ನವರಾತ್ರಿಯಲ್ಲಿ ದುರ್ಗಾ ಮಾತೆಗೆ ಈ ರೀತಿ ದೀಪ ಬೆಳಗಿಸಿದರೆ ಸುಖ-ಸಂಪತ್ತಿಗೆ ಎಂದಿಗೂ ಕೊರತೆಯಿಲ್ಲ

Mon, 09 Oct 2023-1:19 pm,

2023ರ ಶರದ್ ನವರಾತ್ರಿ  ಅಕ್ಟೋಬರ್ 15, 2023ರಿಂದ ಆರಂಭವಾಗಲಿದೆ. ನವರಾತ್ರಿಯಲ್ಲಿ ನವ ದಿನವೂ ದುರ್ಗಾ ಮಾತೆಯನ್ನು ಹಲವು ರೂಪಗಳಲ್ಲಿ ಪೂಜಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವರಾತ್ರಿಯಲ್ಲಿ ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳುವುದರಿದ ಅಂತಹ ಮನೆಯಲ್ಲಿ ಸುಖ-ಸಂತೋಷಕ್ಕೆ ಎಂದಿಗೂ ಕೊರತೆ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ. 

ಹೌದು, ನವರಾತ್ರಿಯಲ್ಲಿ ದುರ್ಗಾ ಮಾತೆಗೆ ಕೆಲವು ವಸ್ತುಗಳನ್ನು ಅರ್ಪಿಸುವುದರಿಂದ ಹಾಗೂ ತಾಯಿ ದುರ್ಗೆ, ತಾಯಿ ಚಾಮುಂಡೇಶ್ವರಿಯ ಮುಂದೆ ದೀಪ ಬೆಳಗಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟರೆ ಅಂತಹ ಮನೆಯಲ್ಲಿ ಎಂದಿಗೂ ಕೂಡ ಸುಖ-ಸಂತೋಷಕ್ಕೆ ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಅಂತಹ ಕ್ರಮಗಳು ಯಾವುವು ಎಂದು ನೋಡುವುದಾದರೆ... 

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ನವರಾತ್ರಿಯಲ್ಲಿ ಮಾತೆ ದುರ್ಗೆಗೆ ಅಖಂಡ ಜ್ಯೋತಿ ಬೆಳಗಿಸುವುದನ್ನು ಅತ್ಯಂತ ಮಂಗಳಕರ ಎಂದು ಭಾವಿಸಲಾಗಿದೆ. 

ಉತ್ತರ ದಿಕ್ಕು:  ಮಾತೆ ಚಾಮುಂಡೇಶ್ವರಿಯ ಹೆಸರಿನಲ್ಲಿ ದೀಪ ಬೆಳಗಿಸುವಗ ಉತ್ತರ ದಿಕ್ಕಿನಲ್ಲಿ ದೀಪ ಬೆಳಗುವುದನ್ನು ತುಂಬಾ ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ ದಿಕ್ಕಿನಲ್ಲಿ ದೀಪ ಬೆಳಗುವುದರಿಂದ ವ್ಯಕ್ತಿಯನ್ನು ಅಕಾಲಿಕ ಮರಣದಿಂದ ಪಾರುಮಾಡಬಹುದು ಎಂಬ ನಂಬಿಕೆಯೂ ಇದೆ.   

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತಾಯಿ ದುರ್ಗೆಯ ಹೆಸರಿನಲ್ಲಿ ಮನೆಯ ಪೂರ್ವ ದಿಕ್ಕಿನಲ್ಲಿ ದೀಪ ಬೆಳಗುವುದರಿಂದ ಸಂಪತ್ತು ವೃದ್ಧಿಯಾದರೆ, ಪಶ್ಚಿಮ ದಿಕ್ಕಿನಲ್ಲಿ ದೀಪ ಬೆಳಗುವುದರಿಂದ ಸಮೃದ್ಧಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. 

ಧಾರ್ಮಿಕ ನಂಬಿಕೆಗಳ ಪ್ರಕಾರ, ನಾವು ತಾಯಿ ದುರ್ಗೆಯ ಹೆಸರಿನಲ್ಲಿ ದೀಪ ಬೆಳಗಿಸುವಾಗ ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನಲ್ಲಿ ದೀಪವನ್ನು ಬೆಳಗಿಸಬಾರದು ಎಂದು ನಂಬಲಾಗಿದೆ. 

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ನವರಾತ್ರಿಯಲ್ಲಿ ದುರ್ಗಾ ಮಾತೆಗೆ ಬೆಣ್ಣೆಯನ್ನು ಅರ್ಪಿಸುವುದರಿಂದ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಎನ್ನಲಾಗುವುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link