ ಕ್ರೀಮ್ ಅನ್ನು ಬಳಸುವುದು ಉತ್ತಮ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.