ವೃದ್ದಾಪ್ಯ ಪಿಂಚಣಿಯನ್ನು 3,500 ರೂ.ಗೆ ಏರಿಸಿ ಸರ್ಕಾರ ಆದೇಶ ! ಅಂಗವೈಕಲ್ಯ ಹೊಂದಿರುವವರ ಸಾಮಾಜಿಕ ಭದ್ರತಾ ಪಿಂಚಣಿಯಲ್ಲಿಯೂ ಹೆಚ್ಚಳ
ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಭತ್ಯೆಯನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೊಸ ನಿರ್ಧಾರದ ಪ್ರಕಾರ, 80 ವರ್ಷ ಮತ್ತು ಮೇಲ್ಪಟ್ಟವರ ಮತ್ತು ಶೇಕಡಾ 80 ರಷ್ಟು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಪಿಂಚಣಿ ಭತ್ಯೆಯನ್ನು ಹೆಚ್ಚಿಸಲಾಗಿದೆ.
ಹೊಸ ಮಾರ್ಗಸೂಚಿಗಳ ಪ್ರಕಾರ ಮೇಲೆ ತಿಳಿಸಿದ ವರ್ಗಗಳಿಗೆ ಮಾಸಿಕ ಪಿಂಚಣಿಯನ್ನು 3,500 ರೂ.ಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳ ಈ ತಿಂಗಳಿನಿಂದಲೇ ಜಾರಿಗೆ ಬರಲಿದೆ.
ಮಧು ಬಾಬು ಪಿಂಚಣಿ ಯೋಜನೆ ಮತ್ತು ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ ಎರಡರ ಅಡಿಯಲ್ಲಿ ಈ ಹೆಚ್ಚಳವನ್ನು ಒಡಿಶಾ ಸರ್ಕಾರ ಘೋಷಿಸಿದೆ.
80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಅರ್ಹ ಪಿಂಚಣಿದಾರರು ಅಥವಾ ಶೇಕಡಾ 80 ಮತ್ತು ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವ ಅಂಗವಿಕಲರ ಪಿಂಚಣಿ ಮೊತ್ತವನ್ನು ತಿಂಗಳಿಗೆ 3500/- ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಒಡಿಶಾ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಇದಕ್ಕೂ ಮೊದಲು ಒಡಿಶಾ ಸರ್ಕಾರವು ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿಯಲ್ಲಿ ಗಣನೀಯ ಹೆಚ್ಚಳವನ್ನು ಘೋಷಿಸಿತು.ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಜೈಲು ಸೇರಿದ್ದ ಸ್ವಾತಂತ್ರ್ಯ ಹೋರಾಟಗಾರರ ಮಾಸಿಕ ಪಿಂಚಣಿಯನ್ನು 10 ಸಾವಿರ ರೂಪಾಯಿಗೆ ಏರಿಸಿತ್ತು.
ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಜೈಲು ಸೇರದವರ ಪಿಂಚಣಿಯನ್ನು 9,000 ರೂ.ನಿಂದ 15,000 ರೂ.ಗೆ ಹೆಚ್ಚಿಸಲಾಗಿತ್ತು.