Kotak Mahindra Smart EMI: ಯಾವುದೇ ಕಾಗದ ಪತ್ರಗಳಿಲ್ಲದೆ ಸುಲಭವಾಗಿ ಸಾಲ ನೀಡಲಿದೆ ಈ ಬ್ಯಾಂಕ್

Wed, 11 Aug 2021-5:27 pm,

ಕೋಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರು ಟೆಲಿವಿಷನ್‌ನಿಂದ ಪೀಠೋಪಕರಣಗಳವರೆಗೆ ಯಾವುದೇ ಉತ್ಪನ್ನವನ್ನು ಸುಲಭವಾದ ಇಎಂಐ ಕಂತುಗಳಲ್ಲಿ ಖರೀದಿಸಬಹುದು. ಇದಕ್ಕಾಗಿ ಬ್ಯಾಂಕ್ 15 ಲಕ್ಷದವರೆಗೆ ಹಣಕಾಸಿನ ಸೌಲಭ್ಯವನ್ನು ನೀಡುತ್ತಿದೆ.

ಕೋಟಕ್ ಬ್ಯಾಂಕಿನಿಂದ ಪಡೆದ ಮಾಹಿತಿಯ ಪ್ರಕಾರ, ಈ ಸ್ಮಾರ್ಟ್ ಇಎಂಐ ಯೋಜನೆಯಡಿಯಲ್ಲಿ, ಇಎಂಐನಲ್ಲಿ ಶಾಪಿಂಗ್ ಮಾಡುವ ಅನುಕೂಲವನ್ನು ಕಲ್ಪಿಸಲಾಗಿದೆ. ಇದಕ್ಕಾಗಿ, ನೀವು ನಿಮ್ಮ ಹತ್ತಿರದ ಬ್ಯಾಂಕಿನಪಾರ್ಟ್ನರ್ ಸ್ಟೋರ್ ಗೆ ಭೇಟಿ ನೀಡಬೇಕು. ಅಲ್ಲಿ ತಮ್ಮ ಮಾಹಿತಿಯನ್ನು ನೀಡಬೇಕು. ಇದನ್ನು ಪರಿಶೀಲಿಸಿದ ನಂತರ, ಸಾಲಕ್ಕೆ ಅನುಮೋದನೆ ಸಿಗುತ್ತದೆ. 

ಸ್ಮಾರ್ಟ್ ಇಎಂಐ ಸೌಲಭ್ಯವನ್ನು ಪಡೆಯಲು  ಸಣ್ಣ ಕಾಗದಪತ್ರಗಳನ್ನಷ್ಟೇ ನೀಡಬೇಕಾಗುತ್ತದೆ ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್ ಹೇಳಿದೆ. ಇಲ್ಲಿ ನಿಮಗೆ ಬೇಕಾಗಿರುವುದು ಪ್ಯಾನ್ ಕಾರ್ಡ್ ಮತ್ತು ಕೆವೈಸಿ ದಾಖಲೆ.

Smat EMI ಅಡಿಯಲ್ಲಿ, ನೀವು ಅನೇಕ ಉತ್ಪನ್ನಗಳ ಮೇಲೆ  NIL ಡೌನ್ ಪೇಮೆಂಟ್ ಮಾಡಬೇಕಾಗುತ್ತದೆ.  ಗ್ರಾಹಕರ  ಅನುಕೂಲಕ್ಕೆ ತಕ್ಕಂತೆ 6 ತಿಂಗಳಿಂದ 24 ತಿಂಗಳವರೆಗೆ EMI ಅನ್ನು ಪಡೆಯಬಹುದು. 

ಕೋಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರು ಸ್ಮಾರ್ಟ್ ಇಎಂಐ ಕಾರ್ಡ್ ಆಯ್ಕೆಯನ್ನು ಕೂಡ ತೆಗೆದುಕೊಳ್ಳಬಹುದು. ಬ್ಯಾಂಕ್ ಸೂಚಿಸಿರುವ 40 ಸಾವಿರಕ್ಕೂ ಹೆಚ್ಚು ಮಳಿಗೆಗಳಲ್ಲಿ ಈ ಕಾರ್ಡ್ ಅನ್ನು ಸುಲಭವಾಗಿ ಬಳಸಬಹುದು. ಈ ಕಾರ್ಡ್ ಬಳಸಿ ಮಾಡಿದ ಶಾಪಿಂಗ್ ಅನ್ನು ಸುಲಭವಾಗಿ ಇಎಂಐ ಆಗಿ ಪರಿವರ್ತಿಸಲಾಗುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link