ಈ ವಿಶೇಷ ದಿನದಂದು ಲಾಂಚ್ ಆಗಲಿದೆ Ola Electric ಸ್ಕೂಟರ್
ನಮ್ಮ ಸ್ಕೂಟರ್ ಅನ್ನು ರಿಸರ್ವ್ ಮಾಡಿರುವುದಕ್ಕೆ ಧನ್ಯವಾದಗಳು ಎಂದು ಓಲಾ ಸಿಇಒ ಭವಿಶ್ ಅಗರ್ವಾಲ್ ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ. ಆಗಸ್ಟ್ 15 ರಂದು ಓಲಾ ಸ್ಕೂಟರ್ ಬಿಡುಗಡೆ ಕಾರ್ಯಕ್ರಮವನ್ನುಹಮ್ಮಿಕೊಳ್ಳಲು ಯೋಜಿಸುತ್ತಿರುವ ಬಗ್ಗೆಯೂ ಅವರು ಹೇಳಿದ್ದಾರೆ.
ಓಲಾದ ಸ್ಕೂಟರ್‌ಗಳಗಾಗಿ ಜುಲೈನಲ್ಲಿ ಬುಕಿಂಗ್ ಆರಂಭಿಸಲಾಗಿತ್ತು. ಕೆಲವೇ ಗಂಟೆಗಳಲ್ಲಿ ಬುಕಿಂಗ್ ಸಂಖ್ಯೆ ಲಕ್ಷಗಳನ್ನು ತಲುಪಿತು. ಈ ಸ್ಕೂಟರಿನ ಬುಕ್ಕಿಂಗ್ ಅನ್ನು ಕೇವಲ 499 ರೂಪಾಯಿಗಳಲ್ಲಿ ಆರಂಭಿಸಲಾಯಿತು. ಬುಕಿಂಗ್ ಆರಂಭಿಸಿದ ಕೇವಲ 24 ಗಂಟೆಗಳಲ್ಲಿ, ಕಂಪನಿಯು 1 ಲಕ್ಷಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದುಕೊಂಡಿದೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಓಲಾ ಎಲೆಕ್ಟ್ರಿಕ್ ತನ್ನ Series-S ಸ್ಕೂಟರ್ ಅನ್ನು 'ಡೈರೆಕ್ಟ್ -2 ಕನ್ಸೂಮರ್ ಮಾಡೆಲ್ ಮೂಲಕ ವಿತರಿಸಲಿದೆ. ಓಲಾ ಸ್ಕೂಟರ್ ನ ಡೋರ್ ಸ್ಟೆಪ್ ಡೆಲಿವರಿಗಾಗಿ ಓಲಾ ಎಲೆಕ್ಟ್ರಿಕ್ ಪ್ರತ್ಯೇಕ ಲಾಜಿಸ್ಟಿಕ್ಸ್ ವಿಭಾಗವನ್ನು ಆರಂಭಿಸುತ್ತಿದೆ.
ಈ ಸ್ಕೂಟರ್ ಅನ್ನು 10 ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗುವುದು. ಇದರ ಹೊರತಾಗಿ, ಅನೇಕ ವೈಶಿಷ್ಟ್ಯ ಗಳನ್ನೂ ಇದು ಒಳಗೊಂಡಿದೆ. ಇದರ ಸ್ಪೀಡ್ ಪ್ರತಿ ಗಂಟೆಗೆ 100ಕಿ.ಮಿಗಿಂತಲೂ ಹೆಚ್ಚಾಗಿದೆ. ಇದಲ್ಲದೆ, ಸಿಂಗಲ್ ಚಾರ್ಜ್‌ನಲ್ಲಿ 150 ಕಿಮೀ ವ್ಯಾಪ್ತಿಯನ್ನು ಕ್ರಮಿಸಲಿದೆ.
ಓಲಾದ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತಮಿಳುನಾಡಿನ ಪ್ಲಾಂಟ್ ನಲ್ಲಿ ತಯಾರಿಸಲಾಗುತ್ತಿದೆ. ಓಲಾದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಆಗುತ್ತಿದ್ದಂತೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೇಲೆ ವಿವಿಧ ರಾಜ್ಯಗಳು ನೀಡುವ ಸಬ್ಸಿಡಿ ಕೂಡ ಅದರ ಬೇಡಿಕೆಯನ್ನು ಹೆಚ್ಚಿಸುವಲ್ಲಿ ಕೆಲಸ ಮಾಡುತ್ತಿದೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾದ ನಂತರ, ಇದು TVS iQube, ಬಜಾಜ್ ಚೇತಕ್ ಎಲೆಕ್ಟ್ರಿಕ್, Ather 450X, Okinawa scooters ಮತ್ತು ಹೀರೋ ಎಲೆಕ್ಟ್ರಿಕ್‌ಗಳೊಂದಿಗೆ ಸ್ಪರ್ಧಿಸಲಿದೆ.