Oats Idli Recipe: ಬೆಳಗಿನ ಉಪಾಹಾರಕ್ಕೆ ಮಾಡಿ ಓಟ್ಸ್ ಇಡ್ಲಿ.. ರುಚಿ ಜೊತೆಗೆ ತೂಕ ಕೂಡ ಕಡಿಮೆಯಾಗುವುದು
ಓಟ್ಸ್ ಆರೋಗ್ಯಕರ ಆಯ್ಕೆಯಾಗಿದೆ. ಓಟ್ಸ್ ಇಡ್ಲಿಯನ್ನು ಬೆಳಗಿನ ಉಪಾಹಾರವಾಗಿ ಸೇವಿಸಬಹುದು. ಓಟ್ಸ್ ಇಡ್ಲಿಯನ್ನು ಹೇಗೆ ಮಾಡುವುದು ಇಲ್ಲಿದೆ ನೋಡಿ...
ಅರ್ಧ ಕಪ್ ಓಟ್ಸ್ ತೆಗೆದುಕೊಂಡು ಅದರಲ್ಲಿ ಅರ್ಧ ಕಪ್ ಉದ್ದಿನ ಬೇಳೆ ಹಿಟ್ಟು ಅಥವಾ ರವೆ ಹಾಕಿ ಕಲಿಸಿ. ಈಗ ನೀರು ಮತ್ತು ಮೊಸರು ಹಾಕುತ್ತ ಹಿಟ್ಟನ್ನು ತಯಾರಿಸಿ. ಹಿಟ್ಟು ರೆಡಿಯಾದ ಬಳಿಕ 15 ನಿಮಿಷಗಳ ಕಾಲ ಮುಚ್ಚಿಡಿ.
ಓಟ್ಸ್ ಇಡ್ಲಿಗೆ ಕೆಲವು ತರಕಾರಿಗಳನ್ನು ಸೇರಿಸಿದರೆ ರುಚಿ ಹೆಚ್ಚಾಗುತ್ತದೆ. 15 ನಿಮಿಷಗಳ ಬಳಿಕ ಕ್ಯಾರೆಟ್ ತುರಿ, ಕ್ಯಾಪ್ಸಿಕಂ, ಹಸಿರು ಮೆಣಸಿನಕಾಯಿ, ಶುಂಠಿ ತುರಿ ಹಾಕಿ ಹಿಟ್ಟನ್ನು ಚೆನ್ನಾಗಿ ಕಲಿಸಿ.
ಈಗ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಹಿಟ್ಟು ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಸೇರಿಸಿ. ಇಡ್ಲಿ ಬ್ಯಾಟರ್ ಹದಕ್ಕೆ ತನ್ನಿ. ಈಗ ಸ್ವಲ್ಪ ತುಪ್ಪವನ್ನು ಇಡ್ಲಿ ತಟ್ಟೆ ಅಥವಾ ಬಟ್ಟಲಿಗೆ ಹಚ್ಚಿ.
1-2 ಚಮಚ ಹಿಟ್ಟನ್ನು ಹಾಕಿ ಮತ್ತು ಬೇಯಿಸಿ. ಅಕ್ಕಿ ಇಡ್ಲಿಯನ್ನು ಬೇಯಿಸಲು ತೆಗೆದುಕೊಳ್ಳುವ ಸಮಯದಷ್ಟೇ ಓಟ್ಸ್ ಇಡ್ಲಿ ತಯಾರಿಸಲು ಬೇಕು.
15 ನಿಮಿಷಗಳಲ್ಲೇ ರುಚಿಯಾದ ಓಟ್ಸ್ ಇಡ್ಲಿ ಸವಿಯಲು ಸಿದ್ಧವಾಗಿರುತ್ತದೆ. ಇದನ್ನು ತೆಂಗಿನ ಕಾಯಿ ಚಟ್ನಿ ಜೊತೆ ಸವಿಯಬಹುದು.