ನ್ಯೂಕ್ಲಿಯರ್ ಯುದ್ಧವಾದರೂ ಈ ಸ್ಥಳಗಳಿಗೆ ಏನೂ ಆಗಲ್ಲ..!

Mon, 07 Mar 2022-8:03 pm,

ಜಗತ್ತಿನಲ್ಲಿ ಪರಮಾಣು ಬಾಂಬುಗಳನ್ನು ಹೊಂದಿರುವ ದೇಶಗಳ ಬಗ್ಗೆ ಮಾತನಾಡುವುದಾದರೆ, ಕೇವಲ 8 ದೇಶಗಳ ಬಳಿ ಈ ಬಲಿಷ್ಠ ಬಾಂಬ್ ಗಳು ಇವೆ. ಈ ದೇಶಗಳು ಸುಮಾರು 13,000 ಪರಮಾಣು ಬಾಂಬ್‌ಗಳನ್ನು ಹೊಂದಿವೆ. ಈ ಬಾಂಬುಗಳ ಪರಿಣಾಮದ ಬಗ್ಗೆ ಕೇಳಿದ್ರೆ ನೀವು ಬೆಚ್ಚಿಬೀಳುತ್ತಿರಿ. ಏಕೆಂದರೆ ಒಂದು ವೇಳೆ ಈ ಬಾಂಬ್ ಗಳನ್ನು ಒಟ್ಟಿಗೆ ಸ್ಫೋಟಿಸಿದರೆ ಇಡೀ ಜಗತ್ತು ಒಮ್ಮೆ ಅಲ್ಲ ಹಲವಾರು ಬಾರಿ ಸರ್ವನಾಶವಾಗಬಹುದು. ರಷ್ಯಾವು ಗರಿಷ್ಠ 6,800 ಪರಮಾಣು ಬಾಂಬ್‌ಗಳನ್ನು ಹೊಂದಿದೆ. ಇದರ ನಂತರ ಅಮೆರಿಕದ ಬಳಿ ಹೆಚ್ಚಿನ ನ್ಯೂಕ್ಲಿಯರ್ ಬಾಂಬ್ ಇವೆ. ಹೀಗಿರುವಾಗ ಎಂದಾದರೂ ಪರಮಾಣು ಅಸ್ತ್ರಗಳ ಸಮರ ಶುರುವಾದರೆ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಎಲ್ಲಿ ಹೋಗಬೇಕು ಅನ್ನೋ ಪ್ರಶ್ನೆ ಮೂಡಿದೆ. ಇಂತಹ ಕೆಲವು ಸ್ಥಳಗಳಿವೆ, ಈ ಸ್ಥಳಗಳ ಮೇಲೆ ನ್ಯೂಕ್ಲಿಯರ್ ಬಾಂಬ್ ನ ಪರಿಣಾಮವೇ ಉಂಟಾಗುವುದಿಲ್ಲ.

ಜಗತ್ತಿನಲ್ಲಿ ಪರಮಾಣು ಯುದ್ಧ ನಡೆದರೆ ಎಲ್ಲಾ ದೇಶಗಳು ಕೊನೆಗೊಳ್ಳುತ್ತವೆ. ಆದರೆ ಅಂಟಾರ್ಟಿಕಾ ಖಂಡವು ಉಳಿಯುತ್ತದೆ ಎಂದು ‘ದಿ ಸನ್’ ವರದಿ ಹೇಳಿದೆ. ಇದಕ್ಕೆ ಕಾರಣ ಜೂನ್ 1961ರಲ್ಲಿ ಸಹಿ ಮಾಡಿದ ಒಪ್ಪಂದದ ಪ್ರಕಾರ ಈ ಹಿಮಾವೃತ ಖಂಡದಲ್ಲಿ ಮಿಲಿಟರಿ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಆರಂಭದಲ್ಲಿ ಈ ಒಪ್ಪಂದವು ಅರ್ಜೆಂಟೀನಾ, ಆಸ್ಟ್ರೇಲಿಯಾ, ಬೆಲ್ಜಿಯಂ, ಚಿಲಿ, ಫ್ರಾನ್ಸ್, ಜಪಾನ್, ನ್ಯೂಜಿಲೆಂಡ್, ನಾರ್ವೆ, ದಕ್ಷಿಣ ಆಫ್ರಿಕಾ, ಸೋವಿಯತ್ ಒಕ್ಕೂಟ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಅನ್ನು ಒಳಗೊಂಡಿತ್ತು. ನಂತರ, ಬ್ರೆಜಿಲ್, ಚೀನಾ, ಜರ್ಮನಿ, ಉತ್ತರ ಕೊರಿಯಾ, ಪೋಲೆಂಡ್ ಮತ್ತು ಭಾರತ ಸೇರಿದಂತೆ ವಿಶ್ವದ ಎಲ್ಲಾ ದೇಶಗಳು ಸಹ ಈ ಒಪ್ಪಂದಕ್ಕೆ ಸಹಿ ಹಾಕಿವೆ.

