NPS Vatsalya Vs SSY ಯಾವ ಸ್ಕೀಮ್ ಪೋಷಕರಿಗೆ ಹೆಚ್ಚು ಲಾಭ !ಇಲ್ಲಿದೆ ನೋಡಿ ಲೆಕ್ಕಾಚಾರ !
NPS ವಾತ್ಸಲ್ಯ ಯೋಜನೆ ಅಡಿಯಲ್ಲಿ, ಭಾರತೀಯ ಪೋಷಕರು ತಮ್ಮ ಮಗುವಿನ ಹೆಸರಿನಲ್ಲಿ ಕನಿಷ್ಠ 1000 ರೂ.ಗಳಿಂದ ಹೂಡಿಕೆಯನ್ನು ಪ್ರಾರಂಭಿಸಬಹುದು.ಗರಿಷ್ಠಹೂಡಿಕೆಗೆ ಮಿತಿಯಿಲ್ಲ.ಮಗುವಿಗೆ 18 ವರ್ಷವಾಗುವವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಸಾಧ್ಯ ಇದ್ದಲ್ಲಿ 60 ವರ್ಷಗಳವರೆಗೂ ಅದನ್ನು ಮುಂದುವರೆಸಿಕೊಂಡು ಹೋಗಬಹುದು. ಮಗುವಿಗೆ 18 ವರ್ಷ ತುಂಬಿದ ನಂತರ 20 ಪ್ರತಿಶತ ಮೊತ್ತವನ್ನು ಹಿಂಪಡೆಯಬಹುದು. ಉಳಿದ 80 ಪ್ರತಿಶತ ಮೊತ್ತವನ್ನು ವರ್ಷಾಶನದಂತೆ ಪಡೆಯಬಹುದು.ಈ ವರ್ಷಾಶನದಿಂದ,ಮಗುವಿಗೆ 60 ವರ್ಷ ವಯಸ್ಸಿನ ನಂತರ ಪಿಂಚಣಿ ಸಿಗುತ್ತದೆ.
NPS ವಾತ್ಸಲ್ಯದಲ್ಲಿ 18 ವರ್ಷಗಳವರೆಗೆ ವಾರ್ಷಿಕವಾಗಿ 10,000 ಹೂಡಿಕೆ ಮಾಡಿ, 10 ಪ್ರತಿಶತದಷ್ಟು (RoR) ಆದಾಯವನ್ನು ಪಡೆದರೆ, ಸಿಗುವ ಅಂದಾಜು ಕಾರ್ಪಸ್ 5 ಲಕ್ಷ ರೂ. ಅದೇ ನಿಧಿಯನ್ನು 60 ವರ್ಷ ವಯಸ್ಸಿನಲ್ಲಿ 10% ಆದಾಯದ ದರದಲ್ಲಿ ನೋಡುವುದಾರೆ ಸಿಗುವ ಮೊತ್ತ 2.75 ಕೋಟಿ ರೂ. ಈ ಆದಾಯವು 11.59% ಕ್ಕೆ ಹೆಚ್ಚಾದರೆ 60 ವರ್ಷಗಳ ನಂತರ 5.97 ಕೋಟಿ ರೂಪಾಯಿಗಳ ನಿಧಿ ಶೇಖರಣೆಯಾಗುತ್ತದೆ.
ಪಿಪಿಎಫ್ ಸರ್ಕಾರಿ ಪ್ರಾಯೋಜಿತ ಹೂಡಿಕೆ ಯೋಜನೆಯಾಗಿದೆ.ಈ ಹೂಡಿಕೆ ಯೋಜನೆಯು ಪೋಸ್ಟ್ ಆಫೀಸ್ ಅಡಿಯಲ್ಲಿ ನಡೆಯುತ್ತದೆ.ಇದು ಸಣ್ಣ ಉಳಿತಾಯ ಯೋಜನೆಯಡಿ ಬರುತ್ತದೆ.ಯಾವುದೇ ಭಾರತೀಯ ನಾಗರಿಕರು ಈ ಸಣ್ಣ ಉಳಿತಾಯ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದು.ಈ ಯೋಜನೆಯಲ್ಲಿ ನೀವು ವಾರ್ಷಿಕವಾಗಿ ಕನಿಷ್ಠ 500 ಮತ್ತು ಗರಿಷ್ಠ ರೂ 1.5 ಲಕ್ಷ ಹೂಡಿಕೆ ಮಾಡಬಹುದು.
15 ವರ್ಷಗಳ ಪಕ್ವತೆಯ ನಂತರ, ಇದನ್ನು ತಲಾ ಐದು ವರ್ಷಗಳವರೆಗೆ ಎರಡು ಬಾರಿ ವಿಸ್ತರಿಸಬಹುದು. ಪ್ರಸ್ತುತ, ಇದು ವಾರ್ಷಿಕ 7.1 ಪ್ರತಿಶತದಷ್ಟು ಆದಾಯವನ್ನು ನೀಡುತ್ತಿದೆ.ಪಿಪಿಎಫ್ ನಲ್ಲಿ ವಾರ್ಷಿಕ 1.5 ಲಕ್ಷ ಹೂಡಿಕೆ ಮಾಡಿದರೆ 25 ವರ್ಷಗಳಲ್ಲಿ 1.03 ಕೋಟಿ ರೂ. ಆದಾಯ ಸಿಗುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ (SSY) ವಾರ್ಷಿಕವಾಗಿ 1.5 ಲಕ್ಷದವರೆಗೆ ಗರಿಷ್ಠ ಹೂಡಿಕೆ ಮಾಡಲಾಗುತ್ತದೆ. ಕನ್ಯಾ ಸಮೃದ್ಧಿಯು ವಾರ್ಷಿಕ 8.2 ಪ್ರತಿಶತ ಆದಾಯವನ್ನು ನೀಡುತ್ತದೆ. 15 ವರ್ಷಗಳಲ್ಲಿ,ವಾರ್ಷಿಕವಾಗಿ 1.5 ಲಕ್ಷ ದರದಲ್ಲಿ ಒಟ್ಟು 22.50 ಲಕ್ಷವನ್ನು ಹೂಡಿಕೆಯಾಗುತ್ತದೆ. ಪ್ರಸ್ತುತ ಲೆಕ್ಕಾಚಾರದ ಪ್ರಕಾರ, ಮೆಚ್ಯೂರಿಟಿ ಸಮಯದಲ್ಲಿ ನಿಮಗೆ 69.27 ಲಕ್ಷ ರೂ. ಕೈ ಸೇರುತ್ತದೆ.