ಈ ತರಕಾರಿಯನ್ನು ನೀರಿನಲ್ಲಿ ನೆನೆಸಿಟ್ಟು ಊಟಕ್ಕೆ ಹತ್ತು ನಿಮಿಷ ಮುನ್ನ ಸೇವಿಸಿ ! 45 ದಿನಗಳವರೆಗೆ ಬ್ಲಡ್ ಶುಗರ್ ನಾರ್ಮಲ್ ಆಗಿ ಉಳಿಯುತ್ತದೆ !
ಮಧುಮೇಹ ರೋಗಿಗಳಿಗೆ ಈ ನೀರು ಸಂಜೀವಿನಿ ಎಂದರೆ ತಪ್ಪಾಗದು.ಬ್ಲಡ್ ಶುಗರ್ ಅನ್ನು ನಾರ್ಮಲ್ ಮಾಡಬೇಕಾದರೆ ದಿನಕ್ಕೆ ಒಮ್ಮೆ ಈ ನೀರನ್ನು ಸೇವಿಸಿದರೆ ಸಾಕು. ಅದು ಕೂಡಾ ಊಟಕ್ಕೆ ಮುಂಚೆ.
ಬೆಂಡೆಕಾಯಿಯಲ್ಲಿ ಕರಗಬಲ್ಲ ಮತ್ತು ಕರಗದ ಫೈಬರ್ ಅಡಗಿದೆ.ಇದು ಕಾರ್ಬೋಹೈಡ್ರೇಟ್‌ಗಳ ಜೀರ್ಣಕ್ರಿಯೆಯನ್ನು ವಿಳಂಬಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ಬ್ಲಡ್ ಶುಗರ್ ಏರಿಕೆಯಾಗದಂತೆ ತಡೆಯುವುದು ಸಾಧ್ಯವಾಗು ತ್ತದೆ.
ಬೆಂಡೆಕಾಯಿ ನೀರನ್ನು ಕುಡಿಯುವುದು ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿದ್ದಾಗ,ರಕ್ತದಲ್ಲಿನ ಸಕ್ಕರೆ ಮಟ್ಟವು ನೈಸರ್ಗಿಕವಾಗಿ ನಿಯಂತ್ರಣದಲ್ಲಿರುತ್ತದೆ.
ಬೆಂಡೆಕಾಯಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಹೊಂದಿದೆ.ಕಡಿಮೆ GI ಹೊಂದಿರುವ ಆಹಾರಗಳು ಬ್ಲಡ್ ಶುಗರ್ ಲೆವೆಲ್ ಹಠಾತ್ ಸ್ಪೈಕ್ ಅನ್ನು ಉಂಟುಮಾಡುವುದಿಲ್ಲ.
ಇನ್ಸುಲಿನ್ ಸೂಕ್ಷ್ಮತೆಯು ಮಧುಮೇಹಿಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಬೆಂಡೆಕಾಯಿ ನೀರಿನ ನಿಯಮಿತ ಸೇವನೆಯು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಬೆಂಡೆಕಾಯಿ ನೀರನ್ನು ತಯಾರಿಸಲು, ಬೆಂಡೆಕಾಯಿ ತುದಿಗಳನ್ನು ತೆಗೆದು ಅದನ್ನು ಅರ್ಧಕ್ಕೆ ಕತ್ತರಿಸಿ ಒಂದು ಜಾರ್‌ನಲ್ಲಿ ಎರಡರಿಂದ ಮೂರು ಕಪ್ ನೀರು ತುಂಬಿಸಿ ನೆನೆ ಹಾಕಿ. ಈ ನೀರನ್ನು ಊಟಕ್ಕೆ ಮುಂಚೆ ಅಥವಾ ಬೆಳಿಗ್ಗೆ ಕುಡಿಯಬೇಕು.
ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.