ವರದಿಯ ಪ್ರಕಾರ ಪರಮಾಣು ಯುದ್ಧದಲ್ಲಿ ಅಮೆರಿಕವು ವಿಶ್ವ ಭೂಪಟದಿಂದ ಅಳಿಸಿಹೋಗುತ್ತದೆ, ಆದರೆ ಕೊಲೊರಾಡೋದ ಪರ್ವತ ಪ್ರದೇಶದಲ್ಲಿ ನಿರ್ಮಿಸಲಾದ ಕೇಂದ್ರವು ಸುರಕ್ಷಿತವಾಗಿರುತ್ತದೆ. ಈ ಪರ್ವತದೊಳಗೆ ಗುಹೆಯನ್ನು ಮಾಡುವ ಮೂಲಕ ಅಮೆರಿಕ ಸೈನ್ಯವು ತನ್ನ ಪರಮಾಣು ನಿರೋಧಕ ನೆಲೆಯನ್ನು ನಿರ್ಮಿಸಿದೆ. ಈ ಗುಹೆಯ ಪ್ರವೇಶದ್ವಾರದಲ್ಲಿ 25 ಟನ್ ತೂಕದ ಭಾರವಾದ ಬಾಗಿಲು ಇದೆ. ಪರಮಾಣು ಬಾಂಬ್ ಬಿದ್ದರೂ ಇದಕ್ಕೆ ಯಾವುದೇ ರೀತಿ ಹಾನಿಯುಂಟಾಗುವುದಿಲ್ಲ. ಉತ್ತರ ಅಮೆರಿಕದ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ (NORAD) ಮತ್ತು ಯುನೈಟೆಡ್ ಸ್ಟೇಟ್ಸ್ ನಾರ್ದರ್ನ್ ಕಮಾಂಡ್‌ನ ಪ್ರಧಾನ ಕಚೇರಿಗಳು ಈ ಸಂಕೀರ್ಣದೊಳಗೆ ನೆಲೆಗೊಂಡಿವೆ. ಸೋವಿಯತ್ ಒಕ್ಕೂಟದ ಬಾಂಬರ್‌ಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಪರಮಾಣು ದಾಳಿಯನ್ನು ಎದುರಿಸಲು 1966ರಲ್ಲಿ ಅಮೆರಿಕ ಈ ಮಿಲಿಟರಿ ನೆಲೆಯನ್ನು ನಿರ್ಮಿಸಿತು.

ಐಸ್ಲ್ಯಾಂಡ್ ಉತ್ತರ ಧ್ರುವದಲ್ಲಿರುವ ಒಂದು ಸಣ್ಣ ದೇಶವಾಗಿದೆ. ವರ್ಷವಿಡೀ ಹಿಮದಿಂದ ಆವೃತವಾಗಿರುವ ಐಸ್ಲ್ಯಾಂಡ್ ತಟಸ್ಥ ದೇಶವಾಗಿದೆ. ಇದು ವಿಶ್ವದ ವಿವಿಧ ದೇಶಗಳಲ್ಲಿ ನಡೆಯುತ್ತಿರುವ ರಾಜಕೀಯದಿಂದ ದೂರವಿರುತ್ತದೆ. ವಿಶ್ವದ ಯಾವುದೇ ದೇಶವು ಐಸ್‌ಲ್ಯಾಂಡ್ ಅನ್ನು ತನ್ನ ಶತ್ರು ರಾಷ್ಟ್ರವಾಗಿ ನೋಡದ ಕಾರಣ ಇದರ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಆದ್ದರಿಂದ ಇಲ್ಲಿಯೂ ಸಹ ಪರಮಾಣು ದಾಳಿಯ ಸಾಧ್ಯತೆ ಬಹಳ ಕಡಿಮೆ. ಹೀಗಾಗಿ ಇದು ವಿಶ್ವದಲ್ಲೇ ಅಂತ್ಯಂತ ಸುರಕ್ಷಿತ ಸ್ಥಳವಾಗಿದೆ.

