ಈ ಸುಲಭ ವಿಧಾನಗಳಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ ವಾಕ್ಸಿನೇಶನ್ ಸರ್ಟಿಫಿಕೇಟ್
ಮೊದಲು CoWIN ವೆಬ್ ಸೈಟ್ ಗೆ ಭೇಟಿ ನೀಡಬೇಕು. ನಂತರ ವೆಬ್ ಸೈಟ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಿದರೆ ನಿಮಗೆ ಒಟಿಪಿ (OTP) ಸಿಗುತ್ತದೆ.
ವೆಬ್ ಸೈಟ್ ಗೆ ಒಮ್ಮೆ ಲಾಗ್ ಇನ್ ಮಾಡಿದ ನಂತರ, ಮೊಬೈಲ್ ಮೂಲಕ ನೋಂದಾಯಿಸಿದ ಎಲ್ಲಾ ರಿಜಿಸ್ಟರ್ ಸದಸ್ಯರ ಪಟ್ಟಿಯನ್ನು ಕಾಣಬಹುದು. ಇಲ್ಲಿ ಎರಡೂ ಡೋಸ್ ಲಸಿಕೆ ಪಡೆದವರ ಹೆಸರನ್ನು ಹಸಿರು ಬಣ್ಣದ ಪ್ಲಾಸ್ಟರ್ ಬ್ಯಾನರ್ ಮೂಲಕ ‘Vaccinated' ಎಂದು ತೋರಿಸುತ್ತದೆ.
ಈಗ ಬಲಭಾಗದಲ್ಲಿ ಕಾಣುವ ‘Certificate' ಬಟನ್ ಅನ್ನು ಕ್ಲಿಕ್ ಮಾಡಬೇಕು. ಇದಾದ ನಂತರ ಸರ್ಟಿಫಿಕೇಟ್ ನ pdf ಹೊಸ ಟ್ಯಾಬ್ ಅಥವಾ ವಿಂಡೋದಲ್ಲಿ ಓಪನ್ ಆಗುತ್ತದೆ. ಡೌನ್ ಲೋಡ್ ಬಟನ್ ಕ್ಲಿಕ್ ಮಾಡುವ ಮೂಲಕ, ನಿಮ್ಮ ಮೊಬೈಲ್ ಫೋನ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ಸೇವ್ ಮಾಡಿಕೊಳ್ಳಬಹುದು.
ಇದಲ್ಲದೆ Aarogya Setu app ಮೂಲಕವೂ ಸರ್ಟಿಫಿಕೇಟ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಇದಕ್ಕಾಗಿ ನಿಮಗೆ CoWIN ಟ್ಯಾಬ್ ನಲ್ಲಿ Vaccination Certificate ಮೇಲೆ ಕ್ಲಿಕ್ ಮಾಡಿ.
ಇದರ ನಂತರ, Reference ID ಯನ್ನು ಎಂಟರ್ ಮಾಡಬೇಕಾಗುತ್ತದೆ. ಈಗ ‘Get Certificate' ಮೇಲೆ ಕ್ಲಿಕ್ ಮಾಡಿ ಮತ್ತು ‘Download PDF 'ಬಟನ್ ಒತ್ತುವ ಮೂಲಕ ಸರ್ಟಿಫಿಕೇಟನ್ನು ಪಡೆಯಬಹುದು.