Ola EV Scooter: ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಓಲಾ

Sun, 20 Nov 2022-3:52 pm,

Ola S1 Airನ ಪ್ರಮುಖ ವೈಶಿಷ್ಟ್ಯವೆಂದರೆ MoveOS 3 ಮತ್ತು ಇತ್ತೀಚಿನ ಆಪರೇಟಿಂಗ್ ಸಿಸ್ಟಮ್ ಸಾಮೀಪ್ಯ ಆಧಾರಿತ ಅನ್‌ಲಾಕಿಂಗ್, ಡಿಜಿಟಲ್ ಕೀ ಹಂಚಿಕೆ, ಸುಧಾರಿತ ರೀಜೆನ್ ಬ್ರೇಕಿಂಗ್ ಮತ್ತು ಡಾಕ್ಯುಮೆಂಟ್ ವೈಶಿಷ್ಟ್ಯಗಳಂತಹ ಹೊಸ ವಿಶೇಷತೆಗಳನ್ನು ಹೊಂದಿದೆ.

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕೋರಲ್ ಗ್ಲಾಮ್, ಜೆಟ್ ಬ್ಲಾಕ್, ಲಿಕ್ವಿಡ್ ಸಿಲ್ವರ್, ನಿಯೋ ಮಿಂಟ್ ಮತ್ತು Porcelain Whiteನಂತಹ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ.

Ola S1 Air ಇವಿ ಸ್ಕೂಟರ್ ಕಂಪನಿಯ ಇತ್ತೀಚಿನ MoveOS 3ಯನ್ನು ಹೊಂದಿದ್ದು, 76km ವ್ಯಾಪ್ತಿಯನ್ನು ಹೊಂದಿದೆ ಎಂದು ಹೇಳಲಾಗಿದೆ.

Ola ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯ ಮೇಲೆ ಗ್ರಾಹಕರಿಗೆ ವಿಶೇಷ ರಿಯಾಯಿತಿ ದೊರೆಯಲಿದೆ. ವಿಶೇಷ ದಿನಗಳಲ್ಲಿ ಓಲಾ ಕಂಪನಿಯು ತನ್ನ ಇವಿ ಸ್ಕೂಟರ್‍ಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್‌ನ ವಿತರಣೆ 2023ರ ಏಪ್ರಿಲ್ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ. ಅಂದರೆ ಇದೀಗ ಮುಂಗಡವಾಗಿ ಬುಕ್ ಮಾಡುವ ಗ್ರಾಹಕರು 2023ರವರೆಗೆ ಕಾಯಬೇಕಾಗುತ್ತದೆ.

Ola S1 Air ಕಂಪನಿಯ 3ನೇ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದರೂ, ಸಂಸ್ಥೆಯು ಪ್ರಸ್ತುತ Ola S1 ಮತ್ತು Ola S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಗ್ರಾಹಕರಿಗೆ ವಿತರಿಸುತ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link