ಈಗ ಎಸ್ ಬಿಐ ಬ್ಯಾಂಕ್ ನಲ್ಲಿ ಚಿನ್ನದ ಮೇಲೆ ಸಾಲ ಪಡೆಯುವುದು ಸುಲಭ ..!

Mon, 16 Aug 2021-9:15 pm,

೧. ಆಭರಣಗಳನ್ನು ಅಡಮಾನ ಇಟ್ಟು ಇಂದು ಸಾಲ ತೆಗೆದುಕೊಳ್ಳಲು ಇದು ಸುಲಭವಾದ ಮಾರ್ಗ.  ಈಗ  ಚಿನ್ನದ ನಾಣ್ಯಗಳನ್ನು ಒತ್ತೆ ಇಡುವ ಮೂಲಕವೂ ಎಸ್‌ಬಿಐ ಸಾಲವನ್ನು ನೀಡುತ್ತಿದೆ. ಎಸ್‌ಬಿಐ ಪ್ರಸ್ತುತ ಚಿನ್ನದ ಸಾಲದ ಬಡ್ಡಿದರಗಳನ್ನು ಶೇಕಡಾ 7 ರಿಂದ 29 ರಷ್ಟು ಬಡ್ಡಿದರದಲ್ಲಿ ತೆಗೆದುಕೊಳ್ಳುವ ಸೌಲಭ್ಯವನ್ನು ನೀಡುತ್ತಿದೆ. ಇದಕ್ಕಾಗಿ, ಗ್ರಾಹಕರು ಎಸ್‌ಬಿಐನ ಯೊನೊ ಖಾತೆಯೊಂದಿಗೆ ಲಾಗ್ ಇನ್ ಮಾಡುವ ಮೂಲಕ ಅರ್ಜಿಯನ್ನುಸಲ್ಲಿಸಬೇಕಾಗುತ್ತದೆ.  ಹತ್ತಿರದ ಎಸ್‌ಬಿಐ ಶಾಖೆಗೆ ಭೇಟಿ ನೀಡುವ ಮೂಲಕವು ಚಿನ್ನದ ಮೇಲಿನ ಸಾಲ ಪಡೆಯಲು ಅವಕಾಶವಿದೆ.  

ಈಗ ಗೋಲ್ಡ್ ಲೋನ್‌ಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಪ್ರಶ್ನೆ  ಬರುತ್ತದೆ. ಇದಕ್ಕಾಗಿ, SBI ಗ್ರಾಹಕರು ಮೊದಲು ತಮ್ಮ YONO ಖಾತೆಗೆ ಲಾಗ್ ಇನ್ ಆಗಬೇಕು. ಇದರ ನಂತರ, ಮುಖಪುಟದಲ್ಲಿ ಇರುವ ಬಲ ಬದಿಯಲ್ಲಿರುವ್ ಸೈಟ್‌ನ ಮೆನುವಿನ ಮೇಲೆ ಕ್ಲಿಕ್ ಮಾಡಿ.  ಇಲ್ಲಿ ಸಾಲದ ಆಯ್ಕೆಯನ್ನು ನೋಡುತ್ತೀರಿ, ಇದರಲ್ಲಿ Gold Loan ಆಯ್ಕೆಯ ಅಪ್ಲೈ ಮೇಲೆ ಕ್ಲಿಕ್ ಮಾಡಿ. ಈಗ  ಯಾವ ರೀತಿಯ ಆಭರಣ, ಪರಿಮಾಣ, ಕ್ಯಾರೆಟ್ ಮತ್ತು ನಿವ್ವಳ ತೂಕದ ವಿವರಗಳನ್ನು ಭರ್ತಿ ಮಾಡಿ. ಇದರ ನಂತರ, ನಿಮ್ಮ ನಿವ್ವಳ ಮಾಸಿಕ ಆದಾಯವನ್ನು ಹಾಕಿ. ಇದರೊಂದಿಗೆ, ನಿಮ್ಮ ವಿಳಾಸ ಪುರಾವೆ ಮತ್ತು ಗುರುತಿನ ಪುರಾವೆಗಳನ್ನು ನೀಡಬೇಕಾಗುತ್ತದೆ.

ಈಗ ಎಸ್‌ಬಿಐ ಶಾಖೆಗೆ ಭೇಟಿ ನೀಡುವ ಮೂಲಕ ಚಿನ್ನದ ಸಾಲಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ನೋಡೋಣ . ಚಿನ್ನದ ಸಾಲವನ್ನು ಪಡೆಯಲು, ನಿಮ್ಮ ಆಭರಣದೊಂದಿಗೆ ಎಸ್‌ಬಿಐನ ಹತ್ತಿರದ ಶಾಖೆಗೆ ಹೋಗಿ. ಇದಕ್ಕಾಗಿ, ಎರಡು ಫೋಟೋ ಕೆವೈಸಿ ದಾಖಲೆಗಳ ಅಗತ್ಯವಿರುತ್ತದೆ. ಅಲ್ಲದೆ, ನಿಮ್ಮ ಎಲ್ಲಾ ದಾಖಲೆಗಳ ಮೇಳೆ ಸಹಿ ಮಾಡಿ, ಸಲ್ಲಿಸಬಹುದು. ಅವರು ನಿಮ್ಮ ಚಿನ್ನವನ್ನು ಪರಿಶೀಲಿಸಿದ ನಂತರ ಚಿನ್ನದ ಮಳೆ ಸಾಲ ಸಿಗುತ್ತದೆ.  

ಎಸ್‌ಬಿಐ ಪ್ರಕಾರ, 18 ವರ್ಷಕ್ಕಿಂತ ಮೇಲ್ಪಟ್ಟವರು ಎಸ್‌ಬಿಐನಿಂದ ಚಿನ್ನದ ಸಾಲ ಪಡೆಯುವ ಸೌಲಭ್ಯವನ್ನು ಹೊಂದಿದ್ದಾರೆ. ಇದರ ಹೊರತಾಗಿ, ಪಿಂಚಣಿ ಪಡೆಯುವ ಜನರು, ಎಸ್‌ಬಿಐನಲ್ಲಿ ಚಿನ್ನದ ಸಾಲ ಪಡೆಯಲು  ಯಾವುದೇ ಆದಾಯದ ಪುರಾವೆಗಳನ್ನು ತೋರಿಸುವ ಅಗತ್ಯವಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link