ಶ್ರೀಕೃಷ್ಣನಿಗೆ ಪ್ರಿಯವಾದ ಈ ಪಂಚ ವಸ್ತುಗಳನ್ನು ಜನ್ಮಾಷ್ಟಿಮಿ ದಿನ ತಪ್ಪದೆ ಅರ್ಪಿಸಿ
ಬೆಣ್ಣೆ ಮತ್ತು ಸಕ್ಕರೆ ಮಿಠಾಯಿಗಳು ಶ್ರೀಕೃಷ್ಣನಿಗೆ ಬಹಳ ಪ್ರಿಯವಾದದ್ದು. ಶ್ರೀ ಕೃಷ್ಣನು ತನ್ನ ಬಾಲ್ಯದಲ್ಲಿ ಬೆಣ್ಣೆ ಮತ್ತು ಸಕ್ಕರೆ ಮಿಠಾಯಿಗಳನ್ನು ಕದಿಯುತ್ತಿದ್ದನು ಎಂದು ಅನೇಕ ಪುರಾಣಗಳಲ್ಲಿ ಹೇಳಲಾಗಿದೆ. ಆದುದರಿಂದ ಜನ್ಮಾಷ್ಟಮಿಯ ಪೂಜೆಯಲ್ಲಿ ಶ್ರೀಕೃಷ್ಣನಿಗೆ ಬೆಣ್ಣೆ ಮತ್ತು ಸಕ್ಕರೆ ಮಿಠಾಯಿಯನ್ನು ಅರ್ಪಿಸಿ.
ಕೃಷ್ಣ ಪರಮಾತ್ಮನಿಗೆ ನವಿಲು ಗರಿ ತುಂಬಾ ಪ್ರಿಯವಾಗಿದೆ. ಅವನ ಕಿರೀಟದಲ್ಲಿ ನವಿಲು ಗರಿ ಇದ್ದೇ ಇರುತ್ತದೆ. ಲಡ್ಡು ಗೋಪಾಲನಿಗೆ ನವಿಲು ಗರಿಗಳನ್ನು ಅರ್ಪಿಸಿದರೆ ವಿಶೇಷವಾದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ. ನವಿಲು ಗರಿಯು ನಕಾರಾತ್ಮಕತೆಯನ್ನು ಹೋಗಲಾಡಿಸುತ್ತದೆ ಮತ್ತು ಅದನ್ನು ಮನೆಯಲ್ಲಿ ಇಡುವುದು ತುಂಬಾ ಪ್ರಯೋಜನಕಾರಿ ಎಂದು ನಂಬಲಾಗಿದೆ.
ಜನ್ಮಾಷ್ಟಮಿಯ ದಿನದಂದು, ನೀವು ಕೊತ್ತಂಬರಿ ಬೀಜಗಳ ಪ್ರಸಾದವನ್ನು ಪೂಜೆಯಲ್ಲಿ ಸೇರಿಸಬೇಕು. ಏಕೆಂದರೆ ಕೊತ್ತಂಬರಿ ಸೊಪ್ಪು ಶ್ರೀಕೃಷ್ಣನಿಗೆ ತುಂಬಾ ಪ್ರಿಯವಾಗಿದೆ. ಕೊತ್ತಂಬರಿಯು ಸಂಪತ್ತಿಗೆ ಸಂಬಂಧಿಸಿದೆ ಮತ್ತು ಶ್ರೀಕೃಷ್ಣನಿಗೆ ಕೊತ್ತಂಬರಿ ಬೀಜಗಳನ್ನು ಅರ್ಪಿಸುವುದರಿಂದ ಹಣದ ಕೊರತೆ ಉಂಟಾಗುವುದಿಲ್ಲ ಎಂದು ನಂಬಲಾಗಿದೆ.
ಕೊಳಲು ಎಂದರೆ ಕೃಷ್ಣ, ಕೃಷ್ಣನೆಂದರೆ ಕೊಳಲು ಎಂಬ ಮಾತಿದೆ. ಕೊಳಲು ಎಂದರೆ ಶ್ರೀ ಕೃಷ್ಣನಿಗೆ ಅತ್ಯಂತ ನೆಚ್ಚಿನ ವಸ್ತು. ನಂಬಿಕೆಯ ಪ್ರಕಾರ, ಲಡ್ಡು ಗೋಪಾಲನ ಜನ್ಮಾಷ್ಟಮಿಯ ಪೂಜೆಯಲ್ಲಿ ಕೊಳಲನ್ನು ಇಡುವುದರಿಂದ ವಿಶೇಷ ಆಶೀರ್ವಾದವನ್ನು ಲಭಿಸುತ್ತದೆ.
ಪುರಾಣಗಳ ಪ್ರಕಾರ, ಕೃಷ್ಣನು ಬಾಲ್ಯದಿಂದಲೂ ಗೋವಿನ ಸೇವೆ ಮಾಡುತ್ತಿದ್ದನು. ಗೋಮಾತೆಯ ಬಗ್ಗೆ ವಿಶೇಷವಾದ ಬಾಂಧವ್ಯವನ್ನು ಹೊಂದಿದ್ದವನು. ಆದ್ದರಿಂದ ಜನ್ಮಾಷ್ಟಮಿಯ ಪೂಜೆಯಲ್ಲಿ ಗೋಮಾತೆಯ ವಿಗ್ರಹವನ್ನು ಇಡಬೇಕು. ಇಲ್ಲವೇ ಹಸುವಿಗೆ ಪ್ರಸಾದವನ್ನು ಅರ್ಪಿಸಬೇಕು. ಹೀಗೆ ಮಾಡಿದರೆ ಕೃಷ್ಣನ ಆಶೀರ್ವಾದಕ್ಕೆ ನಾವೆಲ್ಲರೂ ಪ್ರಾಪ್ತರಾಗುತ್ತೇವೆ.