ರತನ್ ಟಾಟಾ ಉತ್ತರಾಧಿಕಾರಿಯ ಅಧಿಕೃತ ಘೋಷಣೆ :ಈ ಐರಿಶ್ ಪ್ರಜೆಯ ಹೆಗಲಿಗೆ ಟಾಟಾ ಸಾಮ್ರಾಜ್ಯದ ಜವಾಬ್ದಾರಿ
140 ಕೋಟಿ ಭಾರತೀಯರ ಹೃದಯವನ್ನು ಆಳಿದ್ದ ರತನ್ ಟಾಟಾ ಇದೀಗ ನಮ್ಮೊಂದಿಗಿಲ್ಲ.ಉದ್ಯಮಿಯಾಗಿ ಮಾತ್ರವಲ್ಲದೆ ಅವರ ದಾನ, ಔದಾರ್ಯ ಮತ್ತು ದಯೆಯ ಸ್ವಭಾವದಿಂದಾಗಿ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದವರು.
ರತನ್ ಟಾಟಾ ನಿಧನದ ನಂತರ,ಟಾಟಾ ಟ್ರಸ್ಟ್‌ನ ಅಧಿಕಾರವನ್ನು ಯಾರು ವಹಿಸಿಕೊಳ್ಳುತ್ತಾರೆ ಎನ್ನುವ ರಹಸ್ಯ ಬಹಿರಂಗವಾಗಿದೆ. ರತನ್ ಟಾಟಾ ಅವರ ಉತ್ತರಾಧಿಕಾರಿಗಾಗಿ ನಡೆಯುತ್ತಿದ್ದ ಹುಡುಕಾಟ ಪೂರ್ಣಗೊಂಡಿದೆ.ಟಾಟಾ ಸಾಮ್ಯಾಜ್ಯದ ಉತ್ತರಾಧಿಕಾರಿ ಹೆಸರು ಅಧಿಕೃತವಾಗಿ ಘೋಷಣೆಯಾಗಿದೆ.
ನೋಯೆಲ್ ಟಾಟಾ ಇನ್ನು ಮುಂದೆ ಟಾಟಾ ಟ್ರಸ್ಟ್‌ನ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಟಾಟಾ ಟ್ರಸ್ಟ್‌ನ ಮಹತ್ವದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
67 ವರ್ಷದ ನೋಯೆಲ್ ಟಾಟಾ, ರತನ್ ಟಾಟಾ ಮಲಸಹೋದರ. ರತನ್ ಟಾಟಾ ಅವರ ಪರಂಪರೆಯನ್ನು ಅವರ ಸಹೋದರ ನೋಯೆಲ್ ಟಾಟಾ ನಿರ್ವಹಿಸಲಿದ್ದಾರೆ.
ನೋಯೆಲ್ ಟಾಟಾ ಅವರು ಟಾಟಾ ಇಂಟರ್‌ನ್ಯಾಶನಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಟಾಟಾ ಇಂಟರ್‌ನ್ಯಾಶನಲ್ ಟಾಟಾ ಗ್ರೂಪ್‌ನ ಅಂಗವಾಗಿದ್ದು, ವಿದೇಶದಲ್ಲಿ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡುತ್ತಿದೆ.
ನೋಯೆಲ್ ಟಾಟಾ ಅವರು ಸಸೆಕ್ಸ್ ವಿಶ್ವವಿದ್ಯಾಲಯದಿಂದ (UK) ಪದವಿ ಪಡೆದಿದ್ದದು, ಫ್ರಾನ್ಸ್‌ನಲ್ಲಿ INSEAD ನಿಂದ ಇಂಟರ್ನ್ಯಾಷನಲ್ ಎಕ್ಸಿಕ್ಯೂಟಿವ್ ಪ್ರೋಗ್ರಾಂ (IEP) ಅನ್ನು ಪೂರ್ಣಗೊಳಿಸಿದರು. ನೋಯೆಲ್ ಟಾಟಾ ಈ ಹಿಂದೆ ನೆಸ್ಲೆ, ಯುಕೆ ಜೊತೆ ಕೆಲಸ ಮಾಡಿದ್ದರು.
ನೋಯೆಲ್ ಐರಿಶ್ ಪ್ರಜೆಯಾಗಿದ್ದು,ಟಾಟಾ ಸನ್ಸ್‌ನಲ್ಲಿ ಅತಿ ದೊಡ್ಡ ಷೇರುದಾರರಾಗಿದ್ದ ಪಲ್ಲೊಂಜಿ ಮಿಸ್ತ್ರಿಯವರ ಪುತ್ರಿ ಆಲೂ ಮಿಸ್ತ್ರಿ ಅವರನ್ನು ವಿವಾಹವಾಗಿದ್ದಾರೆ.ಅವರ ಮೂವರು ಮಕ್ಕಳೇ ಲೇಹ್,ಮಾಯಾ ಮತ್ತು ನೆವಿಲ್ಲೆ.