Aamir Khan Daughter Ira Khan: ಬೆಡ್ ರೂಂನಲ್ಲಿ ಅಮೀರ್ ಖಾನ್ ಪುತ್ರಿ ಇರಾ ಖಾನ್ ಜೊತೆ ನೂಪುರ್: ಕಿಸ್ಸಿಂಗ್ ಫೋಟೋ ವೈರಲ್!

Tue, 14 Feb 2023-5:31 pm,

ಈಗ ಇರಾ ಖಾನ್ ಪ್ರೇಮಿಗಳ ದಿನದಂದು ಸಾಮಾಜಿಕ ಮಾಧ್ಯಮದಲ್ಲಿ ರೊಮ್ಯಾಂಟಿಕ್ ಚಿತ್ರಗಳನ್ನು ಹಂಚಿಕೊಂಡಿದ್ದು, ಈ ಚಿತ್ರಗಳಲ್ಲಿ ಇರಾ ನೂಪುರ್ ಶಿಖರೆ ಅವರೊಂದಿಗೆ ರೋಮ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿದೆ.

ಇರಾ ಖಾನ್ ಮತ್ತು ನೂಪುರ್ ಶಿಖರೆ ಪ್ರೇಮಿಗಳ ದಿನದಂದು ರೊಮ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿದೆ. ಈ ಚಿತ್ರಗಳನ್ನು ಇರಾ ಖಾನ್ ಸ್ವತಃ Instagram ನಲ್ಲಿ ಹಂಚಿಕೊಂಡಿದ್ದಾರೆ.

ಈ ಚಿತ್ರಗಳು ಇರಾ ಖಾನ್ ಅವರ ಬೆಡ್ ರೂಂನದ್ದಾಗಿದೆ. ಅಲ್ಲಿ ನೂಪುರ್ ಶಿಖರೆಯೊಂದಿಗೆ ಸಮಯ ಕಳೆಯುತ್ತಿರುವುದನ್ನು ಕಾಣಬಹುದು. ಈ ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ತುಂಬಾ ಖುಷಿಯಾಗಿ ಕಾಣುತ್ತಿದ್ದಾರೆ.

ಈ ಚಿತ್ರಗಳನ್ನು ಇರಾ ಖಾನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ, ಇರಾ ಹೀಗೆ ಬರೆದುಕೊಂಡಿದ್ದಾರೆ. “ನಾವು ಪರಸ್ಪರರ ಪ್ರತಿಯೊಂದು ರೂಪವನ್ನು ನೋಡಿದ್ದೇವೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಹ್ಯಾಪಿ ವ್ಯಾಲೆಂಟೈನ್ಸ್ ಡೇ”

ಕಳೆದ ವರ್ಷ ನವೆಂಬರ್ 18 ರಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಇರಾ ಖಾನ್ ನೂಪುರ್ ಶಿಖರೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿಶ್ಚಿತಾರ್ಥದ ಫೋಟೋಗಳು ಭಾರೀ ಚರ್ಚೆಗೆ ಗ್ರಾಸವಾಗಿದ್ದವು.

ನಿಶ್ಚಿತಾರ್ಥದಲ್ಲಿ ಇರಾ ಖಾನ್ ಆಫ್ ಶೋಲ್ಡರ್ ರೆಡ್ ಗೌನ್ ಧರಿಸಿದ್ದರು. ಮತ್ತೊಂದೆಡೆ, ಕಪ್ಪು ಕೋಟ್ ಮತ್ತು ಪ್ಯಾಂಟ್ ಧರಿಸಿ ಇರಾ ಅವರ ಕೈಯನ್ನು ಹಿಡಿದು ಪಾಪರಾಜಿಗಳ ಮುಂದೆ ನೂಪುರ್ ಬಂದರು. ಇರಾ ಅಮೀರ್ ಖಾನ್ ಮತ್ತು ರೀನಾ ದತ್ತಾ ಅವರ ಮಗಳು. ಅಮೀರ್ ಮತ್ತು ರೀನಾ ಹಲವು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link