ಗುವಾಮ್ ಪೆಸಿಫಿಕ್ ಮಹಾಸಾಗರದಲ್ಲಿರುವ ಒಂದು ಸಣ್ಣ ದ್ವೀಪ ರಾಷ್ಟ್ರವಾಗಿದೆ. ಇದರ ಜನಸಂಖ್ಯೆ ಕೇವಲ 1 ಲಕ್ಷ 68 ಸಾವಿರ. ಸೇನೆಯಲ್ಲಿ ಕೇವಲ 1,300 ಜನರಿದ್ದು, ಈ ಪೈಕಿ 280 ಮಂದಿ ಮಾತ್ರ ಪೂರ್ಣಾವಧಿ ಉದ್ಯೋಗಿಗಳಾಗಿದ್ದಾರೆ. ಉಳಿದವರು ತಾತ್ಕಾಲಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ದೇಶವು ಸಂಪೂರ್ಣವಾಗಿ ಪ್ರವಾಸೋದ್ಯಮವನ್ನು ಅವಲಂಬಿಸಿದೆ. ಪ್ರಪಂಚದ ಈ ಪುಟ್ಟ ದೇಶವನ್ನು ಯಾರೂ ತಮ್ಮ ಶತ್ರು ದೇಶವೆಂದು ಪರಿಗಣಿಸಿಲ್ಲ. ಹೀಗಾಗಿ ಇದರ ಮೇಲೆ ಪರಮಾಣು ದಾಳಿಯ ಸಾಧ್ಯತೆಯು ತುಂಬಾ ಕಡಿಮೆ. ಈ ಕಾರಣದಿಂದ ಇದನ್ನು ವಿಶ್ವದ ಸುರಕ್ಷಿತ ಪ್ರದೇಶಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ಇಸ್ರೇಲ್ ಗೆ ಅದರ ಅಸ್ತಿತ್ವವನ್ನೇ ಅಳಸಿಹಾಕುವ ಬೆದರಿಕೆ ಇದೆ. ಆದರೂ ಈ ದೇಶದ ಮೇಲೆ ಪರಮಾಣು ದಾಳಿ ನಡೆಯುವ ಸಾಧ್ಯತೆ ತೀರಾ ಕಡಿಮೆ. ಇದಕ್ಕೆ ಕಾರಣ ಇಸ್ರೇಲ್ ನಲ್ಲಿ ಇಸ್ಲಾಂ, ಕ್ರಿಶ್ಚಿಯನ್ ಮತ್ತು ಜುದಾಯಿಸಂನ ಪುರಾತನ ಸ್ಮಾರಕಗಳಿವೆ. ಯಾವುದೇ ಮುಸ್ಲಿಂ ಅಥವಾ ಕ್ರಿಶ್ಚಿಯನ್ ರಾಷ್ಟ್ರವು ಪರಮಾಣು ದಾಳಿಯೊಂದಿಗೆ ಕೊನೆಗೊಳ್ಳಲು ಬಯಸುವುದಿಲ್ಲ. ಈ ಕಾರಣಕ್ಕೆ ಪರಮಾಣು ಶಸ್ತ್ರಾಸ್ತ್ರಗಳಿಂದ ಸುರಕ್ಷಿತವಾಗಿರುವ ದೇಶಗಳ ಪಟ್ಟಿಯಲ್ಲಿ ಈ ದೇಶವೂ ಸೇರಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link