Pushpa 2: ಪುಷ್ಪಾ 2 ಐಟಂ ಸಾಂಗ್‌ಗೆ ಸ್ಟೆಪ್ಸ್‌ ಹಾಕೋದು ಈ ಫೇಮಸ್‌ ಬ್ಯೂಟಿ! ಈಕೆ ಸಮಂತಾನ ಬೀಟ್‌ ಮಾಡೋದು ಪಕ್ಕಾ!!

Mon, 21 Oct 2024-2:25 pm,

ಪುಷ್ಪ 2 ಮೂರು ವರ್ಷಗಳ ಹಿಂದೆ ಸಂಚಲನ ಮೂಡಿಸಿದ್ದ ಪುಷ್ಪ ಚಿತ್ರದ ಮುಂದುವರಿದ ಭಾಗವಾಗಿದ್ದು, ಟಾಲಿವುಡ್ ಹಾಗೂ ಪ್ಯಾನ್ ಇಂಡಿಯಾ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿರುವ ಚಿತ್ರ. ಐಕಾನ್ ಸ್ಟಾರ್ ಅಭಿನಯದ ಈ ಕ್ರೇಜಿ ಸಿನಿಮಾ ಡಿಸೆಂಬರ್ 6 ರಂದು ತೆರೆಗೆ ಬರಲಿದೆ.   

ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳು, ಗ್ಲಿಂಪ್ಸ್‌ಗಳು, ಹಾಡುಗಳು ಪುಷ್ಪಾ ಅವರ ಮುಂದಿನ ಭಾಗದ ನಿರೀಕ್ಷೆಯನ್ನು ಹೆಚ್ಚಿಸಿವೆ. ಭಾಗ 1ರ ಸ್ಪೇಷಲ್‌ ಸಾಂಗ್‌ಗೆ ಹೆಜ್ಜೆ ಹಾಕಿ ಸಮಂತಾ ಕೂಡ ಈ ಚಿತ್ರದ ಯಶಸ್ಸಿನಲ್ಲಿ ಭಾಗಿಯಾಗಿದ್ದಾರೆ..   

ಊ ಅಂಟವಾ ಮಾವಾ ಎಂದು ಆಕೆ ಹಾಕಿದ ಹೆಜ್ಜೆಗಳು ಇನ್ನೂ ಕಣ್ಣಮುಂದೆ ಬರುತ್ತವೆ.. ಈ ಹಿನ್ನಲೆಯಲ್ಲಿ ಪುಷ್ಪಾ ಭಾಗ 2ರ ವಿಶೇಷ ಹಾಡಿನ ವಿಚಾರದಲ್ಲೂ ಅದನ್ನೂ ಮೀರಿ ನಡೆಯುವಂತೆ ನಿರ್ಮಾಪಕರು ಕಾಳಜಿ ವಹಿಸುತ್ತಿದ್ದಾರೆ. ಆದರೆ ಈ ಹಾಡಿನಲ್ಲಿ ಯಾರು ನಟಿಸುತ್ತಾರೆ ಎಂಬ ಬಗ್ಗೆ ಇದುವರೆಗೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.   

ಇದೇ ವೇಳೆ ದಿಶಾ ಪಟಾನಿ ಹೆಸರು ಕೇಳಿ ಬಂದಿತ್ತು. ಅಲ್ಲದೇ ಅನಿಮಲ್‌ ಬ್ಯೂಟಿ ತ್ರಿಪ್ತಿ ಡಿಮ್ರಿ ಹೆಸರು ಕೂಡ ಸುದ್ದಿಯಲ್ಲಿ ಕೇಳಿ ಬಂದಿತ್ತು. ಆದರೆ ಅವೆಲ್ಲವೂ ವದಂತಿಗಳು ಎಂದು ತಿಳಿದುಬಂದಿದೆ. ಈಗ ಅಂತಿಮವಾಗಿ ಅವರು ನಟಿ ಶ್ರದ್ಧಾ ಕಪೂರ್ ಅವರೊಂದಿಗೆ ಸ್ಪೇಷಲ್‌ ಸಾಂಗ್‌ನ್ನು ಮಾಡಲಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.  

ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್ ಎದುರು ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಇನ್ನು ಸ್ಪೆಷಲ್ ಸಾಂಗ್ ಗೆ ನಾರ್ತ್ ಹೀರೋಯಿನ್ ಹಾಕಿಕೊಂಡರೆ ಸಿನಿಮಾಗೆ ಬಾಲಿವುಡ್ ನಲ್ಲಿ ಒಳ್ಳೆ ಕ್ರೇಜ್ ಬರುತ್ತೆ ಅನ್ನೋದು ಮೇಕರ್ ಗಳ ಅನಿಸಿಕೆ. ಅದರ ಭಾಗವಾಗಿ ಸದ್ಯ ಟ್ರೆಂಡಿಂಗ್ ಆಗಿರುವ ಶ್ರದ್ಧಾ ಕಪೂರ್ ಅವರನ್ನು ಈ ಹಾಡಿಗೆ ಆಯ್ಕೆ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.  

 ಬಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಹೊರಹೊಮ್ಮುತ್ತಿರುವ ಶ್ರದ್ಧಾ ತೆಲುಗು ಪ್ರೇಕ್ಷಕರಿಗೂ ಚಿರಪರಿಚಿತ. ಈ ಹಿಂದೆ ಪ್ರಭಾಸ್ ಜೊತೆಗಿನ ಸಾಹೋ ಚಿತ್ರದಲ್ಲಿ ಈ ಸುಂದರಿ ಸದ್ದು ಮಾಡಿದ್ದರು. ಇತ್ತೀಚೆಗೆ ಆಕೆ ನಟಿಸಿದ ಸ್ತ್ರೀ 2 ಚಿತ್ರ 800 ಕೋಟಿ ಕಲೆಕ್ಷನ್ ಮಾಡಿದೆ.   

ಹೀಗಾಗಿ ಪುಷ್ಪಾ 2 ಚಿತ್ರದ ವಿಶೇಷ ಹಾಡನ್ನು ಅವರ ಜೊತೆ ಮಾಡಿಸಿದರೆ ಅದು ಉತ್ತರ ಮತ್ತು ದಕ್ಷಿಣ ಎರಡರಲ್ಲೂ ಕ್ಲಿಕ್ ಆಗಲಿದೆ ಎಂಬುದು ನಿರ್ಮಾಪಕರ ಅಭಿಪ್ರಾಯ. ಸದ್ಯದಲ್ಲೇ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link