ಅಂದು ಹೋಟೆಲ್‌ ಸಪ್ಲೈಯರ್‌.. ಇಂದು ಟಾಟಾ, ಅಂಬಾನಿಗಿಂತ ಹೆಚ್ಚು ಶ್ರೀಮಂತ..! ಯಾರು ಆ ವ್ಯಕ್ತಿ..?

Thu, 20 Jun 2024-3:44 pm,

ಹೌದು.. ಅವರು.. ಬೇರೆ ಯಾರೂ ಅಲ್ಲ. ಜೆನ್ಸೆನ್ ಹುವಾಂಗ್ (Jensen Huang) ಎನ್ವಿಡಿಯಾದ (Nvidia Corporation) ಸಂಸ್ಥಾಪಕ ಮತ್ತು CEO ಆಗಿದ್ದಾರೆ. ಜೆನ್ಸನ್ ಹುವಾಂಗ್ ಈಗ ವಿಶ್ವದ 11 ನೇ ಶ್ರೀಮಂತ ವ್ಯಕ್ತಿ. ಅವರ ನಿವ್ವಳ ಮೌಲ್ಯವು $4 ಬಿಲಿಯನ್‌.   

ಫೋರ್ಬ್ಸ್‌ ವರದಿ ಪ್ರಕಾರ, ಬಿಲಿಯನೇರ್‌ಗಳ ಪಟ್ಟಿಯಲ್ಲಿ ಜೆನ್ಸೆನ್‌ ಅವರು ಅತ್ಯುನ್ನತ ಶ್ರೇಣಿಯಲ್ಲಿದ್ದಾರೆ. ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಭಾರತೀಯ ಬಿಲಿಯನೇರ್ ರತನ್ ಟಾಟಾ ಅವರಿಗಿಂತ ಮುಂದಿದ್ದಾರೆ.  

ಎನ್ವಿಡಿಯಾ ಮೈಕ್ರೋಸಾಫ್ಟ್ ಆಪಲ್ ಅನ್ನು ಮೀರಿ ವಿಶ್ವದ ಅತ್ಯಂತ ಮೌಲ್ಯಯುತವಾದ ವ್ಯಾಪಾರ ಮಾಡುವ ಕಂಪನಿಯಾಗಿದೆ. ಕಂಪನಿಯ ಷೇರುಗಳು 3.4 ಪ್ರತಿಶತದಷ್ಟು ಏರಿದೆ, ಇದು ಸರಿಸುಮಾರು $3.3 ಟ್ರಿಲಿಯನ್ ಮಾರುಕಟ್ಟೆ ಬಂಡವಾಳವನ್ನು ನೀಡಿದೆ. Nvidia ವಾಲ್ ಸ್ಟ್ರೀಟ್‌ನಲ್ಲಿ ಹೆಚ್ಚು ವಹಿವಾಟು ನಡೆಸುವ ಕಂಪನಿಯಾಗಿ ಹೊರಹೊಮ್ಮಿದೆ. ಸರಾಸರಿ ದೈನಂದಿನ ವಹಿವಾಟು $50 ಶತಕೋಟಿ, ಆಪಲ್, ಮೈಕ್ರೋಸಾಫ್ಟ್ ಮತ್ತು ಟೆಸ್ಲಾಗಳ ದೈನಂದಿನ ಮಾರಾಟದ $10 ಶತಕೋಟಿಗಿಂತ ಮುಂದಿದೆ.  

ಜೆನ್ಸನ್ ಹುವಾಂಗ್ 1963 ರಲ್ಲಿ ತೈವಾನ್‌ನ ತೈನಾನ್‌ನಲ್ಲಿ ಜನಿಸಿದರು. ಅವರು 5 ವರ್ಷದವರಾಗಿದ್ದಾಗ, ಅವರ ಕುಟುಂಬ ಥೈಲ್ಯಾಂಡ್ಗೆ ಸ್ಥಳಾಂತರಗೊಂಡಿತು. 9ನೇ ವಯಸ್ಸಿನಲ್ಲಿ, ಅವರು ತಮ್ಮ ಸಹೋದರನೊಂದಿಗೆ ವಾಷಿಂಗ್ಟನ್‌ನ ಟಕೋಮಾದಲ್ಲಿ ಚಿಕ್ಕಪ್ಪನ ಮನೆಗೆ ತೆರಳಿದರು.

ಅಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಒನಿಡಾ, ಕೆಂಟುಕಿಯಲ್ಲಿರುವ ಒನಿಡಾ ಎಲಿಮೆಂಟರಿ ಶಾಲೆಯಲ್ಲಿ ಪೂರ್ಣಗೊಳಿಸಿದರು. ಬಳಿಕ ಪೋರ್ಟ್ಲ್ಯಾಂಡ್ ಬಳಿಯ ಅಲೋಹಾ ಪ್ರೌಢಶಾಲೆಯಿಂದ ಪದವಿ ಪಡೆದರು. ಯೌವನದಲ್ಲಿ ಹುವಾಂಗ್ ಡೆನ್ನಿಯ ರೆಸ್ಟೋರೆಂಟ್‌ನಲ್ಲಿ ಸರ್ವರ್ ಆಗಿ ಕೆಲಸ ಮಾಡುತ್ತಿದ್ದರು.  

1993 ರಲ್ಲಿ, ಹುವಾಂಗ್ ಕ್ರಿಸ್ ಮಲಚೋವ್ಸ್ಕಿ ಮತ್ತು ಕರ್ಟಿಸ್ ಬ್ರೀಮ್ ಅವರೊಂದಿಗೆ ಎನ್ವಿಡಿಯಾ ಕಂಪನಿಯನ್ನು ಸ್ಥಾಪಿಸಿದರು. 2007 ರಲ್ಲಿ, ಅವರು ಯುನೈಟೆಡ್ ಸ್ಟೇಟ್ಸ್ನಲ್ಲಿ 61 ನೇ ಅತಿ ಹೆಚ್ಚು ಸಂಭಾವನೆ ಪಡೆಯುವ CEO ಆಗಿ ಖ್ಯಾತಿ ಪಡೆದರು. ಆ ಸಮಯದಲ್ಲಿ ಅವರು 24.6 ಮಿಲಿಯನ್ ಡಾಲರ್ ವೇತನವನ್ನು ಪಡೆಯುತ್ತಿದ್ದರು ಎಂಬುದು ಗಮನಾರ್ಹ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link