ವಿರಾಟ್ ಅಲ್ಲ… IPLನ ಶ್ರೀಮಂತ ಕ್ಯಾಪ್ಟನ್ ಇವರೇ ನೋಡಿ! ಈ ಕ್ರಿಕೆಟಿಗರ ಆದಾಯ ನೋಡಿದ್ರೆ ಶಾಕ್ ಆಗ್ತೀರ

Thu, 20 Apr 2023-7:53 pm,

ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿ ಮಾರ್ಚ್ 31 ರಂದು ಪ್ರಾರಂಭವಾಗಿದ್ದು, ಸದ್ಯ ನಡೆಯುತ್ತಿದೆ. ಭಾರೀ ಕ್ರೇಜ್ ಹುಟ್ಟು ಹಾಕಿರುವ ಲೀಗ್’ನ ಬಗ್ಗೆ ನಿಮಗೆ ತಿಳಿಯದ ಕೆಲವು ಸಂಗತಿಗಳಿವೆ. ಇಂದು ನಾವು, ಐಪಿಎಲ್ ಕ್ರಿಕೆಟ್ ಲೋಕದ ಟಾಪ್ 5 ಶ್ರೀಮಂತ ಕ್ರಿಕೆಟಿಗರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ IPL 2023ರಲ್ಲಿ ಅತ್ಯಂತ ಶ್ರೀಮಂತ ಕ್ಯಾಪ್ಟನ್ ಎಂಬ ಖ್ಯಾತಿಗೆ ಒಳಪಟ್ಟಿದ್ದಾರೆ. DNA ಮತ್ತು Sportskeeda ಪ್ರಕಾರ, ನಾಲ್ಕು ಬಾರಿ ಐಪಿಎಲ್ ಟ್ರೋಫಿ ಎತ್ತಿಹಿಡಿದ ನಾಯಕ ಮತ್ತು ಮೂರು ಬಾರಿ ICC ಟ್ರೋಫಿ ಗೆದ್ದ ನಾಯಕ ಧೋನಿ 860 ಕೋಟಿ ರೂ.ಗಳ ಬೃಹತ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಧೋನಿಯ ನಾಯಕತ್ವದಲ್ಲಿ, CSK ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದ್ದಲ್ಲದೆ, 9 ಬಾರಿ ಫೈನಲ್‌, 11 ಬಾರಿ ಪ್ಲೇಆಫ್‌’ಗೆ ಎಂಟ್ರಿ ಕೊಟ್ಟಿದೆ.

ಐಪಿಎಲ್ 2023ರಲ್ಲಿ ಎರಡನೇ ಅತಿ ಶ್ರೀಮಂತ ನಾಯಕ ರೋಹಿತ್ ಶರ್ಮಾ. ಇವರ ನಿವ್ವಳ ಮೌಲ್ಯವು 147 ಕೋಟಿ ರೂ. ಮುಂಬೈ ಇಂಡಿಯನ್ಸ್ ತಂಡವನ್ನು ದಾಖಲೆಯ ಐದು ಬಾರಿ ಪ್ರಶಸ್ತಿ ಗೆಲ್ಲುವತ್ತ ಮುನ್ನಡೆಸಿದ್ದರು ಶರ್ಮಾ.

ಶಿಖರ್ ಧವನ್ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಎಕನಾಮಿಕ್ ಟೈಮ್ಸ್ ಪ್ರಕಾರ, ಧವನ್ ನಿವ್ವಳ ಮೌಲ್ಯ 96 ಕೋಟಿ ರೂ.

ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ನಿವ್ವಳ ಮೌಲ್ಯ 77 ಕೋಟಿ ರೂ. ಹಲವಾರು ವರ್ಷಗಳಿಂದ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಪಾಂಡ್ಯ, ಕಳೆದ ಎರಡು ಸೀಸನ್’ನಿಂದ ಹೊಸ ತಂಡ ಗುಜರಾತ್ ಟೈಟಾನ್ಸ್’ನ ನಾಯಕತ್ವ ವಹಿಸಿಕೊಂಡಿದ್ದಾರೆ.

ಐಪಿಎಲ್ 2023ರಲ್ಲಿ ಐದನೇ ಶ್ರೀಮಂತ ನಾಯಕ ಕೆ ಎಲ್ ರಾಹುಲ್. ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ಪ್ರಕಾರ ಇವರ ನಿವ್ವಳ ಮೌಲ್ಯ 75 ಕೋಟಿ ರೂ. ಲಕ್ನೋ ಸೂಪರ್ ಜೈಂಟ್‌ ನಾಯಕತ್ವ ವಹಿಸಿಕೊಂಡ ಕೆಎಲ್ ರಾಹುಲ್ 2018 ರಿಂದ ಐಪಿಎಲ್‌’ನಲ್ಲಿ ಸತತವಾಗಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. 2018, 2020, 2021 ಮತ್ತು 2022 ರಲ್ಲಿ 600 ಕ್ಕೂ ಹೆಚ್ಚು ರನ್ ಮತ್ತು 2019 ರಲ್ಲಿ 593 ರನ್ ಗಳಿಸಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link